Friday, May 24 , 2019 6:15 AM

ಕ್ರೈಂ
ಪ್ರತ್ಯೇಕ ಪ್ರಕರಣ: ಮಾದಕ ದ್ರವ್ಯ ದಳದಿಂದ ಮೂವರ ಬಂಧನ160

ಬೆಂಗಳೂರು: ಮಾದಕ ವಸ್ತು ಮಾರಾಟ ದಂಧೆಯಲ್ಲಿ ತೊಡಗಿದ್ದ ನಗರದ ಎರಡು ಠಾಣಾ ವ್ಯಾಪ್ತಿಯಲ್ಲಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಮಹಿಳೆ ಮತ್ತು ಮಾದಕ ದ್ರವ್ಯ ದಳ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಎಚ್‌ಎಸ್‌ಆರ್ ಲೇ‌ಔಟ್‌ನ ಪರಂಗಿಪಾಳ್ಯದ ನಿವಾಸಿ ಬಾಲು (27) , ಸಿಲ್ವರ್ ಕೌಂಟಿ ಅಪಾರ್ಟ್‌ಮೆಂಟ್ ನಿವಾಸಿ ಸನೋಜ್ ಬಂಧಿತರು. ಮತ್ತಿಬ್ಬರು ಆರೋಪಿಗಳು ನಾಪತ್ತೆಯಾಗಿದ್ದಾರೆ. ಆರೋಪಿಗಳಿಂದ ಎಂಡಿ‌ಎಂಎ ಮತ್ತು ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.

ಎಚ್‌ಎಸ್‌ಆರ್ ಲೇ‌ಔಟ್‌ನ 2ನೇ ಹಂತದ 24ನೇ ಮುಖ್ಯ ರಸ್ತೆಯ ಉಡುಪಿ ಪ್ಯಾಲೇಸ್ ಹೋಟೆಲ್ ಎದುರು ಇಬ್ಬರು ವ್ಯಕ್ತಿಗಳು ಮಾದಕ ವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ ಸಿಸಿಬಿ ತಂಡ ಬಾಲು ಮತ್ತು ಸನೋಜ್‌ನನ್ನು ಬಂಧಿಸಿದೆ. ಇವರಿಂದ 4 ಲಕ್ಷ ರೂ. ಮೌಲ್ಯದ 24 ಗ್ರಾಂ ತೂಕದ 20ಕ್ಕೂ ಹೆಚ್ಚು ಎಂಡಿ‌ಎಂಎ ಮಾತ್ರೆಗಳು ಹಾಗೂ 5 ಕೆ.ಜಿ.ತೂಕದ ಗಾಂಜಾ ಸಿಕ್ಕಿವೆ.

ಆರೋಪಿಗಳು ಗೋವಾ ಹಾಗೂ ಮಹಾರಾಷ್ಟ್ರ ಮೂಲದ ಮಧ್ಯವರ್ತಿಗಳಿಂದ ಪ್ರತಿ 10 ಗ್ರಾಂ ಎಂಡಿ‌ಎಂಎ ಮಾತ್ರೆಗೆ 10 ಸಾವಿರ ರೂ. ಕೊಟ್ಟು ತರುತ್ತಿದ್ದರು. ಬಳಿಕ ನಗರದ ಕಾಲೇಜು ವಿದ್ಯಾರ್ಥಿಗಳು ಹಾಗೂ ಟೆಕ್ಕಿಗಳಿಗೆ ಒಂದು ಗ್ರಾಂ ಮಾತ್ರೆಯನ್ನು 5 ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದರು. ಕೆಲವರಿಗೆ ಗಾಂಜಾ ಮಾರಾಟ ಪೂರೈಕೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತೂಂದು ಪ್ರಕರಣದಲ್ಲಿ ಸಿಸಿಬಿ ಪೊಲೀಸರು ವರ್ತೂರಿನ ಸೋಮಣ್ಣ (36) ಎಂಬಾತನನ್ನು ಬಂಧಿಸಿದ್ದಾರೆ. ಈತನಿಂದ 3 ಲಕ್ಷ ರೂ. ಮೌಲ್ಯದ 1 ಕೆ.ಜಿ. ಗಾಂಜಾ, ಕಾರು, 3 ಮೊಬೈಲ್ ವಶಪಡಿಸಿಕೊಂಡಿದ್ದಾರೆ. ವೈಟ್‌ಫೀಲ್ಡ್ ಠಾಣಾ ವ್ಯಾಪ್ತಿಯ ಸಿದ್ದಾಪುರದಲ್ಲಿರುವ ಬೇಕರಿ ಮುಂಭಾಗ ಟೆಕ್ಕಿಗಳು, ವಿದ್ಯಾರ್ಥಿಗಳನ್ನು ಕರೆಸಿಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದ.

