Thursday, February 21 , 2019 4:58 PMಹಿಂದಿಯ ಬೆಸ್ಟ್‌‌ ಡ್ರಾಮೆಬಾಜ್‌‌‌ ಕಾರ್ಯಕ್ರಮಕ್ಕೆ ಕನ್ನಡದ ಪುಟಾಣಿ ಚಿತ್ರಾಲಿ1066
ಕೇವಲ 6 ವರ್ಷಕ್ಕೆ ಕರ್ನಾಟಕದ ಮನೆಮಾತಾಗಿರುವ ಚಿತ್ರಾಲಿ ಇದೀಗ ಮತ್ತೊಂದು ಸಾಧನೆ ಮಾಡಲು ಹೊರಟಿದ್ದಾರೆ. 5-14 ವರ್ಷದ ಮಕ್ಕಳಿಗಾಗಿ ನಡೆಸುತ್ತಿರುವ ಇಂಡಿಯಾಸ್ ಬೆಸ್ಟ್ ಡ್ರಾಮೇಬಾಜ್‌ ಸೀಸನ್ 3ನಲ್ಲಿ ಚಿತ್ರಾಲಿ ಭಾಗವಹಿಸುತ್ತಿದ್ದಾಳೆ.
ಮೇ 8 ರಂದು ಬೆಂಗಳೂರಲ್ಲಿ ನಡೆದ ಆಡಿಶನ್‌‌‌ನಲ್ಲಿ ಚಿತ್ರಾಲಿ ಆಯ್ಕೆಯಾಗಿದ್ದಾಳೆ. ಬಾಲಿವುಡ್ ನಟಿ ಸೋನಾಲಿ ಬೇಂದ್ರೆ, ನಟ ವಿವೇಕ್ ಒಬೇರಾಯ್‌ ಹಾಗೂ ಅನುರಾಗ್ ಬಸು ಈ ಕಾರ್ಯಕ್ರಮದ ತೀರ್ಪುಗಾರರಾಗಿದ್ದಾರೆ. ಆಡಿಶನ್ ವೇಳೆ ಚಿತ್ರಾಲಿ ನಟನೆಗೆ ವಿವೇಕ್ ಒಬೆರಾಯ್ ಹಾಗೂ ಸೊನಾಲಿ ಬೇಂದ್ರೆ ಮನಸೋತಿದ್ದಾರೆ. ಶಂತನು ಮಹೇಶ್ವರಿ ಈ ಕಾರ್ಯಕ್ರಮ ನಿರೂಪಣೆ ಮಾಡಲಿದ್ದು, ಶೀಘ್ರದಲ್ಲೇ ಝಿ ಹಿಂದಿ ವಾಹಿನಿಯಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ. ಚಿತ್ರಾಲಿ ಈ ಕಾರ್ಯಕ್ರಮದಲ್ಲಿ ಗೆದ್ದು ಬಂದು ಕರ್ನಾಟಕಕ್ಕೆ ಕೀರ್ತಿ ತರಲಿ ಎಂದು ಹಾರೈಸೋಣ.
error: Content is protected !!