Sunday, September 23 , 2018 3:42 AM











ಸೈನೆಡ್ ಮೋಹನ ಕಥೆಯಂತಿದೆ ಈ ಬಹುಪತ್ನಿ ವಲ್ಲಭನ ಪುರಾಣ!



3454

Posted by : Ranjith Madanthyar

ಮಂಗಳೂರು: ಸೈನೆಡ್ ಮೋಹನನನ್ನೇ ಹೋಲುವ ಮತ್ತೊಬ್ಬ ಸ್ತ್ರೀ ಲಂಪಟನ ಕಥೆ ಇದು.  ಬಡ ಮಹಿಳೆಯರನ್ನು ಹುರಿದು ಮುಕ್ಕುವ ಈ ಕಾಮುಕ ಪುರಾಣ ಬೆಚ್ಚಿ ಬೀಳಿಸುವಂತಿದೆ.

ಸುಳ್ಯದ ಮೂಲದ ದಿನೇಶ ಎಂಬಾತನೇ ಇದರ ಖಳನಾಯಕ.  ಈತ ಮದುವೆಯಾದದ್ದು ಅಧಿಕೃತವಾಗಿ ನಾಲ್ಕು. ಅನ್ಯ ಕೋಮಿನ ಸಹಿತ ಗರ್ಲ್‍ಫ್ರೆಂಡ್‍ಗಳು ಅಸಂಖ್ಯ ಎನ್ನುವುದು ಮೂಲಗಳ ಮಾಹಿತಿ. ಇದಕ್ಕಾಗಿಯೇ ಇತ ತನ್ನ ಪತ್ನಿ ಮತ್ತು ಗೆಳತಿಯರ ಜತೆ ಬೇರೆ ಬೇರೆ ಮೊಬೈಲ್ ನಂಬರ್‍ಗಳ ಮೂಲಕ ವ್ಯವಹರಿಸುತ್ತಿದ್ದ. ಹೀಗಾಗಿ ಈತನ ಬಳಿ  8 ಮೊಬೈಲ್ ನಂಬರ್‍ಗಳಿವೆ.

ಪಾಪದ ಬಡ ಯುವತಿಯರನ್ನು ಹುಡುಕಿ ಮದುವೆಯಾಗುವುದು ಈತನ ಖಯಾಲಿ. ಬಳಿಕ ಮರಳು ಮಾತಿನಲ್ಲಿ ಪತ್ನಿಯರನ್ನು ಒಲಿಸಿ, ಅವರ ಆಸ್ತಿಯನ್ನು ಲಪಟಾಯಿಸುವುದು, ಪತ್ನಿಯರ ಹೆಸರಲ್ಲಿ ಸಾಲ ಮಾಡಿ ವಾಹನ ಖರೀದಿಸುವುದು, ಪುಸಲಾಯಿಸಿ ಚಿನ್ನಾಭರಣವನ್ನು ಲೂಟಿ ಮಾಡುವುದು ಈತನ ಉದ್ಯೋಗ. ಚಿನ್ನಾಭರಣ ಆಸ್ತಿ ತಿಂದು ತೇಗಿದ ಬಳಿಕ ತನ್ನ ಬಲೆಗೆಬೀಳುವ ಇನ್ನೊಂದು ಮಿಕ ಹುಡುಕುತ್ತಾ ಹೋಗುವುದು ಈತನ ಜಾಯಮಾನ.

ಈತನ ನಿಜವಾದ ಹೆಸರು ದಿನೇಶ್ ! ಬೇರೆ ಬೇರೆ ಊರಲ್ಲಿ ಬೇರೆ ಬೇರೆ ಹೆಸರು ಇಟ್ಟುಕೊಂಡಿದ್ದಾನೆ. 25ನೇ ವರ್ಷದಲ್ಲಿ ಮೊದಲ ಮದುವೆಯಾದರೆ, 42ನೇ ವಯಸ್ಸಲ್ಲಿ ಕಾವಳಕಟ್ಟೆಯ ಮಹಿಳೆಯನ್ನು ಮದುವೆಯಾಗಿದ್ದಾನೆ !

ಕರಾವಳಿಯಲ್ಲಿ 22 ಮಂದಿ ಯುವತಿಯರನ್ನು ಮದುವೆಯಾಗಿ ಬಳಿಕ ಸೈನೆಡ್ ಕೊಟ್ಟು ಕೊಂದ ಸೈನೇಡ್ ಮೋಹನ ಭೀತಿಯನ್ನು ಹುಟ್ಟು ಹಾಕಿದ್ದ, ಇದೀಗ ಇವನ ಶಿಷ್ಯನ ರೀತಿಯಲ್ಲಿ ಬಡ ಯುವತಿಯರನ್ನೇ ಟಾರ್ಗೆಟ್ ಮಾಡುವ ದಿನೇಶನ ಮೇಲೆ ಯುವತಿಯರನ್ನು ಕೊಂದ ಆರೋಪ ಮಾತ್ರ ಸದ್ಯಕ್ಕೆ ಇಲ್ಲ.  ಈತ ಬೀಡಿ ಕಟ್ಟುವ ಯುವತಿಯರನ್ನು, ಎಳೆಯ ಪ್ರಾಯದಲ್ಲಿ ಗಂಡನನ್ನು ಕಳೆದುಕೊಂಡ ವಿಧವೆಯರು,  ಮದುವೆಯ ಪ್ರಾಯ ದಾಟಿದ ಮಹಿಳೆಯರನ್ನು ಬಲೆಗೆ ಬೀಳಿಸುತ್ತಾನೆ.

