Sunday, June 16 , 2019 5:13 AM

ಕ್ರೈಂ
ಪೊಲೀಸ್ ವಾರ್ತೆ EXCLUSIVE. ಬೆಳ್ತಂಗಡಿ, ಹರೀಶ್ ಪೂಂಜರಿಗೆ MLA ಟಿಕೇಟ್ ಬಹುತೇಕ ಖಚಿತ….!18597

ಬೆಳ್ತಂಗಡಿ : ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆ ಎಲ್ಲೆಡೆ ರಾಜಕೀಯ ಚಟುವಟಿಕೆಯ ರಂಗು ಜ್ವರದಂತೆ ಏರತೊಡಗಿದೆ. ಅದರಲ್ಲೂ ದಕ್ಷಿಣಕನ್ನಡ ಜಿಲ್ಲೆಯಲ್ಲಿನ ಚಟುವಟಿಕೆಯಂತೂ ತೀವ್ರಗತಿಯಲ್ಲಿದೆ ಎಂಬುವುದನ್ನು ಬಿಡಿಸಿ ಹೇಳಬೇಕಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಇಲ್ಲಿ ಬಿಜೆಪಿ ಜನಜನಿತವಾಗಿರುವಂತಹ ಪಕ್ಷವಾಗಿರುವುದರಿಂದ ಆಂತರಿಕ ವಲಯದಲ್ಲಿ ಭಾರೀ ಲಾಭಿ ನಡೆಯುತ್ತಿದೆ. ಶಾಸಕ ಸ್ಥಾನಾಕಾಂಕ್ಷಿಗಳ ಪಟ್ಟಿಯಲ್ಲಿ ಅಗ್ರಗಣ್ಯ ಸ್ಥಾನದಲ್ಲಿ “ಹರೀಶ್‌ಪೂಂಜ”ರವರು ಜನಮನದಲ್ಲಿದ್ದಾರೆ. ಈ ಪರಿಣಾಮ ಬೆಳ್ತಂಗಡಿಯಲ್ಲಿ ಹರೀಶ್ ಪೂಂಜರಿಗೆ MLA ಟಿಕೇಟ್ ನೀಡುವುದು ಬಹುತೇಕ ಖಚಿತವಾಗಿದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.

ಅದೇನೇ ಇರಲಿ, ಹೊಸಮುಖ-ಹೊಸ ಹುರುಪಿನ ಯುವನಾಯಕನ ನಿರೀಕ್ಷೆಯಲ್ಲಿರುವ ಬೆಳ್ತಂಗಡಿ ಕ್ಷೇತ್ರದಲ್ಲಿ ‘ಹರೀಶ್‌ಪೂಂಜ’ ಭರವಸೆ ಮೂಡಿಸುವಂತಹ ತರುಣ ನೇತಾರನಾಗಿ ಜನಮನ ಸೆಳೆದಿದ್ದಾರೆ. ಇವರ ಪಕ್ಷದ ಸಂಘಟನಾತ್ಮಕ ಕೌಶಲ, ಸರ್ವಸ್ತರದ ಜನರೊಂದಿಗೆ ಬೆರೆಯುವ-ಸ್ಪಂದಿಸುವ ಗುಣವಿಶೇಷತೆ. ಶಿಸ್ತು, ಶ್ರದ್ಧೆ, ಬದ್ದತೆ ಇವೆಲ್ಲವನ್ನೂ ಕ್ಷೇತ್ರದ ಜನತೆ ಸೂಕ್ಷ್ಮವಾಗಿ ಗಮನಿಸಿದೆ, ಜನನಾಯಕನಿಗಿರಬೇಕಾದ ಮೌಲ್ಯಗಳು ‘ಹರೀಶ್’ರಲ್ಲಿರುವುದನ್ನು ಮನಗಂಡಿದೆ. ಇವೆಲ್ಲಕ್ಕಿಂತಾ ಮಿಗಿಲಾಗಿ ಈ ತರುಣನಲ್ಲಿ ಸ್ವಾರ್ಥ-ಸ್ವಹಿತಾಸಕ್ತಿ-ಅಧಿಕಾರದ ಹಪಾಹಪಿಯ ಲವಲೇಶ ವಿಲ್ಲದಿರುವುದನ್ನು ಮನಸಾರೆ ಮೆಚ್ಚಿದೆ.

