Monday, March 25 , 2019 1:15 AMರಾಜ್ಯದೊಂದಿಗೆ ಆಂಧ್ರದ ಮಾವೋವಾದಿಗಳಿಗೆ ನಂಟು… ರಾಜ್ಯ ಪೊಲೀಸರು ಎಲರ್ಟ್!48

ಬೆಂಗಳೂರು: ಆಂಧ್ರಪ್ರದೇಶದ ತೆಲುಗು ದೇಶಂ ಪಕ್ಷದ ಹಾಲಿ ಹಾಗೂ ಮಾಜಿ ಶಾಸಕರಿಬ್ಬರ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಮೂವರು ಮಾವೋವಾದಿಗಳಿಗೆ ಕರ್ನಾಟಕದೊಂದಿಗೆ ನಂಟಿರುವ ವಿಷಯ ತನಿಖೆಯಲ್ಲಿ ಬಯಲಾಗಿದ್ದು, ರಾಜ್ಯ ಪೊಲೀಸರ ನಿದ್ದೆಕೆಡಿಸಿದೆ.

ದುಂಬ್ರಿ ಗುಂಡ ಪ್ರದೇಶದ ಲಿವಿರಿಪುಟ್ಟುವಿನಲ್ಲಿ ಅರಕು ಶಾಸಕ ಕಿದಾರಿ ಸರ್ವೇಶ್ವರ್ ರಾವ್ ಹಾಗೂ ಮಾಜಿ ಶಾಸಕ ಸಿವಾರಿ ಸೋಮು ಅವರ ಹತ್ಯೆ ಪ್ರಕರಣದಲ್ಲಿ ೫೦ ಮಂದಿ ಮಾವೋ ನಕ್ಸಲರು ಭಾಗಿಯಾಗಿರುವ ವಿಷಯ ಬೆಳಕಿಗೆ ಬಂದಿದೆ. ಈ ಬಗ್ಗೆ ಆಂಧ್ರದ ವಿಶೇಷ ತನಿಖಾ ತಂಡ ಹಾಗೂ ನಕ್ಸಲ್ ನಿಗ್ರಹ ದಳದ ಪೊಲೀಸರು ರಾಜ್ಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಟಿಡಿಪಿ ಶಾಸಕರ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ವೆಂಕಟ ರವಿ ಚೈತನ್ಯ, ಜೆ. ಶ್ರೀನಿಬಾಬು ಅಲಿಯಾಸ್ ರಹಿನೋ, ಕಾಮೇಶ್ವರಿಗೂ ಕರ್ನಾಟಕ-ಕೇರಳ ಭಾಗಗಳಲ್ಲಿ ಸಕ್ರಿಯರಾಗಿರುವ ನಕ್ಸಲರಿಗೂ ಸಂಪರ್ಕ ಇರುವುದು ಬಹುತೇಕ ಖಚಿತವಾಗಿದೆ. ಈ ಪೈಕಿ ಶಾಸಕರ ಹತ್ಯೆ ಪ್ರಕರಣದ ಮಾಸ್ಟರ್‌ಮೈಂಡ್ ಎಂದು ಗುರುತಿಸಲಾದ ಅರುಣಾ, ಮಾವೋ ನಕ್ಸಲರ ನಾಯಕ ಚಲಪತಿಯ ಪತ್ನಿ ಎನ್ನಲಾಗಿದೆ.

ಚಲಪತಿಗೂ ೨೦೦೫ರಲ್ಲಿ ರಾಜ್ಯ ಪೊಲೀಸರ ಗುಂಡೇಟಿಗೆ ಬಲಿಯಾದ ನಕ್ಸಲ್ ನಾಯಕ ಸಾಕೇತ್ ರಾಜನ್‌ಗೂ ಸಂಪರ್ಕ ಇತ್ತು ಎನ್ನಲಾಗಿದ್ದು, ಬಳಿಕ, ರಾಜ್ಯ ನಕ್ಸಲರ ತರಬೇತಿ ಹೊಣೆ ಹೊತ್ತುಕೊಂಡ ಪಟೇಲ್ ಸುಧಾಕರ್ ರೆಡ್ಡಿ ತಂಡದಲ್ಲಿ ಗುರ್ತಿಸಿಕೊಂಡಿದ್ದ ಎಂದು ಮೂಲಗಳು ತಿಳಿಸಿವೆ. ಇದೀಗ ಕರ್ನಾಟಕದಲ್ಲಿ ನಡೆದ ಕೆಲ ಹತ್ಯೆಗಳಲ್ಲಿ ಇವರು ಭಾಗಿಯಾಗಿರುವ ಶಂಕೆ ಇದ್ದು ಪೊಲೀಸರು ಅಲರ್ಟ್ ಆಗಿದ್ದಾರೆ.

error: Content is protected !!