Sunday, June 16 , 2019 4:09 AM

ಕ್ರೈಂ
ಮೂಲ್ಕಿ-ಮೂಡಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆ : MLA ಟಿಕೇಟ್‌ಗೆ, ಅಮೀತ್ ಶಾ’ ಕೈಯಲ್ಲಿ, ಕಟ್ಟಾ ಆರೆಸ್ಸೆಸ್ ಮುಖಂಡ ’ಡಾ.ಸುಧೀರ್ ಹೆಗ್ಡೆ’ ಹೆಸರು.!?21589

Posted By : ರಂಜಿತ್ ಮಡಂತ್ಯಾರು

ಮಂಗಳೂರು : ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆ ಎಲ್ಲೆಡೆ ರಾಜಕೀಯ ಚಟುವಟಿಕೆಯ ರಂಗು ಜ್ವರದಂತೆ ಏರತೊಡಗಿದೆ. ಅದರಲ್ಲೂ ದಕ್ಷಿಣಕನ್ನಡ ಜಿಲ್ಲೆಯಲ್ಲಿನ ಚಟುವಟಿಕೆಯಂತೂ ತೀವ್ರಗತಿಯಲ್ಲಿದೆ ಎಂಬುವುದನ್ನು ಬಿಡಿಸಿ ಹೇಳಬೇಕಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಇಲ್ಲಿ ಬಿಜೆಪಿ ಜನಜನಿತವಾಗಿರುವಂತಹ ಪಕ್ಷವಾಗಿರುವುದರಿಂದ ಆಂತರಿಕ ವಲಯದಲ್ಲಿ ಭಾರೀ ಲಾಭಿ ನಡೆಯುತ್ತಿದೆ. ಒಂದೆಡೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮೀತ್ ಶಾ ಅವರ ಬಳಿ ರಾಜ್ಯದಲ್ಲಿನ ಶಾಸಕ ಸ್ಥಾನದ ಅಭ್ಯರ್ಥಿಗಳ ಹೆಸರಿನ ಪಟ್ಟಿ ಸಿದ್ಧಗೊಂಡಿದೆ ಎನ್ನಲಾಗಿದೆ. ಆದರೆ ಚಾಣಕ್ಯ ಎಂದೇ ವಿಶ್ಲೇಷಕರಿಂದ ಬಿಂಬಿಸಲಾಗಿರುವ ಅಮೀತ್ ಶಾ ಅವರ ಕೈ ಸೇರಿರುವ ಪಟ್ಟಿಯಲ್ಲಿ, ಮೂಲ್ಕಿ-ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನದ ಅಭ್ಯರ್ಥಿಯಾಗಿ, ಹಿಂದುಳಿದ ಸಮುದಾಯದ ಕಟ್ಟಾ ಆರೆಸ್ಸೆಸ್ ಮುಖಂಡ ಡಾ| ಸುಧೀರ್ ಹೆಗ್ಡೆ ಅವರ ಹೆಸರಿರುವುದು ಇದೀಗ ಬಹುತೇಕ ಖಚಿತವಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಕಣ್ಣಿನ ವಿಭಾಗದ ಪ್ರೊಫೆಸರ್ ಮತ್ತು ಮುಖ್ಯಸ್ಥ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಣ್ಣಿನ ವೈದ್ಯರ ಅಸೋಸಿಯೇಶನ್ ಅಧ್ಯಕ್ಷರಾಗಿರುವ, ಮಾತ್ರವಲ್ಲದೇ ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಸಹಸಂಚಾಲಕರು ಹಾಗೂ ಕಟ್ಟಾ ಆರೆಸ್ಸೆಸ್ ಮುಖಂಡ ಡಾ. ಸುಧೀರ್ ಹೆಗ್ಡೆಯವರು, ಈಗಾಗಲೇ ಯುವ ಸಮುದಾಯಕ್ಕೆ ಭರವಸೆ ಮೂಡಿಸುವಂತಹ ನೇತಾರನಾಗಿ ಜನಮನ ಸೆಳೆದಿದ್ದಾರೆ. ಡಾ| ಸುಧೀರ್ ಹೆಗ್ಡೆಯವರಲ್ಲಿರುವ ಶಿಸ್ತು, ಶ್ರದ್ಧೆ, ಸಂಸ್ಕೃತಿ-ಸಂಸ್ಕಾರ-ಸಂಪ್ರದಾಯ ಇವೆಲ್ಲವನ್ನೂ ಮೂಲ್ಕಿ-ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ಜನತೆ ಸೂಕ್ಷ್ಮವಾಗಿ ಗಮನಿಸಿದೆ, ಮಾತ್ರವಲ್ಲದೇ ಪಕ್ಷದ ಸಂಘಟನಾತ್ಮಕ ಕೌಶಲ, ಸರ್ವಸ್ತರದ ಜನರೊಂದಿಗೆ ಬೆರೆಯುವ-ಸ್ಪಂದಿಸುವ ಗುಣವಿಶೇಷತೆಯನ್ನು ಹಾಗೂ ಜನನಾಯಕನಿಗಿರಬೇಕಾದ ಮೌಲ್ಯಗಳು ಡಾ. ಸುಧೀರ್ ಹೆಗ್ಡೆಯರಲ್ಲಿರುವುದನ್ನು ಮನಗಂಡಿದೆ.

