Sunday, June 16 , 2019 4:10 AM

ಕ್ರೈಂ
ಅಜಾತಶತ್ರುವಿನ ಆಪ್ತಮಿತ್ರ: ಕಟ್ಟರ್ ಹಿಂದುತ್ವವಾದಿ ಎಲ್.ಕೆ ಅಡ್ವಾಣಿ ಈಗ ಏಕಾಂಗಿ!237

ಮಂಗಳೂರು: ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್.ಕೆ. ಅಡ್ವಾಣಿ ಜನಸಂಘದೊಟ್ಟಿಗೆ ಜತೆಜತೆಯಾಗಿ ಬೆಳೆದವರು. ವಾಜಪೇಯಿ ಮತ್ತು ಅಡ್ವಾಣಿ ನಡುವಿನ ಸ್ನೇಹ ಸುಮಾರು ಏಳು ದಶಕದಷ್ಟು ಹಳೆಯದು. ವಾಜಪೇಯಿ ಅವರಿಗಿಂತ ೩ ವರ್ಷ ಕಿರಿಯರಾದ ಅಡ್ವಾಣಿ ವಾಜಪೇಯಿ ಅವರ ಆಪ್ತ ಮಿತ್ರರಲ್ಲಿ ಒಬ್ಬರಾಗಿದ್ದವರು. ವಾಜಪೇಯಿ ಮತ್ತು ಅಡ್ವಾಣಿ ಇಬ್ಬರೂ ಆರ್‌ಎಸ್‌ಎಸ್‌ಗೆ ಅತ್ಯಂತ ನಿಷ್ಟರಾಗಿದ್ದವರು. ಆರ್‌ಎಸ್‌ಎಸ್ ಕನಸಿನ ಹಿಂದೂ ಸಮಾಜ ಕಟ್ಟುವುದಕ್ಕಾಗಿ ಇಬ್ಬರೂ ತಮ್ಮದೇ ಆದ ರೀತಿಯಲ್ಲಿ ಯೋಚಿಸಿದವರು. ಈ ಇಬ್ಬರ ನಡುವೆ ಸಾಕಷ್ಟು ಸಮಾನ ಆಸಕ್ತಿಗಳೂ ಇದ್ದವು. ಸಾಹಿತ್ಯ, ಪತ್ರಿಕೋದ್ಯಮ, ಸಿನಿಮಾ ಬಗ್ಗೆ ಇಬ್ಬರಿಗೂ ಆಸಕ್ತಿ ಇತ್ತು. ಇಬ್ಬರೂ ಭಾರತೀಯ ಜನಸಂಘವನ್ನು ತಳಮಟ್ಟದಿಂದ ಕಟ್ಟಲು ತಮ್ಮ ಶ್ರಮ ಹಾಕಿದವರು.