ಹಾಗಾಗಿ ಹರೀಶ್‌ಪೂಂಜ ಬೆಳ್ತಂಗಡಿಯ ಮತದಾರ ಪ್ರಭುವಿನ ಮನೆಮನಗಳಲ್ಲಿ ಮನೆಮಾಡಿದ್ದಾರೆ. ಹರೀಶ್‌ಪೂಂಜರವರು ಕ್ರಮಿಸಿ ಬಂದದಾರಿಯೇ ಅಂಥಾ ಶಿಸ್ತುಬದ್ಧ ರೀತಿಯದ್ದು. ಸಂಸ್ಕೃತಿ-ಸಂಸ್ಕಾರ-ಸಂಪ್ರದಾಯಗಳ ಅನೂಚಾನ ಪಾಲನೆಯ ಶ್ರದ್ಧಾವಂತ ಕುಟುಂಬದ ಹಿನ್ನೆಲೆಯಿಂದ ಬಂದವರು ಇವರು. ವಿದ್ಯಾರ್ಥಿ ಜೀವನದಲ್ಲಿ ಎಬಿವಿಪಿ ಸಂಘಟನೆಯ ನಾಯಕತ್ವ. ಆ ಮೂಲಕ ಯುವಸಮೂಹವನ್ನು ತನ್ನತ್ತ ಆಕರ್ಷಿಸುವಂತಹ ಅನೇಕ ಸಂಘಟನಾತ್ಮಕ ಕಾರ್ಯಗಳಲ್ಲಿ ಸಕ್ರೀಯ. ಇಷ್ಟರ ಮೇಲೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಭಾವ… ಇವೆಲ್ಲವೂ ‘ಹರೀಶ್ ಪೂಂಜ’ರವರನ್ನು-ಇವರ ವ್ಯಕ್ತಿತ್ವವನ್ನು ಪುಟ್ಟಕಿಟ್ಟ ಚಿನ್ನವನ್ನಾಗಿಸಿತ್ತು. ನಗರದಲ್ಲಿ ನಡೆಯುವಂತಹ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ‘ಹರೀಶ್’ ಉಪಸ್ಥಿತಿ ಇರಲೇಬೇಕು. ಅದು ಮನೆಯ ಮಾತಾಗಿರಲೀ-ಮನದ ಮಾತಾಗಿರಲೀ ಅಲ್ಲಿಗೆ ‘ಹರೀಶ್‌ಪೂಂಜ’ರಿಗೆ ಆಹ್ವಾನ ಇದ್ದೇ ಇರುತ್ತದೆ. ಅಷ್ಟರಮಟ್ಟಿಗಿನ ಜನಾನುರಾಗಿ ಜನಪ್ರಿಯ ವ್ಯಕ್ತಿತ್ವ ‘ಹರೀಶ್ ಪೂಂಜ’ರದ್ದು. ಸಹಜವಾಗಿಯೇ ಇಂತಹ ನಾಯಕತ್ವದ ಗುಣವನ್ನು ಸಂಪಾದಿಸಿಕೊಂಡ ಇವರನ್ನು ರಾಜಕೀಯ ರಂಗ ಕೈಬೀಸಿ ಕರೆದಿದೆ. ಮಾತ್ರವಲ್ಲ, ಇವರಿಗೆ ರಾಜಕೀಯದಲ್ಲಿ ಉಜ್ವಲವಾದ ಭವಿಷ್ಯವಿದೆ ಎಂಬುವುದನ್ನು ಪ್ರಸ್ತುತ ವಿದ್ಯಮಾನಗಳೇ ಶೃತಪಡಿಸುತ್ತಿವೆ.

