Sunday, September 23 , 2018 11:09 PMಖಾನಾಪುರ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಗೆ ಮಾತೃವಿಯೋಗ252

ಬೆಳಗಾವಿ : ಖಾನಾಪುರ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ತಾಯಿ ವಿಧಿವಶರಾಗಿದ್ದಾರೆ. ಅಂಜಲಿ ನಿಂಬಾಳಕರ್ ತಾಯಿ ರೂಪಾ ಪಾಟೀಲ್ ಅವರಿಗೆ 63 ವರ್ಷವಾಗಿದ್ದು, ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ಮೃತರು ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಇಂದು ಸಂಜೆ 4 ಗಂಟೆಗೆ ಮಹಾರಾಷ್ಟ್ರದ ಉಮರಗಾಂವ್ ನಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ. ಅಂಜಲಿ ನಿಂಬಾಳ್ಕರ್ ತಾಯಿ ನಿಧನಕ್ಕೆ ಹಲವು ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ.  ಖಾನಾಪುರ ವಿಧಾನಸಭಾ ಕ್ಷೇತ್ರಕ್ಕೆ ಆರು ದಶಕಗಳ ಸುದೀರ್ಘ ರಾಜಕೀಯ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಮಹಿಳಾ ಶಾಸಕಿಯಾಗಿ ಅಂಜಲಿ ನಿಂಬಾಳ್ಕರ್ ಆಯ್ಕೆಯಾಗಿದ್ದಾರೆ. ಮೊದಲಿನಿಂದಲೂ ಅರಿಶಿನ ಕುಂಕುಮ ಕಾರ್ಯಕ್ರಮದ ಮೂಲಕ ಮಹಿಳೆಯರ ಮನಗೆದ್ದಿದ್ದ ಅಂಜಲಿ ನಿಂಬಾಳ್ಕರ್ ಅವರೊಟ್ಟಿಗೆ ಅವರ ತಾಯಿ ರೂಪಾ ಪಾಟೀಲ್, ಕ್ಷೇತ್ರದ ಸಹಸ್ರಾರು ಮಹಿಳೆಯರು ಕೈ ಜೋಡಿಸಿದ್ದರು

error: Content is protected !!