Sunday, July 15 , 2018 2:45 AMಕಣ್ಣೂರು ಮಸೀದಿ ಬಳಿ ಸರಣಿ ಅಪಘಾತ: ಓರ್ವ ಮೃತ್ಯು, ಮೂವರಿಗೆ ಗಾಯ388

ಮಂಗಳೂರು: ಅಡ್ಯಾರ್-ಕಣ್ಣೂರು ರಸ್ತೆಯ ಕಣ್ಣೂರು ಮಸೀದಿ ಬಳಿ ಸರಣಿ ಅಪಘಾತ ಸಂಭವಿಸಿ ಓರ್ವ ಮೃತಪಟ್ಟಿದ್ದು, ಮೂವರು ಗಾಯಗೊಂಡಿರುವ ಘಟನೆ ನಡೆದಿದೆ. ಮೃತಪಟ್ಟ ಯುವಕನನ್ನು ಫಾರೂಕ್(೨೬) ಎಂದು ಗುರುತಿಸಲಾಗಿದೆ. ಘಟನೆಯ ವಿವರ: ಇಂದು ಮುಂಜಾನೆ ಅಡ್ಯಾರ್-ಕಣ್ಣೂರು ರಸ್ತೆಯ ಕಣ್ಣೂರು ಮಸೀದಿ ಬಳಿ ಕಾರೊಂದು ಏಕಾಏಕಿ ಹಿಂಬದಿಯಿಂದ ಗುದ್ದಿದ್ದು, ಈ ಪರಿಣಾಮ ಸರಣಿ ಅಪಘಾತ ಸಂಭವಿಸಿದೆ. ಈ ಅಪಘಾತದ ತೀವ್ರತೆಗೆ ಎರಡು ಕಾರುಗಳು ಹಾಗೂ ಬೈಕ್ ಹಾಗೂ ಆಟೋ ರಿಕ್ಷಾ ಸಂಪೂರ್ಣ ಜಖಂ ಆಗಿದೆ. ಘಟನೆಯಲ್ಲಿ ಓರ್ವ ಮೃತಪಟ್ಟು ಮೂವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಹನೀಫ್, ಸಫ್ರಾಝ್ ಹಾಗೂ ತೌಸೀಪ್ ಎಂದು ತಿಳಿದು ಬಂದಿದೆ. ಕಾರು ಚಾಲಕ ಹನೀಫ್ ಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!