ಇವೆಲ್ಲಕ್ಕಿಂತಾ ಮಿಗಿಲಾಗಿ ಸ್ವಾರ್ಥ-ಸ್ವಹಿತಾಸಕ್ತಿ-ಅಧಿಕಾರದ ಹಪಾಹಪಿಯ ಲವಲೇಶ ವಿಲ್ಲದಿರುವುದನ್ನು, ಸ್ವತಃ ಮೂಲ್ಕಿ-ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ಜನತೆಗೆ, ಡಾ. ಸುಧೀರ್ ಹೆಗ್ಡೆಯವರು ತನ್ನ ಹೃದಯ ವೈಶಾಲ್ಯತೆ ಮೇರೆದಿದ್ದ ಘಟನೆಯೊಂದನ್ನು ನಾವು ಇವತ್ತು ಹೇಳಲೇಬೇಕು. ಹೌದು ಕಾರ್ಕಳದ ಬಿ.ಬಿ.ಎಂ ಕಾಲೇಜು ಹಾಗೂ ಮಹಿಳಾ ಪಾಲಿಟೆಕ್ನಿಕ್ ಸಂಪರ್ಕದ ರಸ್ತೆ ಇಂದು ಅಗಲೀಕರಣವಾಗಿ ಕಾಂಕ್ರಿಟೀಕೃತಗೊಂಡು ಎರಡೂ ಭಾಗದ ವಾಹನಗಳು ಸಲೀಸಾಗಿ ಹಾದುಹೋಗುವಷ್ಟರ ಮಟ್ಟಿಗೆ ನಿರ್ಮಾಣವಾಗಿದೆ.

