Thursday, February 21 , 2019 5:37 PMಮಹಿಳೆ ಮೇಲೆ ಕೈ ಹಾಕಿದನೆಂದು ತಲೆ ಒಡೆದ ಯುವಕ !, ‌ಗಂಭೀರ ಸ್ಥಿತಿಯಲ್ಲಿದ್ದ ಗಾಯಾಳನ್ನು ತಮ್ಮ ಜೀಪಲ್ಲಿಯೇ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೇರೆದ ಕದ್ರಿ ಪೊಲೀಸರು2013

Posted By; Ranjith Madanthyar

ಮಂಗಳೂರು; ಕದ್ರಿ ಕ್ರಿಕೆಟರ್ಸ್(ರಿ) ನ ವತಿಯಿಂದ ಮೈದಾನದಲ್ಲಿ ನಡೆಯುತ್ತಿದ್ದ ಮೊಸರು ಕುಡಿಕೆ ಮನೋರಂಜನೆ ಕಾರ್ಯಕ್ರಮದ ವೇಳೆ ವ್ಯಕ್ತಿಯೊಬ್ಬರಿಗೆ ಹೊಡೆದು, ತಲೆಗೆ ಗಂಭೀರ ಏಟಾಗಿದೆ. ಹಲ್ಲೆಗೊಳಗಾದ ‌ಗೋಪಿನಾಥ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ‌ಯ ವಿವರ; ಕದ್ರಿ ಕ್ರಿಕೆಟ್ ರ್ಸ್ ಮೈದಾನದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದ ಸಮಯ ತನ್ನ ತಾಯಿಯ ಮೇಲೆ ವ್ಯಕ್ತಿಯೊಬ್ಬರು ಕೈ ಮಾಡಿದ ಹಿನ್ನಲೆಯಲ್ಲಿ ಮಗ ವ್ಯಕ್ತಿಯ ಮೇಲೆ ಹಲ್ಲೆ ನಡೆದಿದ್ದಾನೆ. ಹಲ್ಲೆ ಗೊಳಾಗಾದ ವ್ಯಕ್ತಿಯೂ ನೆಲಕ್ಕೆ ಬಿದ್ದು, ತಲೆ ಭಾಗಕ್ಕೆ ಗಾಯವಾಗಿದ್ದು ರಕ್ತ ಹೊರ ಬರುತ್ತಿತ್ತು. ಹಲ್ಲೆಗೊಳಾಗದ ವ್ತಕ್ತಿಯನ್ನು ಸ್ವತಃ ಕದ್ರಿ ಠಾಣೆಯ ಇನ್ಸ್ ಫೆಕ್ಟರ್ ಮಾರುತಿ ನಾಯಕ್ ಹಾಗೂ ಇಬ್ಬರು ಸಿಬ್ಬಂದಿಯ ಸಹಾಯದಿಂದ ಎತ್ತಿಕೊಂಡು ಬಂದು ಪೊಲೀಸ್ ಜೀಪಿನಲ್ಲಿಯೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಜತೆ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.

ಮಧ್ಯ ರಾತ್ರಿಯೇ ಆಸ್ಪತ್ರೆಗೆ ಕಮೀಷನರ್ ಭೇಟಿ

ಘಟನೆಯ ಬಗ್ಗೆ ಮಾಹಿತಿ ಪಡೆದ ನಗರದ ಪೊಲೀಸ್ ಕಮೀಷನರ್ ನಡು ರಾತ್ರಿ 1 ಗಂಟೆಗೆ ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುವಿನ ಅರೋಗ್ಯ ಸ್ಥಿತಿಯ ವಿವರ ಪಡೆದುಕೊಂಡರು.

ಸ್ಥಳದಲ್ಲಿ ಎಸಿಪಿ ಉದಯ ನಾಯಕ್, ಕದ್ರಿ ಠಾಣಾ ಎಸ್ಐ ಮಾರುತಿ, ಹಾಗೂ ಸಿಬ್ಬಂದಿಗಳಿದ್ದರು

error: Content is protected !!