Friday, May 24 , 2019 6:42 AM

ಕ್ರೈಂ












ಹಣ್ಣಿನ ವ್ಯಾಪಾರಿ ಮೇಲಿನ ಕೋಪಕ್ಕೆ ಮಗು ಕೊಂದವನ ಬಂಧನ



102

ಬೆಂಗಳೂರು: ಎರಡೂವರೆ ವರ್ಷದ ಮಗುವನ್ನು ನೀರಿನಲ್ಲಿ ಮುಳುಗಿಸಿ ಹತ್ಯೆಗೈದು ಶವ ಕೆರೆಯೊಂದಕ್ಕೆ ಎಸೆದು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಅಶೋಕನಗರ ಪೊಲೀಸರ ಬಂಧಿಸಿದ್ದಾರೆ.

ಹಣ್ಣಿನ ವ್ಯಾಪಾರಿ ಆರೋಪಿ ಪತ್ನಿ ಜತೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದ್ದು, ವ್ಯಾಪಾರಿ ಮೇಲಿನ ಕೋಪಕ್ಕೆ ಆತನ ಸಹೋದರಿಯಮ ಗುವನ್ನು ಕೊಂದಿದ್ದ ತಮಿಳುನಾಡು ಮೂಲದ ಶಾಂತಿನಗರದ ಭೀಮಣ್ಣ ಗಾರ್ಡನ್ ನಿವಾಸಿ ಆರ್ಮುಗಂ (37) ಬಂಧಿತ. ಶಾಮವೇಲು ಕೊಲೆಯಾದ ಎರಡೂವರೆ ವರ್ಷದ ಮಗು. ಆರೋಪಿ ಆರ್ಮುಗಂ ಕಾರು ಚಾಲಕನಾಗಿದ್ದು, ಕೆಲ ವರ್ಷಗಳ ಹಿಂದೆ ತಮಿಳುನಾಡಿನ ಚೈತ್ರಾ ಎಂಬಾಕೆಯನ್ನು ಮದುವೆಯಾಗಿದ್ದ. ದಂಪತಿಗೆ 12 ವರ್ಷದ ಗಂಡು ಮಗ ಮತ್ತು 9 ವರ್ಷದ ಹೆಣ್ಣು ಮಗಳು ಇದ್ದಾರೆ. 10 ವರ್ಷಗಳಿಂದ ಶಾಂತಿನಗರದ ಭೀಮಣ್ಣ ಗಾರ್ಡ್‌ನ್‌ನ ಬಾಡಿಗೆ ಮನೆಯಲ್ಲಿ ದಂಪತಿ ವಾಸವಾಗಿದ್ದರು.

ಪತ್ನಿ ಚೈತ್ರಾ ಮನೆಗೆಲಸಕ್ಕೆ ಹೋಗುತ್ತಿದ್ದರು. ಈ ವೇಳೆ ಮನೆ ಹತ್ತಿರದ ಮುಖ್ಯ ರಸ್ತೆಯಲ್ಲಿ ಹಣ್ಣು ವ್ಯಾಪಾರ ಮಾಡುತ್ತಿದ್ದ ಮಣಿ ಅಲಿಯಾಸ್ ಮಣಿಪಾಲ್ ಎಂಬಾತನ ಜತೆ ಅಕ್ರಮ ಸಂಬಂಧ ಹೊಂದಿದ್ದಳು. ಈ ವಿಚಾರ ತಿಳಿದ ಪತಿ ಆರ್ಮುಗಂ ಪತ್ನಿ ಚೈತ್ರಾ ಹಾಗೂ ಈಕೆಯ ಪ್ರಿಯಕರ ಮಣಿಗೆ ಬುದ್ಧಿ ಹೇಳಿದ್ದ. ಆದರೂ ಸರಿ ಹೋಗಿರಲಿಲ್ಲ.