ಸರಕಾರಿ ಬಿ.ಬಿ.ಎಂ ಕಾಲೇಜಿಗೆ ತೀರಾ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಉನ್ನತ ಭವಿಷ್ಯದ ಕನಸುಗಳನ್ನು ಹೊತ್ತು, ಮೌಲ್ಯಯುತ ಶಿಕ್ಷಣಕ್ಕಾಗಿ ನಿತ್ಯ ಬರುತ್ತಿದ್ದಾರೆ. ಇಲ್ಲಿನ ರಸ್ತೆಯಲ್ಲಿ ಒಂದು ಸಮಯದಲ್ಲಿ ನಿತ್ಯ ಸಂಚಾರ ಮಾಡುವುದೆಂದರೆ ಬಹಳ ಸಂಕಷ್ಟವಾಗುತ್ತಿತ್ತು. ವಿದ್ಯಾರ್ಥಿಗಳನ್ನು ಹೊತ್ತು ತರುವ ಬಸ್ ಈ ರಸ್ತೆಯಲ್ಲಿ ತೆವಳುತ್ತಾ ಸಾಗುತ್ತಿತ್ತು, ಕಡಿದಾದ ರಸ್ತೆ, ರಸ್ತೆಯ ಒಂದು ಭಾಗದಲ್ಲಿ ಅಡಿಕೆ, ತೆಂಗಿನ ತೋಟ, ಇನ್ನೊಂದೆಡೆ ಅಗಲವಾದ ತೋಡು. ಮಳೆಗಾಲದಲ್ಲಿ ಈ ತೋಡು ತುಂಬಿ ಹರಿಯುವುದನ್ನು ಕಂಡಾಗ ಈ ರಸ್ತೆಯಲ್ಲಿ ಸಂಚರಿಸುವುದೇ ಬೇಡ ಎಂಬ ಭಯ ಉಂಟಾಗುತ್ತಿತ್ತು. ಮಾತ್ರವಲ್ಲದೇ ಕಳೆದ ಸಾಲಿನ ಮಳೆಗಾಲದಲ್ಲಿ, ವಿದ್ಯಾರ್ಥಿಗಳನ್ನು ಹೊತ್ತು ಸಾಗುತ್ತಿದ್ದ ಬಸ್ ನಿಯಂತ್ರಣ ತಪ್ಪಿ, ತುಂಬಿ ಹರಿಯುತ್ತಿದ್ದ ನೀರಿನ ತೋಡಿಗೆ ಬಿದ್ದಿತ್ತು.

ಆದರೆ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿ ಬಂದಿದ್ದರು. ಇನ್ಯಾವಾಗ ಈ ರಸ್ತೆ ಅಗಲೀಕರಣಗೊಳ್ಳುವುದೋ ಎಂಬ ಒತ್ತಾಸೆಯಿಂದ ಜನ ಕಾಯತೊಗಿದ್ದರು. ಆದರೆ ಈ ಸಮಯದಲ್ಲಿ ತಕ್ಷಣ ರಸ್ತೆ ಅಗಲೀಕರಣ ಮಾಡಬೇಕೆಂಬ ಬಗ್ಗೆ ಸ್ಪಷ್ಟ ನಿಲುವನ್ನು ವ್ಯಕ್ತಪಡಿಸಿದ ಡಾ. ಸುಧೀರ್ ಹೆಗ್ಡೆಯವರ ಕುಟುಂಬ, ಸುಮಾರು ಒಂದು ಕೋಟಿ ರೂಪಾಯಿ ಮೌಲ್ಯದ ಜಾಗವನ್ನು ರಸ್ತೆ ಅಗಲೀಕರಣಕ್ಕಾಗಿ ದಾನ ನೀಡಿತ್ತು. ೨೭ ವರ್ಷದ ಹಿಂದೆಯೂ ಸರಕಾರಿ ಬಿ.ಬಿ.ಎಂ ಕಾಲೇಜಿಗೆ ಹೋಗಲು ರಸ್ತೆ ನಿರ್ಮಾಣಕ್ಕಾಗಿ ಒಂದು ಎಕ್ರೆಗಿಂತಲೂ ಹೆಚ್ಚು ಸ್ಥಳವನ್ನು ನೀಡಿ ವಿಶಾಲ ಮನೋಭಾವವನ್ನು ಈ ಕುಟುಂಬ ತೋರ್ಪಡಿಸಿತ್ತು. ಇದೀಗ ರಸ್ತೆ ಸುಂದರವಾಗಿದ್ದು, ತೋಡಿಗೆ ಅಡ್ಡಲಾಗಿ ಕಾಂಕ್ರಿಟೀಕೃತ ತಡೆಬೇಲಿ ನಿರ್ಮಿಸಲಾಗಿದೆ. ಹಾಗೂ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿದೆ. ವೈದ್ಯ ಸುಧೀರ್ ಹೆಗ್ಡೆಯವರು, ಹೃದಯ ವೈಶಾಲ್ಯತೆ ಮೇರೆದು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗುಂಟಾಗುವ ಸಮಸ್ಯೆಗೆ ಪರಿಹಾರ ಒದಗಿಸಿಕೊಟ್ಟಿರುವ ಅವರ ಸ್ವಾರ್ಥ ಇಲ್ಲದ ಗುಣವನ್ನು ಮೂಲ್ಕಿ-ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ಪ್ರಜ್ಞಾವಂತ-ವಿವೇಕವಂತ ಮತದಾರರು ಗಮನದಲ್ಲಿ ಇಟ್ಟುಕೊಂಡಿದ್ದಾರೆ ಎಂಬುದು ಹೆಗ್ಡೆ ಅಭಿಮಾನಿಗಳ ಅಭಿಪ್ರಾಯವಾಗಿದೆ.

