Sunday, June 16 , 2019 4:19 AM

ಕ್ರೈಂ












ಜಿಲ್ಲಾಧಿಕಾರಿಗಳ ಭೇಟಿಗಾಗಿ ಕಾಯುತ್ತಿದೆ ದಕ್ಷಿಣ ಕನ್ನಡ ಜಿಲ್ಲೆಯ ಮೂಲ ಸೌಲಭ್ಯ ವಂಚಿತ ಪ್ರದೇಶ.!



1110

Posted By : ರಂಜಿತ್ ಮಡಂತ್ಯಾರು
ಮಂಗಳೂರು : ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಧರ್ಮಸ್ಥಳದ ಗ್ರಾಮ ವ್ಯಾಪ್ತಿಯ ಮುಳಿಕಾರು ಎಂಬ ಪ್ರದೇಶ ಮೂಲ ಸೌಲಭ್ಯದಿಂದ ವಂಚಿತವಾಗಿದೆ. ಧರ್ಮಸ್ಥಳ ಗ್ರಾಮ ಪಂಚಾಯಿತಿಯಿಂದ ಈ ಪ್ರದೇಶ ಕೇವಲ 5ಕಿ.ಮೀ. ದೂರದಲ್ಲಿದೆ. ಈ ಪ್ರದೇಶದಲ್ಲಿ ಸುಮಾರು 80ಕ್ಕೂ ಹೆಚ್ಚು ಮನೆಗಳಿದೆ. ಆದರೆ ಇಲ್ಲಿನ ಜನರು ಅನುಭವಿಸುತ್ತಿರುವ ಮೂಲ ಸೌಲಭ್ಯಗಳ ಸಮಸ್ಯೆಗಳಿದ್ದರೂ ಈವರೆಗೂ ಇಲ್ಲಿನ ಶಾಸಕ ವಸಂತ ಬಂಗೇರ ಅವರು ಭೇಟಿಯೂ ನೀಡಲಿಲ್ಲ, ಸಮಸ್ಯೆಗೆ ಸ್ಪಂದನೆಯೂ ನೀಡಲಿಲ್ಲ ಎಂಬುದು ಇಲ್ಲಿನ ಜನರ ಆರೋಪ. ಕುಡಿಯುವ ನೀರು, ರಸ್ತೆ, ಸಾರಿಗೆ ವ್ಯವಸ್ಥೆ ಸೇರಿದಂತೆ ಅನೇಕ ಸವಲತ್ತುಗಳು ಈ ಪ್ರದೇಶದ ಜನರಿಗೆ ಸಿಗದಂತಾಗಿದೆ.

ಈ ಪ್ರದೇಶದಲ್ಲಿ ಹೆಚ್ಚಿನ ಮನೆಗಳಲ್ಲಿ ಕುಡಿಯುವ ನೀರಿಗಾಗಿ ನದಿಯ ನೀರನ್ನೇ ಬಳಸುತ್ತಿರುವುದು ಒಂದೇಡೆಯಾದರೇ. ಇಲ್ಲಿನ ಕುಡಿಯುವ ನೀರು, ರಸ್ತೆ, ಸಾರಿಗೆ ಸಮಸ್ಯೆಗಳು ಈ ಭಾಗದ ಜನರಿಗೆ ಬಹಳ ದೊಡ್ಡ ಮಟ್ಟದ ಸಮಸ್ಯೆಯಾಗಿ ತಲೆದೋರಿದೆ. ಆದರೆ ಇಲ್ಲಿನ ಜನ ಅನೇಕ ಭಾರೀ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ವಸಂತ ಬಂಗೇರ ಅವರಿಗೆ ಈ ಪ್ರದೇಶದಲ್ಲಿನ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಿದರೂ ಈವರೆಗೂ ಯಾವುದೇ ಸ್ಪಂದನೆ ನೀಡಿಲ್ಲ ಎಂಬುದು ಇಲ್ಲಿನ ಜನರ ಆರೋಪವಾಗಿದೆ. ಈ ಪ್ರದೇಶಲ್ಲಿ ಹಗಲಿನಲ್ಲಿ ವಿದ್ಯುತ್ ಸಮಸ್ಯೆ ರಾತ್ರಿಯೂ ಬಂದರೆ ಬಂತು ವಿದ್ಯುತ್ ಇಲ್ಲದ್ದಿದ್ದರೇ ಇಲ್ಲ ಎನ್ನುತ್ತಾರೆ ಇಲ್ಲಿನ ನಿವಾಸಿಗಳು. ಇಲ್ಲಿನ ಜನರಿಗೆ ಧರ್ಮಸ್ಥಳ ಪೇಟೆಗೆ ಬರಬೇಕಾದರೆ ಮಳೆಗಾಲದಲ್ಲಿ ಬಹಳ ಕಷ್ಟ. ಶಾಲಾ, ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ.