ಮೊದಲ ಪತ್ನಿ ಸುಳ್ಯದ ನಳಿನಾಕ್ಷಿ, ಎರಡನೇ ಪತ್ನಿ ಮುಳ್ಳೇರಿಯದ ಸುಮತಿ, ಮೂರನೇ ಪತ್ನಿ ಕಣ್ಣೂರಿನ ಮಧುರ, ಕಾವಳಕಟ್ಟೆಯ ಕಲಾವತಿ. ( ಎಲ್ಲರ ಹೆಸರು ಬದಲಿಸಲಾಗಿದೆ) ಈತನಿಗೆ ಅನೇಕ ಗರ್ಲ್ ಫ್ರೆಂಡ್ ಕೂಡಾ ಇದ್ದಾರೆ. ನಡುವೆ ವಿಧವೆ ಯನ್ನು ನಂಬಿಸಿ ಮದುವೆಯಾಗುವುದಾಗಿ ದೈಹಿಕ ಸಂಪರ್ಕ ಬೆಳೆಸಿ ಅವರಿಗೂ ಲಕ್ಷಗಟ್ಟಲೆ ಪಂಗನಾಮ ಹಾಕಿದ್ದಾನೆ. ಆಕೆಯೇ ಈಗಪೊಲೀಸರಿಗೆ ದೂರು ನೀಡಿದ್ದು.

ಮೊದಲ ಪತ್ನಿಯನ್ನು ಕೇರಳಕ್ಕೆ ಮಾರಾಟ ಮಾಡಲು ಯತ್ನಿಸಿದ್ದ ಹೀಗಾಗಿ ಸಹವಾಸವೇ ಬೇಡ ಎಂದು ಆಕೆ ಬೆದರಿ ಗಂಡನ ವಿರುದ್ಧ ದೂರು ನೀಡಲೂ ಕೂಡಾ ಹೋಗಿಲ್ಲ. ಸರಸ್ವತಿ ಎಂಬವರು ಈ ಕುರಿತು ಪೊಲೀಸ್ ಕಮಿಷನರ್ ಗೆ ದೂರು ನೀಡಿದ್ದರು. ಪೊಲೀಸ್ ಕಮಿಷನರ್ ಉಳ್ಳಾಲಕ್ಕೆ ದೂರು ಫಾರ್ವರ್ಡ್ ಮಾಡಿದ್ದರು. ಅಲ್ಲಿಗೆ ಹೋದರೆ ಈ ಪ್ರಕರಣ ಗ್ರಾಮಾಂತರ ವ್ಯಾಪ್ತಿಗೆ ಸೇರುತ್ತದೆ ಹೇಳಿದರು. ಗ್ರಾಮಾಂತರ ಠಾಣೆಗೆ ಹೋದರೆ ರಾಜಿ ಪಂಚಾತಿಕೆಗೆ ಮುಂದಾದರು. ದೂರಿನಲ್ಲಿ ಸುಬ್ರಹ್ಮಣ್ಯದ ಲಾಡ್ಜ್ ಉಲ್ಲೇಖವಾಗಿದೆ ಹೀಗಾಗಿ ಸುಬ್ರಹ್ಮಣ್ಯ ಠಾಣೆ ವ್ಯಾಪ್ತಿಗೆ ಹೋಗುತ್ತದೆ ಇಲ್ಲವೇ ಉಳ್ಳಾಲ ಠಾಣೆಗೆ ಸೇರುತ್ತದೆ ಎಂದು ಹೇಳಿರುವುದಾಗಿ ಗರ್ಲ್‍ಫ್ರೆಂಡ್ ಹೇಳಿಕೊಳ್ಳುತ್ತಾರೆ.

ಖಾಕಿಗೆ ನನ್ನನ್ನು ಮುಟ್ಟುವ ಧೈರ್ಯ ಇದೆಯಾ ?

ಈಗ ಆತ ನನಗೆ ಕರೆ ಮಾಡಿ ಕೊಲೆ ಬೆದರಿಕೆ ಒಡ್ಡುತ್ತಿದ್ದಾನೆ. ಖಾಕಿಗೆ ನನ್ನನ್ನು ಮುಟ್ಟುವ ಧೈರ್ಯ ಇದೆಯೇ ಎಂದು ಬೆದರಿಸುತ್ತಿದ್ದಾನೆ  ಗರ್ಲ್‍ಫ್ರೆಂಡ್ ನೋವು ತೋಡಿಕೊಂಡಿದ್ದಾರೆ. ಈ ಆಡಿಯೋ ದಾಖಲೆ ಪೊಲೀಸ್ ವಾರ್ತೆ.ಕಾಮ್‍ಗೆ ಲಭ್ಯವಾಗಿದೆ.

ಒಟ್ಟಿನಲ್ಲಿ ಅದೇ ಎಷ್ಟೋ ಜನರಿಗೆ ಮೋಸ ಮಾಡಿಕೊಂಡು ಅಲೆದಾಡಿಕೊಂಡಿರುವ ಈತನನ್ನು ಸಂಬಂಧ ಪಟ್ಟ ಅಧಿಕಾರಿಗಳು ಇನ್ನಾದರೂ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

error: Content is protected !!