ಹಾಗೆಯೇ ಮೂಲ್ಕಿ-ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ಮತದಾರ ಪ್ರಭುವಿನ ಮನೆಮನಗಳಲ್ಲಿ ಡಾ.ಸುಧೀರ್ ಹೆಗ್ಡೆ ಮನೆಮಾಡಿದ್ದಾರೆ. ತಮ್ಮವೃತ್ತಿ ಜೀವನವನ್ನು ಮೂಡಬಿದಿರೆಯಲ್ಲಿಯೇ ಆರಂಭಿಸಿದ ಡಾ| ಸುಧೀರ್ ಹೆಗ್ಡೆಯವರು ೨೦೦೦ದಿಂದ ೨೦೧೪ರವರೆಗೆ ೧೪ ವರ್ಷಗಳ ಕಾಲ ವೈದ್ಯನಾಗಿ ಜನರಿಗೆ ಕಣ್ಣಿನ ಆರೈಕೆ ಮಾಡಿರುವುದು ಮಾತ್ರವಲ್ಲದೆ, ಸಾವಿರಾರು ಜನರಿಗೆ ಉಚಿತವಾಗಿಯೇ ಶಸ್ತ್ರಚಿಕಿತ್ಸೆಯನ್ನು ಮಾಡಿರುವುದನ್ನು ಇಲ್ಲಿಯ ಜನ ಜಾತಿ-ಮತದ ಬೇಧವಿಲ್ಲದೆ ಇಂದಿಗೂ ಸ್ಮರಿಸಿಕೊಳ್ಳುತ್ತಿದ್ದಾರೆ. ಡಾ.ಸುಧೀರ್ ಹೆಗ್ಡೆ ಕ್ರಮಿಸಿ ಬಂದ ದಾರಿಯೇ ಅಂಥಾ ಶಿಸ್ತುಬದ್ಧ ರೀತಿಯದ್ದು. ಸಂಸ್ಕೃತಿ-ಸಂಸ್ಕಾರ-ಸಂಪ್ರದಾಯಗಳ ಅನೂಚಾನ ಪಾಲನೆಯ ಶ್ರದ್ಧಾವಂತ ಕುಟುಂಬದ ಹಿನ್ನೆಲೆಯಿಂದ ಬಂದವರು. ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಭಾವ ಇವೆಲ್ಲವೂ ಡಾ.ಸುಧೀರ್ ಹೆಗ್ಡೆ ಅವರನ್ನು, ಇವರ ವ್ಯಕ್ತಿತ್ವವನ್ನು ಪುಟ್ಟಕಿಟ್ಟ ಚಿನ್ನವನ್ನಾಗಿಸಿತ್ತು.

