Thursday, February 21 , 2019 5:25 PMಹೆಚ್1ಎನ್1ಗೆ ಬೀದರ್‌ನಲ್ಲಿ ಮತ್ತೊಂದು ಬಲಿ: ಗ್ರಾಮಸ್ಥರಲ್ಲಿ ಆತಂಕ66

ಬೀದರ್: ಜಿಲ್ಲೆಯಲ್ಲಿ ಹೆಚ್1ಎನ್1ಗೆ ಬಳಲಿ ಮತ್ತೊಬ್ಬ ಯುವಕನೋರ್ವ ಬಲಿಯಾಗಿದ್ದು, ಗಡಿ ಭಾಗದ ಗ್ರಾಮಗಳಲ್ಲಿ ರೋಗಬಾಧೆಯ ಆತಂಕ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳ ತಂಡ ಗ್ರಾಮಗಳಲ್ಲಿ ಬಿಡಾರ ಹೂಡಿದೆ.

ಜಿಲ್ಲೆಯ ಕಮಲನಗರ ತಾಲೂಕಿನ ಹೊರಂಡಿ ಗ್ರಾಮದಲ್ಲಿ ವಿಜಯಕುಮಾರ ರಾಮಚಂದ್ರ(32) ಎಂಬಾತ ರೋಗಬಾಧೆಯಿಂದ ಅಸ್ವಸ್ಥಗೊಂಡು ಮಹಾರಾಷ್ಟ್ರದ ಉದಗೀರ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾನೆ ಎಂದು ವೈದ್ಯಾಧಿಕಾರಿ ಡಾ. ಮಹೇಶ ಬಿರಾದರ ಸ್ಪಷ್ಟಪಡಿಸಿದ್ದಾರೆ.

ಜಿಲ್ಲೆಯಲ್ಲಿ ಹೆಚ್1ಎನ್1 ಸೋಂಕಿನಿಂದ ಕಳೆದ ಹದಿನೈದು ದಿನದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಹೀಗಾಗಿ ಹೊರಂಡಿ ಗ್ರಾಮದಲ್ಲಿ ಅಧಿಕಾರಿಗಳು ಬಿಡಾರ ಹೂಡಿದ್ದು, ಕೆಮ್ಮು, ನೆಗಡಿ, ಜ್ವರ ಬಾಧೆಯಿಂದ ಬಳಲುತ್ತಿರುವವರಿಗೆ ಸ್ಥಳದಲ್ಲೆ ಚಿಕಿತ್ಸೆ ನೀಡುತ್ತಿದ್ದಾರೆ. ಅಲ್ಲದೆ ಬ್ರೀಮ್ಸ್ ಕಾಲೇಜಿನ ವಿದ್ಯಾರ್ಥಿಗಳ ಕ್ಯಾಂಪ್ ಕೂಡ ಈ ಗ್ರಾಮದಲ್ಲಿ ಮಾಡಲಾಗಿದೆ. ಸೋಂಕು ರೋಗ ಇರುವುದರಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ.

error: Content is protected !!