Thursday, February 21 , 2019 5:55 PMಡೀಲ್ ನೌಫಾಲ್ ಜತೆ ಪೊಲೀಸರ ಬಿಗ್ ಡೀಲ್ !1252
Posted By; Ranjith Madanthyar
ಮಂಗಳೂರು; ಜೈಲಿನಲ್ಲಿ ಕೈದಿಯ ಜತೆ ಮಾತನಾಡಬೇಕಾದರೂ ನೂರಾರು ಕಾನೂನು ತೊಡಕುಗಳು. ಆದರೆ ಕೈದಿಗಳ ಒಯ್ಯುವ ವಾಹನದಲ್ಲಿಯೇ ಆಪ್ತರನ್ನು ಭೇಟಿ ಮಾಡಿಸಿದರೆ ಕೈದಿಗೂ, ಮನೆಯವರಿರಗೂ, ಪೊಲೀಸರಿಗೂ ಎಲ್ಲರಿಗೂ ಲಾಭವೇ ಲಾಭ !
ಹೇಗೆ ಅಂತೀರಾ, ಮಂಗಳೂರಿನ ಕದ್ರಿ ಪೊಲೀಸ್ ಠಾಣೆ ಮತ್ತು ಸಕ್ರ್ಯೂಟ್ ಹೌಸ್ ಮಧ್ಯ ಭಾಗದಲ್ಲಿಯೇ ಇಂತಹ ಒಂದು ಕೈದಿ ಮತ್ತು ಸಂಬಂಧಿಕರ ಭೇಟಿಯ ಬಿಗ್ ಡೀಲ್ ನಡೆದೇ ಹೋಗಿದೆ.
ಬುಧವಾರ ಸಂಜೆ 6.33ರ ವೇಳೆಗೆ ತುಮಕೂರು ( ಕೆಎ 06- ಜಿ- 545) ಪೊಲೀಸ್ ವ್ಯಾನ್‍ನಲ್ಲಿ ಡೀಲ್… ನೌಫಾಲ್ ಎಂಬ ಕತರ್ನಾಕ್ ಕೈದಿಯನ್ನು ಕರೆದೊಯ್ಯುತ್ತಿದ್ದರು. ಕದ್ರಿ ಬಳಿ ವ್ಯಾನ್ ನಿಂತಿತು ಅಷ್ಟರಲ್ಲಿ ಕೈದಿಯ ಸಂಬಂಧಿಕರು ಆತುರಾತುರವಾಗಿ ವ್ಯಾನ್ ಬಳಿ ಬಂದು ಅತ್ತು ಕರೆದು ಮಾತು ಕತೆ ನಡೆಸಿದರು. ಈ ವೇಳೆ ನೌಫಾಲ್ ಮಗುವನ್ನು ಮುದ್ದಿಸಿದರು. 15 ನಿಮಿಷಗಳ ಕಾಲ ಭಾವುಕ ಭೇಟಿ. ಕುಶಲೋಪರಿ ಪೊಲೀಸರ ನೇತೃತ್ವದಲ್ಲಿ ರಾಜಾರೋಶವಾಗಿ ನಡೆಯಿತು.
ಈ ರೀತಿ ಮಾಡುವುದು ಕಾನೂನಿಗೆ ವಿರುದ್ಧ. ಆದರೆ ಪೊಲೀಸರು ಕಾನೂನು ಉಲ್ಲಂಘಿಸಿ ಕೈದಿಗಳ ಸಂಬಂಧಿಕರಿಗೆ ಭೇಟಿ ಅವಕಾಶ ಮಾಡಿಕೊಟ್ಟಿದ್ದಾರೆ. ಇಂಥ ಸಂದರ್ಭದಲ್ಲಿ ಕೈದಿ ತಪ್ಪಿಸಿಕೊಳ್ಳುವ ಅಥವಾ ಅಪಹರಿಸುವ ಸಾಧ್ಯತೆಗಳು ಹೆಚ್ಚುವಾರ್ತೆ.ಈ ಕುರಿತು Policevarthe.com ಗೆ ತುಮಕೂರು ಡಿಆರ್ ಡಿವೈಎಸ್‍ಪಿ ಮಂಜುನಾಥ್ ಪ್ರತಿಕ್ರಿಯಿಸಿದ್ದು, ನಮ್ಮ ವಾಹನ ಹೋಗಿರುವುದು ನಿಜ. ಚಿಕ್ಕನಾಯಕನ ಹಳ್ಳಿ ಕೋರ್ಟ್‍ಗೆ ಕೈದಿಯನ್ನು ಹಾಜರುಪಡಿಸಿ ಅಲ್ಲಿಂದ ಮತ್ತೆ ಮಂಗಳೂರು ಜೈಲ್‍ಗೆ ಬಿಡಲಾಗಿದೆ. ಈ ರೀತಿ ಘಟನೆ ನಡೆದಿರುವ ಕುರಿತು ಮಾಹಿತಿ ನನಗೆ ಸಿಕ್ಕಿಲ್ಲ ಎಂದಿದ್ದಾರೆ.
ಪೊಲೀಸ್ ವಾರ್ತೆ.ಕಾಂ ವೆಬ್ ಸೈಟ್ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಪೊಲೀಸರ ಈ ಡೀಲ್ ಬಯಲಾಗಿದೆ.
error: Content is protected !!