ವಾಜಪೇಯಿ ಮತ್ತು ಅಡ್ವಾಣಿ ತುರ್ತು ಸಂದರ್ಭದಲ್ಲಿ ಒಟ್ಟಿಗೆ ಸೆರೆವಾಸ ಅನುಭವಿಸಿದವರು. ಜನಸಂಘವನ್ನು ಜನತಾ ಪಕ್ಷದ ಜತೆಗೆ ಸೇರ್ಪಡೆ ಮಾಡಿಕೊಂಡ ಫಲವಾಗಿ ಸಿಕ್ಕ ಅಧಿಕಾರದಲ್ಲಿ ವಾಜಪೇಯಿ ವಿದೇಶಾಂಗ ಸಚಿವರಾದರೆ, ಅಡ್ವಾಣಿ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರಾದರು. ಜನಸಂಘವನ್ನು ಭಾರತೀಯ ಜನತಾ ಪಕ್ಷವಾಗಿ ಕಟ್ಟಿದ ಹಾಗೂ ಅದಕ್ಕೆ ಹಿಂದುತ್ವವನ್ನು ತುಂಬಿದ್ದರಲ್ಲಿ ವಾಜಪೇಯಿ ಹಾಗೂ ಅಡ್ವಾಣಿ ಇಬ್ಬರ ಪಾತ್ರವೂ ಪ್ರಮುಖವಾಗಿದೆ. ೮೦ರ ದಶಕದಲ್ಲಿ ಅಡ್ವಾಣಿ ಬಿಜೆಪಿಯನ್ನು ಕಟ್ಟರ್ ಹಿಂದುತ್ವದ ರಾಜಕೀಯ ಕೇಂದ್ರವಾಗಿಸಿದರೆ, ಆ ಹೊತ್ತಿಗೆ ವಾಜಪೇಯಿ ಕಟ್ಟರ್ ಹಿಂದುತ್ವದಿಂದ ಸಾಫ್ಟ್ ಹಿಂದುತ್ವದ ಕಡೆಗೆ ತಮ್ಮನ್ನು ಬದಲಿಸಿಕೊಳ್ಳುವ ಯತ್ನದಲ್ಲಿದ್ದರು. ಈ ಸಾಫ್ಟ್ ಹಿಂದುತ್ವ ವಾಜಪೇಯಿ ಅವರನ್ನು ಇಡೀ ದೇಶ ಒಪ್ಪುವ ನಾಯಕ ಎಂದು ಬಿಂಬಿಸಿಕೊಳ್ಳಲು ಅನುಕೂಲಕರವಾದ ವಾತಾವರಣ ನಿರ್ಮಿಸಿತ್ತು. ೧೯೯೯ರಲ್ಲಿ ಪೂರ್ಣಾವಧಿ ಪ್ರಧಾನಮಂತ್ರಿಯಾಗಲು ಇದು ಸಹಕಾರಿಯಾಗಿತ್ತು. ಬಿಜೆಪಿಯಲ್ಲಿ ವಾಜಪೇಯಿ ಅವರನ್ನು ಹಿಂದುತ್ವ ಮೀರಿದ ಅಜಾತಶತ್ರು ಎಂದು ಬಿಂಬಿಸಿದರೆ, ಅಡ್ವಾಣಿ ಕಟ್ಟರ್ ಹಿಂದುತ್ವವಾದಿಯಾಗಿಯೇ ಉಳಿದರು.

ವಾಜಪೇಯಿ ಪ್ರಧಾನಿಯಾದ ಸಂದರ್ಭದಲ್ಲಿ ಅಡ್ವಾಣಿ ಉಪ ಪ್ರಧಾನಿ ಹುದ್ದೆಗೇರಿದ್ದರು. ರಾಜಕೀಯ ನಡೆಯಲ್ಲಿ ಇಬ್ಬರ ನಡುವೆ ಸಣ್ಣದೊಂದು ಭಿನ್ನಾಭಿಪ್ರಾಯವಿದ್ದರೂ ಇಬ್ಬರ ಸಂಬಂಧ ಕೊನೆಯವರೆಗೂ ಕೆಡಲಿಲ್ಲ. ಅಡ್ವಾಣಿ ಹಿಂದುತ್ವದ ಜತೆಗೇ ಅಂಟಿಕೊಂಡಿದ್ದರೆ, ವಾಜಪೇಯಿ ಪ್ರಧಾನಿಯಾದ ಬಳಿಕ ವಿಶ್ವನಾಯಕರ ಪಟ್ಟಿಗೆ ಸೇರಿದ್ದರು. ೨೦೦೪ರ ಸೋಲಿನ ಬಳಿಕ ವಾಜಪೇಯಿ ಸಕ್ರಿಯ ರಾಜಕೀಯದಿಂದ ದೂರವೇ ಉಳಿದರು. ಈ ವೇಳೆ ಬಿಜೆಪಿಯಲ್ಲಿ ಅಡ್ವಾಣಿ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದೇ ಬಿಂಬಿಸಲಾಗಿತ್ತು. ಅಡ್ವಾಣಿ ಕೂಡ ತಮ್ಮ ಆಪ್ತಮಿತ್ರ ವಾಜಪೇಯಿ ರೀತಿಯಲ್ಲಿ ಜಾತ್ಯಾತೀತ ಇಮೇಜ್ ಪಡೆಯುವ ಹಂಬಲ ವ್ಯಕ್ತಪಡಿಸಿದರು. ಪೂರಕವಾಗಿ ಜಿನ್ಹಾ ಪರವಾದ ಹೇಳಿಕೆ ಹೊರಬಿತ್ತು. ಆದರೆ ಬದಲಾದ ಕಾಲಘಟ್ಟದಲ್ಲಿ, ಬಿಜೆಪಿಗೆ ಕಟ್ಟರ್ ಹಿಂದುತ್ವದ ಇಮೇಜ್ ಬೇಕಾಗಿತ್ತು.

