Tuesday, May 22 , 2018 1:37 PM











ಬೆಳ್ತಂಗಡಿಯಲ್ಲಿ ಬಿಡುಗಡೆಯಾಯಿತ್ತು ಸುದ್ದಿ.! : ನಕಲಿ ಅಂಕಪಟ್ಟಿ ಜಾಲದಲ್ಲಿ ಅಸಲಿ ಪತ್ರಕರ್ತ.?! ಸಹಿತ ಮೂವರ ವಿರುದ್ಧ ಪ್ರಕರಣ ದಾಖಲು!



5619

ಮಂಗಳೂರು :  ನೀವು ದುಡ್ಡು ಕೊಟ್ಟರೇ ಸಾಕು!, ವಿದ್ಯಾರ್ಥಿಗಳಿಗೆ ಬೇಕಾದ ಅಂಕಪಟ್ಟಿ ಮಾಡಿಕೊಡುತ್ತ.?!. ಮೂರು ಜನ ಸೇರಿ, ವಿದ್ಯೆಯನ್ನೇ ಮೂರು ಕಾಸಿಗೆ ಹರಾಜು ಇಟ್ಟ ಆರೋಪವೊಂದು ಇದೀಗ ಬೆಳ್ತಂಗಡಿಯಲ್ಲಿ ಕೇಳಿ ಬಂದಿದೆ. ಈ ಸಂಬಂಧ ಮೂವರು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಹೌದು ಬೆಳ್ತಂಗಡಿ ಬಸ್ಸು ನಿಲ್ದಾಣದ ಸಮೀಪದಲ್ಲಿರುವ “ಅನುಗ್ರಹ ಟ್ರೈನಿಂಗ್ ಕಾಲೇಜಿ”ನ ಮುಖ್ಯಸ್ಥ ಹಾಗೂ ಪ್ರಿನ್ಸಿಪಲ್ ತಲ್ಲಾತ್, ಸಂಯೋಕ ಮುನೀರಾ.ಕೆ ಹಾಗೂ ಸಲಹೆಗಾರ ಅಶ್ರಫ್ ಆಲಿಕುಂಞ @ ಅಚ್ಚು ಮುಂಡಾಜೆ ಎಂಬ ಮೂವರು ವ್ಯಕ್ತಿಗಳ ವಿರುಧ್ಧ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಘಟನೆಯ ವಿವರ : ಬೆಳ್ತಂಗಡಿ ಬಸ್ಸು ನಿಲ್ದಾಣದ ಬಳಿ ಇರುವ “ಅನುಗ್ರಹ ಟ್ರೈನಿಂಗ್ ಕಾಲೇಜ್” ಎಂಬ ಹೆಸರಿನಲ್ಲಿ ಡಿಪ್ಲೋಮಾ ಉನ್ನತ ಪ್ಯಾಶನ್ ಡಿಸೈನಿಂಗ್, ಡಿಪ್ಲೋಮಾ ಬ್ಯೂಟಿಷಿಯನ್, ಡಿಪ್ಲೋಮಾ ಎ.ಸಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಎಂಬ ಕೋರ್ಸ್‌ಗಳನ್ನು ನಡೆಸುತ್ತಿದ್ದು, ದೂರುದಾರರು 2014ನೇ ಇಸವಿಯಲ್ಲಿ ಒಂದು ವರ್ಷದ ಪ್ಯಾಶನ್ ಡಿಸೈನ್ ಕೋರ್ಸ್‌ಗೆ ರೂ.15,000 ಶುಲ್ಕ ನೀಡಿ, ಪ್ರವೇಶಾತಿ ಪಡೆದುಕೊಂಡು ಕೋರ್ಸ್ ಪೂರ್ತಿಗೊಳಿಸಿದ್ದು, ಅದಕ್ಕೆ ಅಂಕಪಟ್ಟಿ ಹಾಗೂ ಸರ್ಟಿಪಿಕೇಟ್ ನೀಡಿದ್ದು, ಮಾತ್ರವಲ್ಲದೇ 2015ನೇ ಇಸವಿಯಲ್ಲಿ ದೂರುದಾರರು ಎಂ.ಬಿ.ಎ ಕೋರ್ಸ್ ಮಾಡುವಂತೆ ತಿಳಿಸಿ ರೂ.60,000 ಶುಲ್ಕವನ್ನು ಪಾವತಿಸಿ ಎಂಬಿಎ ಕೋರ್ಸ್ ಮಾಡಿದ್ದು, ಅದಕ್ಕೆ 2016ನೇ ಇಸವಿಯಲ್ಲಿ ಎಂಬಿಎ ಅಂಕಪಟ್ಟಿ ನೀಡಿದ್ದು, ಆ ಅಂಕಪಟ್ಟಿಯು ಯಾವುದೇ ಸರಕಾರದ ಮಾನ್ಯತೆ ಹೊಂದಿರುವ ಸಂಸ್ಥೆಯ ಅಂಕಪಟ್ಟಿಯಾಗಿಲ್ಲ ಹಾಗೂ ಆರೋಪಿಗಳು “ಇಂಡಿಯನ್ ಇನ್ಟಿಟ್ಯೂಟ್ ಆಫ್ ಬಿಸಿನೆಸ್ ಮ್ಯಾನೇಜ್‌ಮೆಂಟ್ ಆಂಡ್ ಸ್ಪಡೀಸ್, ಇಂಡಿಯನ್ ಬೋರ್ಡ್ ಆಪ್ ಎಕ್ಷಾಮಿನೇಶನ್ ಎಂಪ್ಲಾಯ್‌ಮೆಂಟ್ ಆಂಡ್ ಟ್ರೈನಿಂಗ್ ಜೆ.ಪಿ ನಗರ ಬೆಂಗಳೂರು ಎಂಬ ಹೆಸರಿನಲ್ಲಿ ಅಂಕಪಟ್ಟಿ ಸಿದ್ದಪಡಿಸಿ ನೀಡುತ್ತಿರುವುದ್ದಲ್ಲದೇ “ಇಂಡಿಯನ್ ಟೆಕ್ನಿಕಲ್ ಎಜುಕೇಶನ್ ಸೊಸೈಟಿ ಮುಂಬಯಿ ಹೆಸರಿನಲ್ಲಿ ಸಹಾ ಅಂಕಪಟ್ಟಿ ನೀಡಿ ವಿದ್ಯಾರ್ಥಿಗಳನ್ನು ಮೋಸಮಾಡಿ ಹಣ ಪಡೆದುಕೊಂಡು ಕಾಲೇಜು ನಡೆಸುತ್ತಿದ್ದಾರೆ ಎಂಬ ಆರೋಪದ ಮೇಲೆ ದೂರು ದಾಖಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!