Sunday, June 16 , 2019 5:04 AM

ಕ್ರೈಂ












ಬೆಳ್ತಂಗಡಿಯಲ್ಲಿ ಕೇಸರಿಗೆ ಬೆಂಕಿ! ; ಪ್ರತಿಭಟನೆಗೆ ಧುಮುಕಿದ ತಿಮರೋಡಿ



8191

ಮಂಗಳೂರು; ಹಿಂದುತ್ವವೇ ಉಸಿರಾಗಿರುವ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಬೆಳ್ತಂಗಡಿಯಲ್ಲಿ ಹಿಂದುತ್ವಕ್ಕೆ ಅವಮಾನ ಆದಾಗ ಮತ್ತೆ ಎದ್ದು ನಿಂತಿದ್ದಾರೆ.

ಬೆಳ್ತಂಗಡಿ ಮಿನಿ ವಿಧಾನಸೌಧದ ಎದುರು ಸಂಘಟನೆಯೊಂದು ಕೇಸರಿ ವಸ್ತ್ರ ಮತ್ತು ಮನುಸ್ಮೃತಿ ಯನ್ನು ಸುಟ್ಟ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಮಹೇಶ್ ಶೆಟ್ಟಿ ತಿಮರೋಡಿ ಬಳಗ ಬುಧವಾರ ಪ್ರತಿಭಟನೆ ನಡೆಸಿದೆ. ಮುನ್ನೂರಕ್ಕೂ ಹೆಚ್ಚು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ಧರ್ಮ ವಿರೋಧಿಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಹಿಂದುತ್ವದ ಗೌರವವನ್ನೇ ಸುಟ್ಟು ಹಾಕಿದವರ ವಿರುದ್ಧ ಕ್ರಮ ತೆಗೆದುಕೊಳ್ಳದಿದ್ದರೆ ವಿಚ್ಛಿದ್ರಕಾರಿ ಶಕ್ತಿಗಳ ವಿರುದ್ಧ ಬೃಹತ್ ಹೋರಾಟ ಸಂಘಟಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.


ಕೇಸರಿ ಬೆಂಕಿಯಲ್ಲಿ ಬೀಡಿ ಹೊತ್ತಿಸಿಕೊಂಡ ಕೀಡಿಗೇಡಿಗಳು !

ಈ ಮಧ್ಯೆ ಕಿಡಿಗೇಡಿಗಳು ಹಿಂದುತ್ವದ ನಾಯಕರನ್ನು ಎತ್ತಿಕಟ್ಟುವ ಕೆಲಸಕ್ಕೆ ಮುಂದಾಗಿವೆ. ಹಿಂದುತ್ವ ರಕ್ಷಣೆ ಮಾಡುತ್ತೇವೆ ಎನ್ನುವ ಕೆಲವು ಮೀರ್ ಸಾಧಕರು ಹಿಂದೂ ನಾಯಕ ತಿಮರೋಡಿ ವಿರುದ್ಧವೇ ಟೀಕೆ ಮಾಡುತಿದ್ದಾರೆ. ಈ ಮೂಲಕ ಹಿಂದುತ್ವದ ನಾಯಕರ ನಡುವೆ ಸಂಘರ್ಷ ಉಂಟು ಮಾಡಲು ಯತ್ನಿಸುತ್ತಿವೆ.

ಹಿಂದುತ್ವ ಅರಳಿಸುವ ದೀಪವಾಗದೆ ಬೆಂಕಿ ಹಚ್ಚುವ ದೀಪದಂತೆ ಕಾರ್ಯ ನಿರ್ವಹಿಸುತ್ತಿರುವ ಕಿಡಿಗೇಡಿಗಳು, ಕೇಸರಿ ವಸ್ತ್ರಕ್ಕೆ ಬೆಂಕಿ ಕೊಟ್ಟದ್ದನ್ನೇ ತನ್ನ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ಹೀನ ಸ್ಥಿತಿಗೆ ತಲುಪಿಸುರುವುದು ವಿಷಾದನೀಯ. ನಿಜವಾಗಿ ಹಿಂದುತ್ವದ ಮೇಲೆ ಗೌರವ ಇದ್ದರೆ ಕೇಸರಿ ವಸ್ತ್ರ ಸುಟ್ಟವರ ವಿರುದ್ಧ ಧ್ವನಿ ಎತ್ತಲಿ. ತಿಮರೋಡಿ ವಿರುದ್ಧ ರಾಜಕೀಯ ದ್ವೇಷ ಇದ್ದರೆ ರಾಜಕೀಯದಲ್ಲಿಯೇ ನೋಡಿಕೊಳ್ಳಲಿ. ಆದರೆ ಇದಕ್ಕಾಗಿ ಹಿಂದೂ ಗೌರವ ಸ್ವರೂಪವಾದ ಕೇಸರಿ ವಿಚಾರದಲ್ಲಿ ರಾಜಕೀಯ ಲಾಭ ಮಾಡಿಕೊಂಡು, ಬುದ್ಧಿಜೀವಿಗಳ ರೀತಿ ವರ್ತಿಸುವುದು ಸರಿಯಲ್ಲ ಎನ್ನುವುದು ಹಿರಿಯ ಹಿಂದೂ ಮುಖಂಡರೊಬ್ಬರ ಅಭಿಪ್ರಾಯ.

More

ಮಡಿಕೇರಿ: ನಗರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಸಿದೆ. ಶಿಕ್ಷಕಿಯನ್ನು ಕೊಂದ ವ್ಯಕ್ತಿಯೋರ್ವ...

ಮಂಗಳೂರು: ಕರಾವಳಿಯಲ್ಲಿ ಮುಂಗಾರು ಮಳೆ ಆರಂಭವಾಗಿದೆ. ಅರಬ್ಬೀ ಸಮುದ್ರದಲ್ಲಿ ಚಂಡಮಾರುತ ಉಂಟಾದ...


ಮಂಗಳೂರು; ನಗರದ ರೌಡಿಶೀಟರ್ ಒಬ್ಬನ ಮೇಲೆ ನಗರದ ಪಚ್ಚನಾಡಿ ಎಂಬಲ್ಲಿ ಪೊಲೀಸರು...

ಮಂಗಳೂರು: ಬಿಜೆಪಿಯ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಸಂಘದಿಂದ ಬಂದು ಚತುರ ಸಂಘಟಕ,...


ಬೆಂಗಳೂರು: ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುವುದಂತೂ ಗ್ಯಾರಂಟಿ ಹಾಗಾದರೆ ರೇವಣ್ಣ ಆವೇಶದಲ್ಲಿ...

ಉಡುಪಿ: ಉಡುಪಿಯ ಮಲ್ಪೆ ಬಂದರಿನಿಂದ ಏಳು ಮಂದಿ ಮೀನುಗಾರರು ಬೋಟ್ ಸಮೇತ...


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಾಡಂಚಿನಲ್ಲಿ ಕಾಡುಕೋಣಗಳ ಹಾವಳಿ ಹೆಚ್ಚಿದೆ. ಕಾಡುಕೋಣಗಳ...

ಪುಂಜಾಲಕಟ್ಟೆ: ಕಾಡಿನಿಂದ ಊರಿಗೆ ಬಂದ ಕಾಡುಕೋಣವೊಂದು ಗೋಬರ್‌ ಗ್ಯಾಸ್‌ ಗುಂಡಿಯೊಳಗೆ ಬಿದ್ದ ಘಟನೆ...


Copyright 2019 www.policevarthe.com | All Right Reserved
error: Content is protected !!