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಲೋಕಸಭಾ ಚುನಾವಣೆ ವೇಳೆಗೆ ತಾವು ಪ್ರಧಾನಮಂತ್ರಿ ಅಭ್ಯರ್ಥಿಯಾದರು. ಎನ್‌ಡಿಎ ಬಹುಮತ ಪಡೆಯುವ ಮೂಲಕ ಮೋದಿ ಪ್ರಧಾನಿ ಹುದ್ದೆಗೇರಿದರು. ಈ ಮೂಲಕ ಪ್ರಧಾನಿಯಾಗಬೇಕೆಂಬ ಅಡ್ವಾಣಿ ಕನಸು ಕನಸಾಗಿಯೇ ಉಳಿಯಿತು. ಕೆಲವು ವರ್ಷಗಳ ಹಿಂದಷ್ಟೆ ಅವರು ಪತ್ನಿಯನ್ನೂ ಕಳೆದುಕೊಂಡಿದ್ದರು. ಇವತ್ತು ಆಪ್ತಮಿತ್ರನನ್ನೂ ಅವರು ಕಳೆದುಕೊಂಡಿದ್ದಾರೆ. ನನ್ನ ಬಳಿ ಮಾತನಾಡಲು ಪದಗಳೇ ಇಲ್ಲ. ೬೫ ವರ್ಷಗಳ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ. ನಾವಿಬ್ಬರೂ ಆರ್‌ಎಸ್‌ಎಸ್‌ನ ಪ್ರಚಾರಕರಾಗಿ ಒಟ್ಟಿಗೆ ಬಂದವರು?? ಎಂದು ಅಡ್ವಾಣಿ ವಾಜಪೇಯಿ ಅವರೊಂದಿಗಿನ ನೆನಪುಗಳನ್ನು ಸ್ಮರಿಸಿದ್ದಾರೆ. ಬಿಜೆಪಿಯ ಹಿರಿಯ ನಾಯಕರ ಪೈಕಿ ಅಡ್ವಾಣಿ ತಮ್ಮ ಆಪ್ತಮಿತ್ರ ವಾಜಪೇಯಿ ಅವರನ್ನೂ ಕಳೆದುಕೊಂಡು ಇನ್ನಷ್ಟು ಏಕಾಂಗಿಯಾಗಿದ್ದಾರೆ.

ಕೃಪೆ; ಸಮಾಚಾರ

More

ಮಡಿಕೇರಿ: ನಗರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಸಿದೆ. ಶಿಕ್ಷಕಿಯನ್ನು ಕೊಂದ ವ್ಯಕ್ತಿಯೋರ್ವ...

ಮಂಗಳೂರು: ಕರಾವಳಿಯಲ್ಲಿ ಮುಂಗಾರು ಮಳೆ ಆರಂಭವಾಗಿದೆ. ಅರಬ್ಬೀ ಸಮುದ್ರದಲ್ಲಿ ಚಂಡಮಾರುತ ಉಂಟಾದ...


ಮಂಗಳೂರು; ನಗರದ ರೌಡಿಶೀಟರ್ ಒಬ್ಬನ ಮೇಲೆ ನಗರದ ಪಚ್ಚನಾಡಿ ಎಂಬಲ್ಲಿ ಪೊಲೀಸರು...

ಮಂಗಳೂರು: ಬಿಜೆಪಿಯ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಸಂಘದಿಂದ ಬಂದು ಚತುರ ಸಂಘಟಕ,...


ಬೆಂಗಳೂರು: ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುವುದಂತೂ ಗ್ಯಾರಂಟಿ ಹಾಗಾದರೆ ರೇವಣ್ಣ ಆವೇಶದಲ್ಲಿ...

ಉಡುಪಿ: ಉಡುಪಿಯ ಮಲ್ಪೆ ಬಂದರಿನಿಂದ ಏಳು ಮಂದಿ ಮೀನುಗಾರರು ಬೋಟ್ ಸಮೇತ...


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಾಡಂಚಿನಲ್ಲಿ ಕಾಡುಕೋಣಗಳ ಹಾವಳಿ ಹೆಚ್ಚಿದೆ. ಕಾಡುಕೋಣಗಳ...

ಪುಂಜಾಲಕಟ್ಟೆ: ಕಾಡಿನಿಂದ ಊರಿಗೆ ಬಂದ ಕಾಡುಕೋಣವೊಂದು ಗೋಬರ್‌ ಗ್ಯಾಸ್‌ ಗುಂಡಿಯೊಳಗೆ ಬಿದ್ದ ಘಟನೆ...


Copyright 2019 www.policevarthe.com | All Right Reserved
error: Content is protected !!