Thursday, February 21 , 2019 5:29 PM











ಮಂಗಳೂರಿನಲ್ಲಿ ಮತ್ತೇರಿದ ಯುವತಿಯ ಬೀದಿ ರಂಪಾಟ; ನಶೆ ಏರಿದ ಯುವತಿ ರಿಕ್ಷಾ ಚಾಲಕನಿಗೆ ಮಾಡಿದ್ದೇನು ಗೊತ್ತೆ ?



4213

Posted By; Ranjith Madanthyar

ಒಳಗೆ ಸೇರಿದರೆ ಗುಂಡು ಹಾಡು ಕೇಳಿರಬಹುದು. ಅದೇ ರೀತಿಯ ಘಟನೆ ಮಂಗಳೂರಿನ‌ ನಡು ಬೀದಿಯಲ್ಲಿ ನಡೆದು‌ ಹೋಗಿದೆ.

ಮಂಗಳೂರು; ನಡುಬಿದಿಯಲ್ಲಿಯೇ ಯುವತಿಯೊಬ್ಬಳು ಕುಡಿದ ನಶೆಯಲ್ಲಿ ರಂಪಾಟ ನಡೆಸಿದ್ದಾಳೆ.  ಮಂಗಳೂರಿನಲ್ಲಿ ರಾತ್ರಿ ವೇಳೆಯಲ್ಲಿ ನಶೆ ಏರಿಸಿಕೊಂಡು ವಾಹನ ಚಲಾಯಿಸುವುದು, ನಡುರಾತ್ರಿಯಲ್ಲಿಯೂ ರಸ್ತೆಯಲ್ಲಿಯೇ ಗುಂಪು ಗುಂಪಾಗಿ ತಿರುಡಾಡುವುದು ನಡೆಯುತ್ತಿದೆ. ಈ ಮಧ್ಯೆ ನಿನ್ನೆ ರಾತ್ರಿ ಸುಮಾರು 10: 22ರ ವೇಳೆ ಯುವತಿಯೊಬ್ಬಳು ನಶೆ ಏರಿಸಿಕೊಂಡು ನಿಯಂತ್ರಣವೇ ಇಲ್ಲದೆ ತೂರಾಡುತ್ತಾ ಓಲಾಡುತ್ತಾ ಸ್ಕೂಟರ್ ಚಲಾಯಿಸಿಕೊಂಡು ರಂಪಾಟ ನಡೆಸಿದ್ದಾಳೆ. ಇದೇ ವೇಳೆ ಸ್ಕೂಟರನ್ನು ಅಡ್ಡಗಟ್ಟಿದ ರಿಕ್ಷಾ ಚಾಲಕ ಮತ್ತು ಯುವತಿಯ ಮಧ್ಯೆ ನಡುರಸ್ತೆಯಲ್ಲಿಯೇ ಮಾತಿನ ಚಕಮಕಿ ನಡೆದಿದೆ.

ವಿಡಿಯೋ ನೋಡಲು‌ ಇಲ್ಲಿ ಕ್ಲಿಕ್‌ ಮಾಡಿ

ಕಂತೆ ಕಂತೆ ಹಣ ತೆಗೆದು ನಿನಗೆಷ್ಟು ಬೇಕು ಎಂದು ಅಬ್ಬರಿಸುತ್ತಿದ್ದ ಯುವತಿಗೆ ದೇಹದ ಮೇಲೆ ನಿಯಂತ್ರಣ ಇರಲಿಲ್ಲ. ಈಕೆಯ ರಂಪಾಟಕ್ಕೆ ಸ್ಥಳದಲ್ಲಿ ಸೇರಿದ್ದ ಜನ ಆಕ್ರೋಶ ವ್ಯಕ್ತಪಡಿಸಿದು.

ಪೊಲೀಸರಿಗೆ ಮಾಹಿತಿ ಸಿಕ್ಕಿ ಅರ್ಧ ಗಂಟೆ ಕಳೆದರೂ ಸ್ಥಳಕ್ಕೆ ಬಂದಿಲ್ಲ!

ಘಟನೆಯ ನಡೆಯುತ್ತಿದಂತೆ ಡಿಸಿಪಿ ಅವರಿಗೆ ಮಾಹಿತಿ ನೀಡಲಾಗಿದೆ. ಆದರೆ ಸುಮಾರು ಅರ್ಧ ಗಂಟೆ ವರೆಗೂ ಪೊಲೀಸರು ಸ್ಥಳಕ್ಕೆ ಬಾರಲೇ ಇಲ್ಲ.

error: Content is protected !!