Sunday, September 23 , 2018 12:25 AMಬಿಜೆಪಿ ಮುಖಂಡ ಮಹಮ್ಮದ್ ಅನ್ವರ್ ಕೊಲೆ ಬೆನ್ನಲೇ ಮತ್ತೊಬ್ಬ ಬಿಜೆಪಿ ಕಾರ್ಯಕರ್ತನ ಬರ್ಬರ ಹತ್ಯೆ!520
ಪುಣೆ : ಪುಣೆಯಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಿನ್ನೆ(ಜೂನ್ 26) ರಾತ್ರಿ ನಡೆದಿದೆ. ಪುಣೆಯ ವಾಡ್ಮುಖ್ವಾಡಿ ಎಂಬಲ್ಲಿ ಬಿಜೆಪಿ ಕಾರ್ಯಕರ್ತ ಬಾಲಾಜಿ ಕಾಂಬ್ಳೆ ಎಂಬುವವರನ್ನು ದುಷ್ಕರ್ಮಿಗಳು ಹೊಡೆದು ಸಾಯಿಸಿದ್ದಾರೆ. ಹತ್ಯೆಗೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆಬೀಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಜೂನ್ 22 ರಂದು ರಾತ್ರಿ ಚಿಕ್ಕಮಗಳೂರಿನ ಗೌರಿ ಕಾಲುವೆ ಎಂಬಲ್ಲಿ ಬಿಜೆಪಿ ಮುಖಂಡ ಮಹಮ್ಮದ್ ಅನ್ವರ್ ಎಂಬುವವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಅನ್ವರ್ ಚಿಕ್ಕಮಗಳೂರಿನ ಉಪ್ಪಾಳಿ ನಿವಾಸಿಯಾಗಿದ್ದು, ಹಳೇ ದ್ವೇಷದ ಹಿನ್ನೆಲೆಯಲ್ಲಿ ಇವರನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು. ಈ ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಬಿಜೆಪಿ ಮುಖಂಡನ ಹತ್ಯೆಯನ್ನು ಬಿಜೆಪಿ ನಾಯಕರು ಕಟು ಪದಗಳಿಂದ ನಿಂದಿಸಿದ್ದರು. ಆರೋಪಿಗಳನ್ನು ತಕ್ಷಣವೇ ಬಂಧಿಸುವಂತೆ ಆಕ್ರೋಶ ವ್ಯಕ್ತಪಡಿಸಿದ್ದರು.

error: Content is protected !!