Monday, March 25 , 2019 2:32 AMನಾಪತ್ತೆಯಾಗಿದ್ದ ಮಾನಸಿಕ ಅಸ್ವಸ್ಥ ವಾಟ್ಸಪ್‌ನಿಂದ ಪತ್ತೆ60

ದಾವಣಗೆರೆ: ಆರು ವರ್ಷಗಳ ಹಿಂದೆ ಮದುವೆಯಲ್ಲಿ ನಾಪತ್ತೆಯಾಗಿದ್ದ ಮಾನಸಿಕ ಅಸ್ವಸ್ಥನೊಬ್ಬರು ವಾಟ್ಸಪ್ ಮೂಲಕ ಕುಟುಂಬ ಸೇರಿದ ಘಟನೆ ವರದಿಯಾಗಿದೆ.

ಮೂಲತಃ ದಾವಣಗೆರೆಯ ಗೋವಿನಕೊಪ್ಪ ಗ್ರಾಮದವರಾದ ನರಸಿಂಹ ಇಬ್ಬರು ಅಕ್ಕಂದಿರು ಓರ್ವ ಅಣ್ಣನೊಂದಿಗೆ ವಾಸವಾಗಿದ್ದ. ಆರು ವರ್ಷಗಳ ಹಿಂದೆ ಮದುವೆಗೆ ಹೊನ್ನಾಳಿಗೆ ತೆರಳಿದಾಗ ಅಲ್ಲಿಂದ ತಪ್ಪಿಸಿಕೊಂಡಿದ್ದ, ಮಾನಸಿಕವಾಗಿ ಅಸ್ವಸ್ಥನಾಗಿದ್ದ ನರಸಿಂಹ ಇಳಕಲ್ ಕಂಠಿ ವೃತ್ತದ ಆಸುಪಾಸು ಓಡಾಡಿಕೊಂಡಿದ್ದರು.

ಈತನನ್ನು ಗಮನಿಸಿದ ಸಂಸ್ಥೆಯ ಕೆಲವು ಸದಸ್ಯರು ಹಾಗೂ ಊರಿನವರು ಒಟ್ಟಾಗಿ ಆತನಿಗೆ ಊಟದ ವ್ಯವಸ್ಥೆ ಮಾಡಿದರು. ಸಸಿಗಳನ್ನು ನೆಟ್ಟು ಅದನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ತನಿಗೆ ವಹಿಸಿದ್ದರು.

ಆರು ವರ್ಷಗಳ ಹಿಂದೆ ಮದುವೆಯ ಕಾರ್ಯಕ್ಕಾಗಿ ಕುಟುಂಬದವರ ಜತೆಗೆ ಹೋಗಿದ್ದ ವ್ಯಕ್ತಿ ಬೇರೊಂದು ಊರಲ್ಲಿ ಆಶ್ರಯ ಪಡೆದಿದ್ದ. ಅಲ್ಲದೆ ತನಗೆ ಅನ್ನ ನೀಡಿದವರು ನೆಟ್ಟಿದ್ದ ಸಸಿಗಳಿಗೆ ಪ್ರತಿನಿತ್ಯ ನೀರು ಹಾಕುತ್ತಿದ್ದ, ಇದನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದನ್ನು ನೋಡಿದ ಕುಟುಂಬಸ್ಥರು ಬಂದು ಆತನನ್ನು ಮನೆಗೆ ಕರೆದೊಯ್ದಿದ್ದಾರೆ.

error: Content is protected !!