ಈ ಮಾಹಿತಿ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಟಾಟಾ ಇಂಡಿಕಾ ಕಾರಿನಲ್ಲಿ ಗಾಂಜಾ ಕೊಂಡೊಯ್ಯುವಾಗ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಸುಮಾರು 60 ಮಂದಿ ಗ್ರಾಹಕರಿಗೆ ಗಾಂಜಾ ಸರಬರಾಜು ಮಾಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಆ 60 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

More

ಬೆಂಗಳೂರು: ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುವುದಂತೂ ಗ್ಯಾರಂಟಿ ಹಾಗಾದರೆ ರೇವಣ್ಣ ಆವೇಶದಲ್ಲಿ...

ಉಡುಪಿ: ಉಡುಪಿಯ ಮಲ್ಪೆ ಬಂದರಿನಿಂದ ಏಳು ಮಂದಿ ಮೀನುಗಾರರು ಬೋಟ್ ಸಮೇತ...


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಾಡಂಚಿನಲ್ಲಿ ಕಾಡುಕೋಣಗಳ ಹಾವಳಿ ಹೆಚ್ಚಿದೆ. ಕಾಡುಕೋಣಗಳ...

ಪುಂಜಾಲಕಟ್ಟೆ: ಕಾಡಿನಿಂದ ಊರಿಗೆ ಬಂದ ಕಾಡುಕೋಣವೊಂದು ಗೋಬರ್‌ ಗ್ಯಾಸ್‌ ಗುಂಡಿಯೊಳಗೆ ಬಿದ್ದ ಘಟನೆ...


ಬೆಂಗಳೂರು: ಈಗಾಗಲೇ ಬೆಂಗಳೂರಿನ ಮೂರು ಲೋಕಸಭೆ ಕ್ಷೇತ್ರಗಳ ಮತ ಎಣಿಕೆಗೆ ಸಿದ್ಧತೆ ಆರಂಭಿಸಿದ್ದು,...

ಶ್ರೀನಗರ : ಜಮ್ಮುಮತ್ತುಕಾಶ್ಮೀರದ ಅನಂತ್‌ನಾಗ್‌ನ ಬಿಜೆಪಿ ಉಪಾಧ್ಯಕ್ಷ ಗುಲಾಮ್‌ ಮೊಹಮದ್‌ ಮೀರ್‌ ಅವರನ್ನು...


ಮಂಗಳೂರು: ಕಾರಿನ ಮೇಲೆ ಮರವೊಂದು ಉರುಳಿ ಬಿದ್ದು ಯುವಕರಿಬ್ಬರು ಸಾವನ್ನಪ್ಪಿದ್ದಾರೆ. ಳ್ತಂಗಡಿ...

ಮಂಗಳೂರು: ಕಡಲ ತಡಿಯ ನಗರ ಮಂಗಳೂರು ಹಾಗು ರಾಜಧಾನಿ ಬೆಂಗಳೂರು ಸಂಪರ್ಕಿಸುವ...


Copyright 2019 www.policevarthe.com | All Right Reserved
error: Content is protected !!