ಇವರು ಅನೇಕ ಸಮಯದಿಂದಲೂ ಸಾಮಾಜಿಕ ಕಾರ್ಯಗಳ ಮೂಲಕ ಯುವಸಮೂಹವನ್ನು ತನ್ನತ್ತ ಆಕರ್ಷಿಸುವಂತಹ ಅನೇಕ ಸಂಘಟನಾತ್ಮಕ ಕಾರ್ಯಗಳಲ್ಲಿ ಸಕ್ರೀಯರಾಗಿದ್ದಾರೆ. ಸಹಜವಾಗಿಯೇ ಇಂತಹ ನಾಯಕತ್ವದ ಗುಣವನ್ನು ಸಂಪಾದಿಸಿಕೊಂಡ ಇವರನ್ನು ರಾಜಕೀಯ ರಂಗ ಕೈಬೀಸಿ ಕರೆದಿದೆ. ಮಾತ್ರವಲ್ಲ, ಇವರಿಗೆ ರಾಜಕೀಯದಲ್ಲಿ ಉಜ್ವಲವಾದ ಭವಿಷ್ಯವಿದೆ ಎಂಬುವುದನ್ನು ಪ್ರಸ್ತುತ ವಿದ್ಯಮಾನಗಳೇ ಶೃತಪಡಿಸುತ್ತಿವೆ. ಡಾ. ಸುಧೀರ್ ಹೆಗ್ಡೆ ಅವರು ಕೇವಲ ಮೂಲ್ಕಿ-ಮೂಡಬಿದಿರೆ ಕ್ಷೇತ್ರದಲ್ಲಿ ಮಾತ್ರವಲ್ಲದೇ ಇಡೀ ಜಿಲ್ಲೆಯಲ್ಲಿನ, ಜನತೆಯ ಒಲವು ಸಂಪಾದಿಸುವುದರ ಜೊತೆಜೊತೆಗೆ ಉತ್ತಮ ನಾಯಕರಾಗಿ ಹೊರಹೊಮ್ಮುವ ಎಲ್ಲಾ ಲಕ್ಷಣಗಳನ್ನು ತೋರುತ್ತಾ ಬಂದಿರುವ ಸುಧೀರ್ ಹೆಗ್ಡೆ ಅವರು, ಮೂಲ್ಕಿ-ಮೂಡಬಿದಿರೆಯ ಸಮಸ್ತ ಜನತೆಯ-ಸರ್ವಸ್ತರದ ಜನರ ಹೃದಯ ಗೆದ್ದಿರುವವರು.

ನಿರಂತರ ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡುತ್ತ ಸಾಗಿ ಬಂದವರು, ಯಾರೊಂದಿಗೂ ಭಿನ್ನಾಭಿಪ್ರಾಯ-ನಿಷ್ಠೂರ ಕಟ್ಟಿಕೊಂಡವರೇ ಅಲ್ಲ. ಅಜಾತಶತ್ರುವೆಂದೇ ಆತ್ಮೀಯವಾಗಿ ಈ ಭಾಗದಲ್ಲಿ ಕರೆಯಲ್ಪಡುವವರು. ಕ್ಷೇತ್ರದಲ್ಲಿ ಬಿಜೆಪಿ ಬಲಾಢ್ಯಗೊಳ್ಳಲು ತನ್ಮೂಲಕ ಸುಧೀರ್ ಹೆಗ್ಡೆಯರಂತಹ ನಾಯಕರುಗಳ ಭವಿಷ್ಯದ ಬುನಾದಿ ಭದ್ರವಾಗಲು ಇದೂ ಒಂದು ಪೂರಕ ಬೆಳವಣಿಗೆಯೇ ಆಗಿದೆ ಎಂಬುವುದು ಅನುಭವಿಗಳ ಅಭಿಮತ. ಅದರಲ್ಲೂ ಶಿಸ್ತು-ಸಂಪ್ರದಾಯ-ಸಂಸ್ಕಾರವಂತ ಜನರಿರುವ ಮೂಲ್ಕಿ-ಮೂಡಬಿದಿರೆಯಂತಹ ಕ್ಷೇತ್ರಕ್ಕೆ ಇವೆಲ್ಲಾ ಮೌಲ್ಯಗಳಿರುವ ವ್ಯಕ್ತಿಯ ಅನ್ವೇಷಣೆಯಿತ್ತು. ಅದೀಗ ಡಾ.ಸುಧೀರ್ ಹೆಗ್ಡೆಯಿಂದ ಭರ್ತಿಯಾದಂತಾಗಿದೆ ಎಂದರೆ ತಪ್ಪಾಗಲಾರದು. ವಿಶೇಷವಾಗಿ ಈ ಕ್ಷೇತ್ರದ ಎಲ್ಲಾ ಸಮುದಾಯದವರ ಒಲವು, ಡಾ.ಸುಧೀರ್ ಹೆಗ್ಡೆಯವರ ಬೆಂಬಲಕ್ಕಿರುವುದು ಇವರ ಕಾರ್ಯಕ್ಷಮತೆಗೆ ಹಿಡಿದ ಕೈಗನ್ನಡಿಯಾಗಿದೆ. ಅದೇ ರೀತಿ ಬಿಜೆಪಿ ವರಿಷ್ಠ ಮಂಡಳಿಗೂ ಡಾ. ಸುಧೀರ್ ಹೆಗ್ಡೆ ಮೇಲೆ ಅದೇ ಭರವಸೆ-ವಿಶ್ವಾಸವಿರುವ ಕಾರಣ ಟಿಕೇಟ್ ಸಿಗುವುದು ನಿಚ್ಚಳವಾಗಿದೆ ಎಂಬುದು ಹಿರಿಯರೊಬ್ಬರ ಅಭಿಪ್ರಾಯ. ತಮ್ಮ ಪ್ರಜಾಸೇವಾ ಕೈಂಕರ್ಯದಲ್ಲಿ ಅಸಾಧಾರಣ ಸೇವೆ ಸಲ್ಲಿಸುವಂತಾಗಿ ಸರ್ವೋತ್ತಮ ನಾಯಕರಾಗುವ ಪಥ ದತ್ತ ಶ್ರೀಯುತರು ಮುಂದಡಿಯಿಡಲೀ ಎಂಬುವುದು ಎಲ್ಲರ ಹಾರೈಕೆ.

