Friday, October 19 , 2018 4:08 AM











ಯುವಕರ ಕಣ್ಮಣಿ ಮಿಥುನ್ ರೈ “ಕೈ” ಹಿಡಿಯುವ ಅದೃಷ್ಟವಂತೆ ಯಾರು ಗೋತ್ತೇ.? 



10472

ಮಂಗಳೂರು: ಯುವ ಕಾಂಗ್ರೆಸ್ ನ ಕಣ್ಮಣಿ ಮಿಥುನ್ ರೈ ದಾಂಪತ್ಯ ಜೀವನಕ್ಕೆ ಶೀಘ್ರದಲ್ಲಿಯೇ ಕಾಲಿರಿಸಲಿದ್ದಾರೆ.

ಮಂಗಳೂರಿನ ಶರಣ್ಯ ಶೆಟ್ಟಿ ಜತೆ ನಿನ್ನೆ  ಮನೆಯಲ್ಲಿ ಹಿರಿಯರ ಸಮ್ಮುಖದಲ್ಲಿ ತಾಂಬೂಲ ವಿನಿಮಯ ನಡೆಯಿತು. ಕೇವಲ ಕುಟುಂಬದ 50 ಮಂದಿ ಮಾತ್ರ ಶುಭ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು.

ಶರಣ್ಯ ಶೆಟ್ಟಿ ಎಂಕಾಂ ಪದವೀಧರೆ ಆಗಿದ್ದು ಮಧ್ಯಮ ಕುಟುಂಬದ ಹೆಣ್ಣುಮಗಳು. ಮಿಥುನ್ ರೈಗೆ ಅನೇಕ ಅಗರ್ಭ ಶ್ರೀಮಂತ ಮನೆತನದ ಸಂಬಂಧಗಳು ಬಂದಿದ್ದವು. ಆದರೆ ತನಗೆ ಒಪ್ಪುವ ಸುಶಿಕ್ಷಿತ ಹುಡುಗಿಯನ್ನೇ ವರಿಸಲು ರೈ ಅವರು  ನಿರ್ಧರಿಸಿದ್ದಾರೆ. ಇದು ಸಂಪೂರ್ಣ ಅರೇಂಜ್ ಮ್ಯಾರೇಜ್. ಮದುವೆ ಮಾರ್ಚ್‌ನಲ್ಲಿ  ನಡೆಯಲಿದೆ.

ಮೂಡುಬಿದರೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಮಿಥುನ್ ರೈ ಪ್ರಬಲ ಯುವ ನಾಯಕ. ಟಿಕೆಟ್ ಕೈ ತಪ್ಪಿದ ಬಳಿಕ ದಿಲ್ಲಿಯಿಂದ ಮಂಗಳೂರಿಗೆ ಬಂದಿಳಿದ ಮಿಥುನ್ ರೈಯನ್ನು ಸ್ವಾಗತಿಸಲು ವಿಮಾನ ನಿಲ್ದಾಣದಲ್ಲಿ 5 ಸಾವಿರಕ್ಕೂ ಹೆಚ್ಚು  ಮಂದಿಗೆ ಆಗಮಿಸಿದ್ದು ಇತಿಹಾಸ.

ದೀಪಾವಳಿ ಹಬ್ಬದಂದು ಗೋವುಗಳನ್ನು ಬಡ ಬಗ್ಗರಿಗೆ ದಾನ ಮಾಡುವ ಮಿಥುನ್ ರೈ ಅಪ್ಪಟ ದೈವ ಭಕ್ತ. ಇದರ ಜತೆಯಲ್ಲಿ ನಿಷ್ಠ ಕಾಂಗ್ರೆಸಿಗ. ಕಾಂಗ್ರೆಸಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಯುವ ನಾಯಕರ ಪಟ್ಟಿಯಲ್ಲಿ ಮಿಥುನ್ ರೈಗೆ ಅಗ್ರ ಸ್ಥಾನ. ಮಾತ್ರವಲ್ಲದೇ ರಾಷ್ಟ್ರ ಮಟ್ಟದಲ್ಲಿ ರಾಜಕೀಯ ಸುದ್ದಿಯಲ್ಲಿರುವ ಡಿ.ಕೆ ಶಿವಕುಮಾರ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು ರೈ.

error: Content is protected !!