Sunday, June 16 , 2019 4:05 AM

ಕ್ರೈಂ
ಎಕ್ಸ್‌ಪರ್ಟ್ ಕಾಲೇಜಿನ ವಿದ್ಯಾರ್ಥಿ ನೆವಿಲ್ ಸಾಯುವ ಮುನ್ನ ಬರೆದ ಡೆತ್‌ನೋಟ್‌ನಲ್ಲಿ ಏನಿದೆ ಗೋತ್ತೆ..?!3591

ವಿಶೇಷ ವರದಿ; ರಂಜಿತ್ ಮಡಂತ್ಯಾರು

ಮಂಗಳೂರು: ಇದು ಸಹೃದಯರ ಎದೆ ಝಲ್ಲೆನಿಸುವ, ಮನ ಕರಗುವ ಕರುಣಾಜನಕ ವಿಚಾರ. ಪ್ರತಿಷ್ಠಿತ ಎಕ್ಸ್ ಪರ್ಟ್ ಕಾಲೇಜಿನ ವಿದ್ಯಾರ್ಥಿ ನೆವಿಲ್ ಫೆರ್ನಾಂಡಿಸ್ ಆತ್ಮಹತ್ಯೆಗೆ ಮುನ್ನ ಬರೆದಿರುವ ಡೆತ್ ನೋಟ್ ಪ್ರತಿಷ್ಠಿತ ಕಾಲೇಜುಗಳ ಕರಾಳ ಮುಖವನ್ನು ಹೊರ ಹಾಕಿದೆ. ರ‍್ಯಾಂಕ್ ತೆಗೆಯಬೇಕು ಎಂದು ಮಕ್ಕಳ ಬದುಕನ್ನು ಮುಕ್ಕುತ್ತಿರುವ ಶಿಕ್ಷಣ ಸಂಸ್ಥೆಗಳು, ಮಕ್ಕಳ ಬದುಕನ್ನು ನರಕ ಮಾಡುತ್ತಿರುವುದಕ್ಕೆ ಇದು ಜ್ವಲಂತ ಉದಾಹರಣೆಯಾಗಿದೆ. ಈ ಪತ್ರ ಬಹಿರಂಗವಾದರೆ ಮಕ್ಕಳು ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂಬ ನೈಜ ವಾಸ್ತವ ವಿಶ್ವಕ್ಕೆ ತಿಳಿಯಲಿದೆ.

ಪ್ರಾಂಶುಪಾಲರಿಗೆ ಕ್ಷಮೆ ಕೇಳಿ ಆರಂಭಿಸುವ ಪತ್ರದಲ್ಲಿ ಕೊನೆಗೆ ಎಕ್ಸ್ ಪರ್ಟ್ ಸಂಸ್ಥಾಪಕ ನರೇಂದ್ರ ಎಲ್.ನಾಯಕ್‌ಗೆ ಕೆಟ್ಟದಾಗಿ ನಿಂದಿಸುವ ಮೂಲಕ ನೋವಿನ ರೂಪದ ಆಕ್ರೋಶವನ್ನು ಹೊರಹಾಕಿದ್ದಾನೆ.

