Sunday, September 23 , 2018 11:09 PM











ನೇಣು ಬಿಗಿದ ಸ್ಥಿತಿಯಲ್ಲಿ ಅನುಮಾನಾಸ್ಪದ ರೀತಿ ಬ್ಯೂಟಿಷಿಯನ್ ಶವ ಪತ್ತೆ!



989

ಮೈಸೂರು: ಬ್ಯೂಟಿಷಿಯನ್ ಒಬ್ಬರು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಮೈಸೂರಿನ ದಾಮೋದರ ಬಡಾವಣೆಯಲ್ಲಿ ನಡೆದಿದೆ. ರಮ್ಯಾ(25) ಮೃತ ದುರ್ದೈವಿ. ಮೈಸೂರಿನ ಪ್ರತಿಷ್ಠಿತ ಹೋಟೆಲ್‍ನಲ್ಲಿ ರಮ್ಯಾ ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಇವರಿಗೆ 6 ವರ್ಷಗಳ ಹಿಂದೆ ಮೈಸೂರಿನ ಆನಂದ್ ಜೊತೆ ವಿವಾಹವಾಗಿತ್ತು. ಎರಡು ವರ್ಷಗಳಿಂದ ಪತಿಯಿಂದ ಬೇರೆಯಾಗಿ ರಮ್ಯಾ, ಸುನೀಲ್ ಎಂಬಾತನ ಜೊತೆ ವಾಸವಾಗಿದ್ದರು. ಇದೀಗ ಕಳೆದ ರಾತ್ರಿ ನೇಣು ಬಿಗಿದ ಸ್ಥಿತಿಯಲ್ಲಿ ರಮ್ಯಾ ಶವ ಪತ್ತೆಯಾಗಿದ್ದು, ಸುನೀಲ್ ಕೊಲೆ ಮಾಡಿದ್ದಾನೆ ಎಂದು ರಮ್ಯಾ ಪೋಷಕರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಈ ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!