ಅಲ್ಲದೆ ಪತ್ನಿ ಈತನೊಂದಿಗೆ‌ಎ ಜಗಳ ಮಾಡಿಕೊಂಡು ಒಂದೂವರೆ ತಿಂಗಳ ಹಿಂದೆ ತಮಿಳುನಾಡಿನ ತವರು ಮನೆಗೆ ಹೋಗಿದ್ದರು. ಇದರಿಂದ ಆರೋಪಿ ಕೋಪಗೊಂಡಿದ್ದ ಎಂದು ತಿಳಿದಿದೆ.

ಈ ಸಂಬಂಧ ತನಿಖೆ ನಡೆಸಿದ ಪೊಲೀಸರು ಸ್ಥಳೀಯ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳನ್ನು ಸಂಗ್ರಹಿಸಿ ಪರಿಶೀಲಿಸಿದಾಗ ಆರೋಪಿ ಬೈಕ್ ಮೇಲೆ ಗೋಣಿ ಚೀಲ ಕೊಂಡೊಯ್ಯುತ್ತಿರುವ ದೃಶ್ಯ ಸೆರೆಯಾಗಿತ್ತು. ಅಲ್ಲದೆ, ಸ್ಥಳೀಯರು ಅನೈತಿಕ ಸಂಬಂಧದ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ತೀವ್ರಗೊಳಿಸಿದಾಗ ಆರೋಪಿ ಬಗ್ಗೆ ಸುಳಿವು ಸಿಕ್ಕಿ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

More

ಬೆಂಗಳೂರು: ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುವುದಂತೂ ಗ್ಯಾರಂಟಿ ಹಾಗಾದರೆ ರೇವಣ್ಣ ಆವೇಶದಲ್ಲಿ...

ಉಡುಪಿ: ಉಡುಪಿಯ ಮಲ್ಪೆ ಬಂದರಿನಿಂದ ಏಳು ಮಂದಿ ಮೀನುಗಾರರು ಬೋಟ್ ಸಮೇತ...


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಾಡಂಚಿನಲ್ಲಿ ಕಾಡುಕೋಣಗಳ ಹಾವಳಿ ಹೆಚ್ಚಿದೆ. ಕಾಡುಕೋಣಗಳ...

ಪುಂಜಾಲಕಟ್ಟೆ: ಕಾಡಿನಿಂದ ಊರಿಗೆ ಬಂದ ಕಾಡುಕೋಣವೊಂದು ಗೋಬರ್‌ ಗ್ಯಾಸ್‌ ಗುಂಡಿಯೊಳಗೆ ಬಿದ್ದ ಘಟನೆ...


ಬೆಂಗಳೂರು: ಈಗಾಗಲೇ ಬೆಂಗಳೂರಿನ ಮೂರು ಲೋಕಸಭೆ ಕ್ಷೇತ್ರಗಳ ಮತ ಎಣಿಕೆಗೆ ಸಿದ್ಧತೆ ಆರಂಭಿಸಿದ್ದು,...

ಶ್ರೀನಗರ : ಜಮ್ಮುಮತ್ತುಕಾಶ್ಮೀರದ ಅನಂತ್‌ನಾಗ್‌ನ ಬಿಜೆಪಿ ಉಪಾಧ್ಯಕ್ಷ ಗುಲಾಮ್‌ ಮೊಹಮದ್‌ ಮೀರ್‌ ಅವರನ್ನು...


ಮಂಗಳೂರು: ಕಾರಿನ ಮೇಲೆ ಮರವೊಂದು ಉರುಳಿ ಬಿದ್ದು ಯುವಕರಿಬ್ಬರು ಸಾವನ್ನಪ್ಪಿದ್ದಾರೆ. ಳ್ತಂಗಡಿ...

ಮಂಗಳೂರು: ಕಡಲ ತಡಿಯ ನಗರ ಮಂಗಳೂರು ಹಾಗು ರಾಜಧಾನಿ ಬೆಂಗಳೂರು ಸಂಪರ್ಕಿಸುವ...


Copyright 2019 www.policevarthe.com | All Right Reserved
error: Content is protected !!