ನೆವಿಲ್ ಬರೆದ ಪತ್ರ ಎರಡು ಪ್ಯಾರದಲ್ಲಿ ನೋವನ್ನು ಹೊರಗೆಡಹಿದ್ದು ಹೀಗೆ; “ಎಕ್ಸ್ ಪರ್ಟ್ ಕಾಲೇಜಿನಲ್ಲಿ ಹುಡುಗಿಯರ ಜತೆ ಮಾತನಾಡುವುದನ್ನು ನಿಷೇಧಿಸಲಾಗಿದೆಯೇ..? ನಿಮ್ಮ ಶಾಲೆ, ಕಾಲೇಜು ಕೇವಲ ಹುಡುಗಿಯರಿಗೆ ಅಥವಾ ಹುಡುಗರಿಗೆ ಮೀಸಲಾಗಿದೆಯೇ..? ಕೊ ಎಜುಕೇಶನ್ ಇರುವ ಕಡೆ ಹುಡುಗಿಯರ ಜತೆ ಮಾತನಾಡಿದರೆ ದೊಡ್ಡ ತಪ್ಪೇ..? ಕಾಲೇಜಿನಲ್ಲಿ ಒಬ್ಬ ಹುಡುಗ, ಹುಡುಗಿ ಜತೆ ಅಥವಾ ಹುಡುಗಿ ಹುಡುಗನ ಜತೆ ಮಾತನಾಡಿದರೆ ಅದಕ್ಕೆ ತಪ್ಪು ಅರ್ಥ ಕಲ್ಪಿಸುವುದೇಕೆ..?”. “ನಾನು ಸಹಜವಾಗಿಯೇ ಎಲ್ಲರ ಜತೆ ಫ್ರೆಂಡ್ಲಿಯಾಗಿಯೇ ಇರುತ್ತೇನೆ. ನಾನು ಹುಡುಗಿಯರ ಜತೆ ಮಾತನಾಡಿದೆ ಎಂದರೆ ಅವರ ಜತೆ ಎಲ್ಲವೂ ಹಂಚಿಕೊಂಡಿದ್ದೇನೆ ಎಂದರ್ಥವಲ್ಲ. ಅದು ಕೇವಲ ನಿಷ್ಕಲ್ಮಶ ಗೆಳತನ.”. ಎಂದು ಬರೆದ ವಿದ್ಯಾರ್ಥಿ ನೆವಿಲ್ ಮುಂದಕ್ಕೆ ನರೇಂದ್ರ ಎಲ್.ನಾಯಕ್, ಹಾಗೂ ಎಕ್ಸ್ ಪರ್ಟ್ ಕಾಲೇಜ್ ಬಗ್ಗೆ ಆಕ್ರೋಶ ಬರಿತವಾಗಿ, ತೀರ ಕೆಟ್ಟದಾಗಿ (ಬರೆದ ವಾಕ್ಯವನ್ನು ನಾವು ಇಲ್ಲಿ ಬರೆಯುತ್ತಿಲ್ಲ) ನೋವಿನಿಂದ ಬರೆದು, ಒಂದು ಪೇಜ್ ಹೀಗೆ ಡೆತ್ ನೋಟ್ ಮುಕ್ತಾಯಗೊಳ್ಳುತ್ತದೆ.

ಇಷ್ಟು ಮಾತ್ರವಲ್ಲದೇ ಅಪ್ಪನಿಗೂ ಪ್ರತ್ಯೇಕವಾಗಿ ಪತ್ರ ಬರೆದಿದ್ದಾನೆ. ಆ ಪತ್ರ ಓದಿದರೆ ಕರಳು ಚುರುಕ್ ಎನ್ನುತ್ತದೆ. ಅಪ್ಪನನ್ನು ಪ್ರೀತಿಯಿಂದ ಡ್ಯಾಡ ಎಂದು ಕರೆದಿರುವ ನೆವಿಲ್, ನಿಮಗೆ ನನ್ನಿಂದಾಗಿ ಆಗಾಗ ಮುಜುಗರಕ್ಕೆ ಒಳಗಾಗುತ್ತಿರುವ ಕುರಿತು ಕ್ಷಮೆ ಕೇಳಿದ್ದು ತನ್ನ ನೋವು ತೋಡಿಕೊಂಡಿದ್ದಾನೆ. ಆದರೆ ಈ ಎಲ್ಲಾ ಘಟನೆಗಳಿಗೆ ಕಾರಣವಾಗಿರುವುದು ಎಕ್ಸ್‌ಪರ್ಟ್ ಕಾಲೇಜಿನಲ್ಲಿ ವಿಚಾರವೊಂದಕ್ಕೆ ಸಂಬಂಧಿಸಿದಂತೆ ನೆವಿಲ್‌ನನ್ನು ಅಮಾನತು ಮಾಡಲಾಗಿತ್ತು. ಮಾತ್ರವಲ್ಲದೇ ಅಮಾನತು ಮಾಡಿ ಕೆಲ ಸಮಯದಲ್ಲಿಯೇ ಕಾಲೇಜಿನ ನೋಟಿಸ್ ಬೋರ್ಡ್‌ನಲ್ಲಿ ಆತನ ಪೋಟೋವನ್ನು ಎಲ್ಲರಿಗೂ ಕಾಣುವ ರೀತಿಯಲ್ಲಿ ಹಾಕಲಾಗಿತ್ತು. ನಂತರ ನೆವಿಲ್ ಮಾತ್ರ ಸಂಪೂರ್ಣವಾಗಿ ತನ್ನ ಸ್ನೇಹಿತರ ಜೊತೆಗೆ ನೋವು ತೊಡಿಕೊಂಡಿದ್ದ. ಇದೇ ನೋವು ಆತನನ್ನು ಇತಂಹ ನಿರ್ಧಾರ ಮಾಡಲು ಕಾರಣವಾಗಿರಬಹುದು ಎನ್ನುವುದು ಮೂಲಗಳ ಮಾಹಿತಿ.

