Thursday, December 13 , 2018 11:42 PMತುಮಕೂರಿನ ಮನಪಾ ಮಾಜಿ ಮೇಯರ್ ಹತ್ಯೆ ಪ್ರಕರಣ: ಬಂಧಿತರ ಸಂಖ್ಯೆ 9ಕ್ಕೇ ಏರಿಕೆ..!57

ತುಮಕೂರು: ಮಹಾನಗರ ಪಾಲಿಕೆಯ ಮಾಜಿ ಮೇಯರ್ ರವಿಕುಮಾರ್ ಅಲಿಯಾಸ್ ಗಡ್ಡ ರವಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿಗಾಗಿ ಪೊಲೀಸರು ಹುಡುಕಾಟ ತೀವ್ರಗೊಳಿಸಿದ್ದು, ಇದುವರೆಗೆ 9 ಮಂದಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

ಕೊಲೆ ನಡೆದು 11 ದಿನಗಳಾಗಿದ್ದು, ವಿಶೇಷ ಪೊಲೀಸ್ ತನಿಖಾ ತಂಡ, ಬೆಂಗಳೂರು, ತುಮಕೂರು, ಮಧುಗಿರಿ ಸೇರಿದಂತೆ ಹಲವೆಡೆ 35ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದೆ.

ತುಮಕೂರು ನಗರದ ಕೆಲವು ರೌಡಿ ಶೀಟರ್‌ಗಳ ಹುಡುಕಾಟದಲ್ಲಿ ತೊಡಗಿರುವ ಪೊಲೀಸರು, ಈಗಾಗಲೇ ಕೆಲವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇನ್ನು ಕೆಲವರ ಹುಡುಕಾಟದಲ್ಲಿ ತೊಡಗಿದ್ದಾರೆ. ಆದರೆ ಕೆಲವರು ಪೊಲೀಸರಿಗೆ ಹೆದರಿ ಪರಾರಿಯಾಗಿದ್ದಾರೆ. ಇಬ್ಬರು ಪ್ರಮುಖ ಆರೋಪಿಗಳಾದ ಸುಜೇಯ್ ಭಾರ್ಗವ್ ಮತ್ತು ರಘು, ಗೌರಿಬಿದನೂರು ಗ್ರಾಮಾಂತರ ಪೊಲೀಸರ ಸಮ್ಮುಖದಲ್ಲಿ ಶರಣಾಗಿದ್ದಾರೆ. ಆರೋಪಿಗಳಿಗೆ ನ್ಯಾಯಾಲಯ 9 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.

ಮಧುಗಿರಿಯ ರೌಡಿ ಶೀಟರ್ ಮಲ್ಲೇಶ್‌ನ ಹುಡುಕಾಟದಲ್ಲಿ ತೊಡಗಿರುವ ಪೊಲೀಸರು ಕಳೆದ ಐದು ದಿನಗಳಿಂದ ಮಧುಗಿರಿ ಬೆಟ್ಟದ ಸಾಲಿನಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯ ಗೋಪಿನಾಥ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ ಶೋಭಾ ರಾಣಿ, ಡಿ ವೈ‌ಎಸ್ಪಿ ನಾಗರಾಜ್, ಇನ್‌ಸ್ಪೆಕ್ಟರ‍್ಗಳಾದ ರಾಮಕೃಷ್ಣಪ್ಪ, ರಾಘವೇಂದ್ರ, ಚಂದ್ರಶೇಖರ್, ರಾಧಾಕೃಷ್ಣ, ಮಧುಸೂದನ್, ಅಂಬರೀಷ್, ಕಾಂತರಾಜ್ ತನಿಖಾ ತಂಡದಲ್ಲಿದ್ದಾರೆ. ಇನ್ನು ಒಂದೆರಡು ದಿನಗಳಲ್ಲಿ ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ತಂದು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುವ ಸಿದ್ಧತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

error: Content is protected !!