Thursday, December 13 , 2018 11:26 PM











ಕರಾವಳಿಯಲ್ಲೂ ಆಪರೇಶನ್ ಕಮಲ!; ಬಿಜೆಪಿಗೆ‌ ಸೇರುತ್ತಾರಂತೆ ಕೈ ನಾಯಕಿ ಪ್ರತಿಭಾ ಕುಳಾಯಿ!!



21355
ಮಂಗಳೂರು; ಆಪರೇಶನ್ ಕಮಲ ಕೇವಲ ರಾಜಧಾನಿಯಲ್ಲಿ ಎಂದು ತಿಳಿಯಬೇಡಿ, ಕರಾವಳಿಯಲ್ಲಿಯೂ ಸದ್ದಿಲ್ಲದೆ ನಡೆಯುತ್ತಿದೆ.
ಅಚ್ಚರಿ ಆಯ್ತೆ ? “ಸಾಯಲು ಮನಸ್ಸಿದ್ದವರು ಸಂಘ ಪರಿವಾರ ಸೇರಿ” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಇದೀಗ ಸಂಘ ಪರಿವಾರದ ರಾಜಕೀಯ ಶಕ್ತಿಯಾದ ಬಿಜೆಪಿ ಸೇರಲು ಸಜ್ಜಾಗಿದ್ದಾರೆ. ಇದಕ್ಕಾಗಿ ಪ್ರಭಾವಿ ಶಾಸಕರೊಬ್ಬರು ವೇದಿಕೆ ಅಣಿಗೊಳಿಸಿದ್ದಾರೆ. ಮೊದಲಿಗೆ ಆಫರ್ ಬಂದದ್ದೇ ಬಿಜೆಪಿ ಕಡೆಯಿಂದ. ಅನೇಕ ಬಾರಿ ಪುನರಾವರ್ತನೆ ಆಗಿದೆ. ಈ ಬಾರಿ ಮಾತ್ರ ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಪತನವಾಗುತ್ತಿದ್ದಂತೆಯೇ ಇತ್ತ ಕರಾವಳಿಯಲ್ಲಿ ಪ್ರತಿಭಾನ್ವಿತ ನಾಯಕಿಯೊಬ್ಬರು ತನ್ನ ಬೆಂಬಲಿಗರೊಡನೆ ಬಿಜೆಪಿ ಸೇರುವುದು ಖಚಿತವಾಗಿದೆ.
ಕರಾವಳಿಯ ಶಾಸಕರು, ಸಂಸದರ ಒಪ್ಪಿಗೆ ಪಡೆದ ಬಳಿಕವೇ ರಾಜ್ಯ ಬಿಜೆಪಿ ನಾಯಕರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆ ನಡೆಯಲಿದೆ. ಕುಳಾಯಿ ಜತೆ ಬೆಳ್ತಂಗಡಿಯ ಕಾಂಗ್ರೆಸ್ ನ ಪ್ರಮುಖ ನಾಯಕರ ಸಹಿತ ತಾಲೂಕುಗಳ ಅನೇಕ ಮಂದಿ ಮುಖಂಡರು ಇದೇ ಸಂದರ್ಭ ಸೇರ್ಪಡೆ ಪ್ರಕ್ರಿಯೆ ನಡೆಯಲಿದೆ ಎನ್ನುವುದು ಮೂಲಗಳಿಂತ ತಿಳಿದು ಬಂದಿದೆ.
ಮಾಜಿ ಶಾಸಕರ ಕಚೇರಿಯಲ್ಲಿ ಕಾಂಗ್ರೆಸ್ ಮುಖಂಡನಿಗೆ ಕಪಾಳ ಮೋಕ್ಷ ಮಾಡಿದ ಬಳಿಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಕಾರಣ ಕೇಳಿ ಪ್ರತಿಭಾ ಕುಳಾಯಿಗೆ ನೋಟಿಸ್ ಜಾರಿ ಮಾಡಿದ್ದರು. ಬಳಿಕ ಕಾಂಗ್ರೆಸ್‍ನಲ್ಲಿ ಮೂಲೆಗುಂಪು ಮಾಡುವ ಹುನ್ನಾರ ನಡೆದಿದೆ ಎಂಬ ಆರೋಪ ಪ್ರತಿಭಾ ಕುಳಾಯಿ ಬೆಂಬಲಿಗರದ್ದು. ಅಲ್ಪಸಂಖ್ಯಾತ ಮುಖಂಡನ ಮೇಲೆ ಹಲ್ಲೆ ನಡೆಸಿದ ಬಳಿಕ ಸುದ್ದಿ ತಿಳಿಯುತ್ತಿದ್ದಂತೆಯೇ ವಿಶ್ವಹಿಂದು ಪರಿಷತ್ ಮುಖಂಡ ಶರಣ್ ಪಂಪ್‍ವೆಲ್ ಸಹಿತ  ಸಂಘಪರಿವಾರ ಪ್ರತಿಭಾ ಕುಳಾಯಿ ಬೆಂಬಲಕ್ಕೆ ನಿಂತಿತ್ತು.
error: Content is protected !!