More

ಮಡಿಕೇರಿ: ನಗರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಸಿದೆ. ಶಿಕ್ಷಕಿಯನ್ನು ಕೊಂದ ವ್ಯಕ್ತಿಯೋರ್ವ...

ಮಂಗಳೂರು: ಕರಾವಳಿಯಲ್ಲಿ ಮುಂಗಾರು ಮಳೆ ಆರಂಭವಾಗಿದೆ. ಅರಬ್ಬೀ ಸಮುದ್ರದಲ್ಲಿ ಚಂಡಮಾರುತ ಉಂಟಾದ...


ಮಂಗಳೂರು; ನಗರದ ರೌಡಿಶೀಟರ್ ಒಬ್ಬನ ಮೇಲೆ ನಗರದ ಪಚ್ಚನಾಡಿ ಎಂಬಲ್ಲಿ ಪೊಲೀಸರು...

ಮಂಗಳೂರು: ಬಿಜೆಪಿಯ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಸಂಘದಿಂದ ಬಂದು ಚತುರ ಸಂಘಟಕ,...


ಬೆಂಗಳೂರು: ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುವುದಂತೂ ಗ್ಯಾರಂಟಿ ಹಾಗಾದರೆ ರೇವಣ್ಣ ಆವೇಶದಲ್ಲಿ...

ಉಡುಪಿ: ಉಡುಪಿಯ ಮಲ್ಪೆ ಬಂದರಿನಿಂದ ಏಳು ಮಂದಿ ಮೀನುಗಾರರು ಬೋಟ್ ಸಮೇತ...


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಾಡಂಚಿನಲ್ಲಿ ಕಾಡುಕೋಣಗಳ ಹಾವಳಿ ಹೆಚ್ಚಿದೆ. ಕಾಡುಕೋಣಗಳ...

ಪುಂಜಾಲಕಟ್ಟೆ: ಕಾಡಿನಿಂದ ಊರಿಗೆ ಬಂದ ಕಾಡುಕೋಣವೊಂದು ಗೋಬರ್‌ ಗ್ಯಾಸ್‌ ಗುಂಡಿಯೊಳಗೆ ಬಿದ್ದ ಘಟನೆ...


Copyright 2019 www.policevarthe.com | All Right Reserved
error: Content is protected !!