Saturday, August 24 , 2019 1:17 AM

ಕ್ರೈಂ












ಮನೆ ಆಸೆಗಾಗಿ ಪತಿ ಅಪಹರಣ: ಪತ್ನಿ ಸೇರಿ ನಾಲ್ವರ ಬಂಧನ



87

ಬೆಂಗಳೂರು: ಬಾಡಿಗೆ ಮನೆಗಳನ್ನು ತನ್ನ ಹೆಸರಿಗೆ ನೊಂದಾಯಿಸಲು ನಿರಾಕರಿಸಿದ ಪತಿಯನ್ನು ಅಪಹರಿಸಿ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಪತ್ನಿ, ಇಬ್ಬರು ಮಕ್ಕಳು ಸೇರಿ ನಾಲ್ವರು ಎಚ್‌ಎ‌ಎಲ್ ಪೊಲೀಸರು ಬಂಧಿಸಿದ್ದಾರೆ.

ಕಿತ್ತಗಾನಹಳ್ಳಿಯ ಮುನಿರತ್ನಮ್ಮ (45), ಈಕೆಯ ಮಕ್ಕಳಾದ ಚೇತನ್ (20), ಅಭಿಷೇಕ್ (19) ಹಾಗೂ ಮುನಿರತ್ನಮ್ಮ ಸಹೋದರ ಶಿವಕುಮಾರ್ (42) ಬಂಧಿತರು. ಆರೋಪಿಗಳು ಎಚ್‌ಎ‌ಎಲ್‌ನ ಕಾಳಪ್ಪ ಲೇ‌ಔಟ್ ನಿವಾಸಿ ರಾಮಚಂದ್ರ (48) ಅವರನ್ನು ಅಪಹರಿಸಿ ಕೊಲೆಗೆ ಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸರಕು ಸಾಗಾಟ ಆಟೋ ಇಟ್ಟುಕೊಂಡಿರುವ ರಾಮಚಂದ್ರ ಕಳೆದ 21 ವರ್ಷಗಳ ಹಿಂದೆ ಆರೋಪಿ ಮುನಿರತ್ನಮ್ಮರನ್ನು ಮದುವೆಯಾಗಿದ್ದರು. ದಂಪತಿಗೆ ಚೇತನ್ ಮತ್ತು ಅಭಿಷೇಕ್ ಎಂಬ ಮಕ್ಕಳಿದ್ದಾರೆ. ರಾಮಚಂದ್ರ ಹೆಸರಿನಲ್ಲಿ ಕಿತ್ತಗಾನಹಳ್ಳಿಯಲ್ಲಿ ತಮ್ಮ ಹೆಸರಿನಲ್ಲಿದ್ದ ಒಂದೂವರೆ ಗುಂಟೆ ಖಾಲಿ ನಿವೇಶನದಲ್ಲಿ ಕೆಲ ವರ್ಷಗಳ ಹಿಂದೆ 8 ಮನೆಗಳನ್ನು ನಿರ್ಮಿಸಿ ಬಾಡಿಗೆಗೆ ನೀಡಿದ್ದರು.

ಸ್ಥಳೀಯರಿಂದ ಪ್ರಕರಣ ಬೆಳಕಿಗೆ : ತೀವ್ರ ಗಾಯಗಳಿಂದ ರಾಮಚಂದ್ರ ಜೋರಾಗಿ ಚೀರಾಟ ನಡೆಸುತ್ತಿದ್ದರು. ಇದನ್ನು ಕೇಳಿದ ಸ್ಥಳೀಯರೊಬ್ಬರು ಕಿಟಕಿಯಿಂದ ನೋಡಿದಾಗ ರಾಮಚಂದ್ರರನ್ನು ಗೃಹ ಬಂಧನದಲ್ಲಿರಿಸಿರುವುದು ಕಂಡು ಬಂದಿದೆ.

ಕೂಡಲೇ ರಾಮಚಂದ್ರ ಸಹೋದರನಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಈ ಸಂಬಂಧ ಸಹೋದರ ರಾಮಚಂದ್ರ ಕಾಣಿಯಾಗಿದ್ದಾರೆ ಎಂದು ಎಚ್‌ಎ‌ಎಲ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ರಾಮಚಂದ್ರರನ್ನು ರಕ್ಷಿಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

More

ಮಂಗಳೂರು: ಹುಲಿವೇಷಧಾರಿಯೊಬ್ಬರ ಮೃತದೇಹವು  ಬಾವಿಯೊಂದರಲ್ಲಿ ಪತ್ತೆಯಾಗಿದೆ. ಕುಂಪಲದ ವಿದ್ಯಾನಗರ ಸಮೀಪದ ಗರೋಡಿ...

ಮಂಗಳೂರು: ಭಾರತೀಯ ಜನತಾ ಪಕ್ಷದ ನೂತನ ರಾಜ್ಯಾಧ್ಯಕ್ಷರಾಗಿ ದಕ್ಷಿಣ ಕನ್ನಡ ಸಂಸದ ನಳಿನ್...


ಮಂಗಳೂರು: ಉಳ್ಳಾಲ ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿ ಅತ್ಮಹತ್ಯೆಗೆ ಯತ್ನಿಸುತ್ತಿದ್ದ ಯುವಕನನ್ನು...

ಮಂಗಳೂರು; ಬೆಳ್ತಂಗಡಿಯ ಪ್ರದೇಶವೊಂದರಿಂದ ಪಾಕಿಸ್ತಾನಕ್ಕೆ ಸ್ಯಾಟಲೈಟ್ ಕರೆ ಹೋಗಿದೆ ಎಂಬ ವಿಚಾರಕ್ಕೆ...


ಮಂಗಳೂರು; ನಗರದ ಲಾಡ್ಜ್ ವೊಂದರಲ್ಲಿ ಪತ್ತೆಯಾಗಿದ್ದ ಸುಮಾರು ಎಂಟು ಮಂದಿ‌ ಆರೋಪಿಗಳನ್ನು...

ಮಂಗಳೂರು; ಇಲ್ಲಿನ ಸಮೀಪದ ಉಳ್ಳಾಲ ನೇತ್ರಾವತಿ ಸೇತುವೆ ಬಳಿ ಬೈಕ್ ನಿಲ್ಲಿಸಿ...


ಮಂಗಳೂರು; ನಗರದ ಲಾಡ್ಜ್ ವೊಂದರಲ್ಲಿದ್ದ ಅನುಮಾನಾಸ್ಪದ ವ್ಯಕ್ತಿಗಳ ಸಹಿತ ಕಾರುವೊಂದನ್ನು ನಗರದ...

ಬೆಂಗಳೂರು: ಕೇಂದ್ರ ಗುಪ್ತಚರ ಇಲಾಖೆ ವರದಿ ಹಿನ್ನಲೆಯಲ್ಲಿ ಬೆಂಗಳೂರು ನಗರದಲ್ಲಿ ಪೊಲೀಸ್...


Copyright 2019 www.policevarthe.com | All Right Reserved
error: Content is protected !!