Thursday, February 21 , 2019 4:55 PMಮಂಗಳೂರಿನಲ್ಲಿ ದಕ್ಷ ಪ್ರಾಮಾಣಿಕ ಅಧಿಕಾರಿಗಳಿಗಿಲ್ಲವೇ ಬೆಲೆ.?!; ಸಿಸಿಬಿ ಎಸ್‌ಐ ಕಬ್ಬಾಳ್ ರಾಜ್‌ಗೆ ವರ್ಗಾವಣೆ2452

ಮಂಗಳೂರು: ದಕ್ಷ, ಪ್ರಮಾಣಿಕ ಅಧಿಕಾರಿಯಾಗಿದ್ದ ಎಸ್‌ಐ ಕಬ್ಬಾಳ್ ರಾಜ್ ಅವರನ್ನು ಸಿಸಿಬಿಯಿಂದ ಸಂಚಾರಿ ಠಾಣೆಗೆ ವರ್ಗಾಯಿಸಲಾಗಿದೆ. ಸಿಸಿಬಿಯಲ್ಲಿ ಕಳೆದ ೪ ತಿಂಗಳಿಂದ ಕಾರ್ಯನಿರ್ವಹಿಸುತ್ತಿದ್ದ ಕಬ್ಬಾಳ್ ರಾಜ್, ಮಸಾಜ್‌ಸೆಂಟರ್‍ಗಳಿಗೆ ದಾಳಿಮಾಡಿರುವುದು, ಡ್ರಗ್ಸ್ ಜಾಲವನ್ನು ಹತ್ತಿಕ್ಕಲು ಯತ್ನಿಸಿದ್ದೇ ವರ್ಗಾವಣೆಗೆ ಕಾರಣ ಎನ್ನಲಾಗಿದೆ.

ಎಲ್ಲರ ಕೃಪಾಶೀರ್ವಾದದೊಂದಿಗೆ ಯಾವುದೇ ಹಣಕಾಸು ಮುಗ್ಗಟ್ಟು ಇಲ್ಲದೆ ವರ ಲಕ್ಷ್ಮೀ ಮಹಾತ್ಮೆಯಿಂದ ಭರ್ಜರಿಯಾಗಿ ಸಾಗುತ್ತಿತ್ತು. ಆದರೆ ಇದಕ್ಕೇಲ್ಲಾ ಇದೀಗ ಪ್ರಾಮಾಣಿಕ, ದಕ್ಷ ಎಸ್‌ಐ ಕಬ್ಬಳ್ ರಾಜ್ ಅಡ್ಡಿಯಾಗಿರುವುದೇ ಮೇಲಧಿಕಾರಿಗಳ ಕೆಂಗಣ್ಣಿಗೆ ಕಾರಣ ಎನ್ನಲಾಗಿದೆ. ವರ್ಗಾವಣೆ ಹಿಂದೆ ಇತ್ತೀಚೆಗೆ ನಡೆದ ಡ್ರಗ್ಸ್ ಜಾಲ ವಿರುದ್ಧ ದಾಳಿಯೇ ಕಾರಣ ಎನ್ನಲಾಗುತ್ತಿದ್ದು, ಸಿಸಿಬಿಯನ್ನು ಶಿಸ್ತುಬದ್ಧ ಗೊಳಿಸಿ ಎಂದು ಉಸ್ತುವಾರಿ ಸಚಿವ ಯು.ಟಿ.ಖಾದರ್ ಸೂಚಿಸಿರುವ ಹಿನ್ನೆಲೆಯಲ್ಲಿ ಪೊಲೀಸ್ ಕಮಿಷನರ್ ಕ್ರಮ ಕೈಗೊಂಡಿದ್ದು, ಆದರೆ ಭ್ರಷ್ಟಾಚಾರಿಗಳನ್ನು ರಕ್ಷಿಸಲು ದಕ್ಷ ಪ್ರಾಮಾಣಿಕ ಅಧಿಕಾರಿ ಕಬ್ಬಳ್ ರಾಜ್‌ನನ್ನು ಬಲಿ ನೀಡಲಾಗಿದೆ ಎನ್ನಲಾಗಿದೆ.

ಈ ಹಿಂದೆ ಬಿಜೆಪಿ, ಕಾಂಗ್ರೆಸ್ ರಾಜಕಾರಣಿಗಳ ಮರ್ಜಿಗೆ ಬೀಳದೆ ಕಾನೂನು ಪ್ರಕಾರ ನಡೆದುಕೊಳ್ಳುತ್ತಿದ್ದ ಕಬ್ಬಳ್ ರಾಜ್‌ನನ್ನು ಹಲವು ಬಾರಿ ವರ್ಗಾವಣೆ ಗೊಳಿಸಲಾಗಿತ್ತು. ಬಂಟ್ವಾಳದಲ್ಲಿ ಕಾಂಗ್ರೇಸ್ ನಾಯಕರ ಬೆಂಬಲಿಗರ ವಿರುದ್ಧ ಕ್ರಮಕ್ಕೆ ಮುಂದಾದ ಕಬ್ಬಾಳ್ ರಾಜ್‌ಗೆ ವರ್ಗಾವಣೆ ಮಾಡಲಾಗಿತ್ತು. ತನ್ನ ನ್ಯಾಯ ನಿಷ್ಠೂರತೆಯಿಂದ ರಾಜಕಾರಣಿಗಳ ನಿದ್ದೆಕೆಡಿಸಿದ್ದ ಕಬ್ಬಳ್ ರಾಜ್‌ಗೆ ಸಿಸಿಬಿಯಲ್ಲಿರುವ ಕೆಲ ನಾಯಕರ ಕೃಪಾಪೋಷಿತ ಅಧಿಕಾರಿಗಳು ಅನ್ಯಾಯ ಮಾಡಿದರೂ ನ್ಯಾಯ ಮಾರ್ಗದಲ್ಲಿರುವ ಕಬ್ಬಳ್ ರಾಜ್‌ಗೆ ಶಿಕ್ಷೆ ಅನುಭವಿಸುವಂತಾಗಿದೆ.

ಖಾಲಿ ಇದ್ದ ಹುದ್ದೆಗಳಿಗೆ ಒಒಡಿ ಮೂಲಕ ಭರ್ತಿ ಮಾಡಲಾಗಿದೆ. ಕಬ್ಬಾಳ್ ಜತೆ ಇತರ ಐವರನ್ನು ತಾತ್ಕಾಲಿಕವಾಗಿ ವರ್ಗಾಯಿಸಲಾಗಿದೆ. ಇದು 15 ದಿನದವರೆಗೆ ಮಾತ್ರ.
ಡ್ರಗ್ಸ್ ದಾಳಿ ಬಳಿಕ ಆರೋಪ ಸಿಸಿಬಿ ಮೇಲೆ ಬಂದದ್ದು ನಿಜ. ಆದರೆ ಕಬ್ಬಳ್ ರಾಜ್ ಗೂ ಅದಕ್ಕೂ ಯಾವುದೇ ಸಂಬಂಧ ಇಲ್ಲ-    ಟಿ.ಆರ್.ಸುರೇಶ್, ಪೊಲೀಸ್ ಕಮಿಷನರ್ ಮಂಗಳೂರು ನಗರ

error: Content is protected !!