ಒಂದು ತೋಡು ದಾಟಿ ಬರಬೇಕು, ಮಳೆಗಾಲದಲ್ಲಿ ಸಂಪೂರ್ಣವಾಗಿ ನೀರು ಇರುತ್ತದೆ. ಈ ಎಲ್ಲಾ ಸಮಸ್ಯೆಗಳನ್ನು ಇಲ್ಲಿನ ಜನರು ದಿನನಿತ್ಯ ಅನುಭವಿಸುತ್ತಿದ್ದಾರೆ. ಈ ಎಲ್ಲಾ ಸಮಸ್ಯೆಗಳ ಕುರಿತು ಧರ್ಮಸ್ಥಳ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಮುಳಿಕಾರು ಪ್ರದೇಶದ ಜನರ ಈ ಎಲ್ಲಾ ಸಮಸ್ಯೆಗಳ ಬಗ್ಗೆ ಇನ್ನಾದರೂ ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳೂ ಭೇಟಿ ನೀಡಿ ಈ ಪ್ರದೇಶದ ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡಬೇಕಾಗಿದೆ.

More

ಮಡಿಕೇರಿ: ನಗರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಸಿದೆ. ಶಿಕ್ಷಕಿಯನ್ನು ಕೊಂದ ವ್ಯಕ್ತಿಯೋರ್ವ...

ಮಂಗಳೂರು: ಕರಾವಳಿಯಲ್ಲಿ ಮುಂಗಾರು ಮಳೆ ಆರಂಭವಾಗಿದೆ. ಅರಬ್ಬೀ ಸಮುದ್ರದಲ್ಲಿ ಚಂಡಮಾರುತ ಉಂಟಾದ...


ಮಂಗಳೂರು; ನಗರದ ರೌಡಿಶೀಟರ್ ಒಬ್ಬನ ಮೇಲೆ ನಗರದ ಪಚ್ಚನಾಡಿ ಎಂಬಲ್ಲಿ ಪೊಲೀಸರು...

ಮಂಗಳೂರು: ಬಿಜೆಪಿಯ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಸಂಘದಿಂದ ಬಂದು ಚತುರ ಸಂಘಟಕ,...


ಬೆಂಗಳೂರು: ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುವುದಂತೂ ಗ್ಯಾರಂಟಿ ಹಾಗಾದರೆ ರೇವಣ್ಣ ಆವೇಶದಲ್ಲಿ...

ಉಡುಪಿ: ಉಡುಪಿಯ ಮಲ್ಪೆ ಬಂದರಿನಿಂದ ಏಳು ಮಂದಿ ಮೀನುಗಾರರು ಬೋಟ್ ಸಮೇತ...


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಾಡಂಚಿನಲ್ಲಿ ಕಾಡುಕೋಣಗಳ ಹಾವಳಿ ಹೆಚ್ಚಿದೆ. ಕಾಡುಕೋಣಗಳ...

ಪುಂಜಾಲಕಟ್ಟೆ: ಕಾಡಿನಿಂದ ಊರಿಗೆ ಬಂದ ಕಾಡುಕೋಣವೊಂದು ಗೋಬರ್‌ ಗ್ಯಾಸ್‌ ಗುಂಡಿಯೊಳಗೆ ಬಿದ್ದ ಘಟನೆ...


Copyright 2019 www.policevarthe.com | All Right Reserved
error: Content is protected !!