Thursday, February 21 , 2019 6:16 PMಕ್ಷುಲ್ಲಕ ಕಾರಣಕ್ಕೆ ತಲ್ವಾರ್‌ನಿಂದ ಕೊಚ್ಚಿ ವ್ಯಕ್ತಿಯ ಕೊಲೆ483

ಹುಬ್ಬಳ್ಳಿ: ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರನ್ನು ದುಷ್ಕರ್ಮಿಗಳು ತಲ್ವಾರ್ ನಿಂದ ಕೊಚ್ಚಿ ಕೊಲೆಗೈದ ಘಟನೆ ಹುಬ್ಬಳ್ಳಿಯ ತಾಬಿಬ್ ಲ್ಯಾಂಡ್ ಬಳಿ ನಡೆದಿದೆ.

ಕೊಲೆಯಾದ ವ್ಯಕ್ತಿಯನ್ನು ಇಮ್ತೀಯಾಜ್ ಕಣವಿ (35) ಅಲಿಯಾಸ್ ಕಾಡತೂಸ್ ಎಂದು ಗುರುತಿಸಲಾಗಿದೆ. ದಾವೂದ್ ನಾದಫ್ ಹಾಗೂ ಸಹಚರರು ಕೊಲೆಗೈದ ಆರೋಪಿಗಳು.

ಇಮ್ತೀಯಾಜ್ ಕಣವಿ ಹಾಗೂ ದಾವೂದ್ ಹುಬ್ಬಳ್ಳಿಯ ಮಂಟೂರ್ ರಸ್ತೆಯ ಮೌಲಾಲಿ ಜೊಪಡಿ ನಿವಾಸಿಗಳಾಗಿದ್ದು, ಊಟಕ್ಕೆಂದು ಹೊರಗಡೆ ಬಂದಾಗ ಕ್ಷುಲ್ಲಕ ಕಾರಣಕ್ಕಾಗಿ ಇಬ್ಬರ ನಡುವೆ ಜಗಳವಾಗಿದೆ. ಈ ಜಗಳ ತಾರಕಕ್ಕೇರಿ ದಾವೂದ್ ಸಹಚರರು ಇಮ್ತಿಯಾಜ್ ಅವರನ್ನು ಕೊಲೆಗೈದಿದ್ದಾರೆ.

ಶಹರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!