ಪ್ರಕರಣದ ಸಾರಾಂಶ; ಮೊದಲನೇ ವರ್ಷದ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಗೋವಾ ಮೂಲದ ನೆವಿಲ್ ನನ್ನು ಮತ್ತು ನೆವಿಲ್ ಜತೆ ಮಾತನಾಡಿದ ವಿದ್ಯಾರ್ಥಿನಿಯನ್ನೂ ಕಾಲೇಜು ಆಡಳಿತ ಮಂಡಳಿ ಸಸ್ಪೆಂಡ್ ಮಾಡಿತ್ತು. ಬಳಿಕ ಸಮವಸ್ತ್ರದಲ್ಲಿದ್ದ ಕಾಲೇಜಿನ ಆಂಬ್ಲಮ್ ಕೂಡಾ ಕಿತ್ತುಕೊಳ್ಳುವ ಮೂಲಕ ನಿಷ್ಕರುಣಿಯಾಂತೆ ಕಾಲೇಜ್ ಆಡಳಿತ ಮಂಡಳಿ ವ್ಯವಹರಿಸಿತ್ತು. ಇದರಿಂದ ತೀವ್ರ ನೊಂದ ನೆವಿಲ್ ಅವಮಾನ ತಾಳಲಾರದೇ ಉರ್ವದಲ್ಲಿರುವ ತನ್ನ ಮನೆಯಲ್ಲಿ ಸೆ.25ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.

More


ಮಂಗಳೂರು; ಕಡಿಮೆ ವಯಸ್ಸಿಗೆ ಐಪಿಎಸ್ ಆಗಿದ್ದ ಮಧುಕರ್ ಶೆಟ್ಟಿ ಬದುಕಿದ್ದರೆ ಕರ್ನಾಟಕ...


ಮಂಗಳೂರು; ಕುಖ್ಯಾತ ಕ್ರಿಮಿನಲ್, ರೌಡಿಶೀಟರ್ ಪ್ರವೀಣ್ ಪೂಜಾರಿ ಮೇಲೆ ಇದೀಗ ವಿದ್ಯಾರ್ಥಿನಿಯೊಬ್ಬಳಿಗೆ...


ಮಂಗಳೂರು: ಟಿಪ್ಪುವನ್ನು ರೋಧಿಸಿ ಭಾಷಣ ಮಾಡಿದ್ದ ಪತ್ರಕರ್ತ ಸಂತೋಷ್ ತಮ್ಮಯ್ಯ ಅವರ...

ಮಂಗಳೂರು; ಅಕ್ರಮ ಸ್ಫೋಟಕ ಮದ್ದು ಗುಂಡು ಸಾಗಾಟದಲ್ಲಿ ಲಂಚ ತಿಂದಿದ್ದ ಆರೋಪದ...


Copyright 2019 www.policevarthe.com | All Right Reserved
error: Content is protected !!