ಬೆಳ್ತಂಗಡಿ ತಾಲ್ಲೂಕಿನಾದ್ಯಂತ ಜನತೆಯ ಒಲವು ಸಂಪಾದಿಸುವುದರ ಜೊತೆಜೊತೆಗೆ ಉತ್ತಮ ನಾಯಕರಾಗಿ ಹೊರಹೊಮ್ಮುವ ಎಲ್ಲಾ ಲಕ್ಷಣಗಳನ್ನು ತೋರುತ್ತಾ ಬಂದಿರುವ ಹರೀಶ್‌ಪೂಂಜ, ಇಡೀ ತಾಲ್ಲೂಕಿನ ಸಮಸ್ತ ಜನತೆಯ-ಸರ್ವಸ್ತರದ ಜನರ ಹೃದಯ ಗೆದ್ದಿರುವವರು. ಯಾರೊಂದಿಗೂ ಭಿನ್ನಾಭಿಪ್ರಾಯ-ನಿಷ್ಠೂರ ಕಟ್ಟಿಕೊಂಡವರೇ ಅಲ್ಲ. ಅಜಾತಶತ್ರುವೆಂದೇ ಆತ್ಮೀಯವಾಗಿ ಈ ಭಾಗದಲ್ಲಿ ಕರೆಯಲ್ಪಡುವವರು. ಕ್ಷೇತ್ರದಲ್ಲಿ ಬಿಜೆಪಿ ಬಲಾಢ್ಯಗೊಳ್ಳಲು ತನ್ಮೂಲಕ ‘ಹರೀಶ್ ಪೂಂಜ’ರಂತಹ ಯುವನಾಯಕರುಗಳ ಭವಿಷ್ಯದ ಬುನಾದಿ ಭದ್ರವಾಗಲು ಇದೂ ಒಂದು ಪೂರಕ ಬೆಳವಣಿಗೆಯೇ ಆಗಿದೆ ಎಂಬುವುದು ಅನುಭವಿಗಳ ಅಭಿಮತ. ಅದೇನೇ ಇರಲಿ, ಬೆಳ್ತಂಗಡಿಯಂತಹ ಪ್ರಜ್ಞಾವಂತ-ವಿವೇಕವಂತ ಮತದಾರರಿರುವ ಕ್ಷೇತ್ರದಲ್ಲಿ ಹರೀಶ್‌ಪೂಂಜರಂತಹ ಯುವೋತ್ಸಾಹಿಗೆ-ನವ ರಾಜಕೀಯ ನೇತಾರನಿಗೆ ವೇದಿಕೆ ಸಜ್ಜಾಗಿದೆ ಎಂದೇ ಕ್ಷೇತ್ರದ ಜನತೆ ಮಾತನಾಡಿಕೊಳ್ಳುತ್ತಿದ್ದಾರೆ.

ಅದರಲ್ಲೂ ಶಿಸ್ತು-ಸಂಪ್ರದಾಯ-ಸಂಸ್ಕಾರವಂತ ಜನರಿರುವ ಬೆಳ್ತಂಗಡಿಯಂತಹ ಕ್ಷೇತ್ರಕ್ಕೆ ಇವೆಲ್ಲಾ ಮೌಲ್ಯಗಳಿರುವ ವ್ಯಕ್ತಿಯ ಅನ್ವೇಷಣೆಯಿತ್ತು. ಅದೀಗ ಹರೀಶ್‌ಪೂಂಜರಿಂದ ಭರ್ತಿಯಾದಂತಾಗಿದೆ. ಇಲ್ಲಿನ ಜನರ ಅಹವಾಲು-ಆಶೋತ್ತರಗಳಿಗೆ ಸ್ಪಂದಿಸುವಂತಹ ಜನರ ನಡುವೆ ಬೆರೆತು-ಕಲೆತು ಮುಂದೆ ಸಾಗಬಲ್ಲಂತಹ ಮುಖಂಡ ಅವರ ನಿರೀಕ್ಷೆಯಂತೆಯೇ ಸಿಕ್ಕಂತಾಗಿದೆ. ವಿಶೇಷವಾಗಿ ಈ ಕ್ಷೇತ್ರದ ಸುಸಂಸ್ಕೃತ ಸಮುದಾಯಗಳೆನಿಸಿಕೊಂಡಿರುವ ಜೈನ ಸಮುದಾಯ ಹಾಗೂ ಕ್ರೈಸ್ತ ಸಮುದಾಯದವರ ಒಲವು ಹರೀಶ್‌ರವರ ಬೆನ್ನಿಗಿದ್ದು, ಹರೀಶ್‌ಪೂಂಜರವರ ಬೆಂಬಲಕ್ಕಿರುವುದು ಹರೀಶ್‌ರವರ ಕಾರ್ಯಕ್ಷಮತೆಗೆ ಹಿಡಿದ ಕೈಗನ್ನಡಿಯಾಗಿದೆ. ಅದೇ ರೀತಿ ಬಿಜೆಪಿ ವರಿಷ್ಠ ಮಂಡಳಿಗೂ ಹರೀಶ್‌ರ ಮೇಲೆ ಅದೇ ಭರವಸೆ-ವಿಶ್ವಾಸವಿರುವ ಕಾರಣ ಟಿಕೇಟ್ ಸಿಗುವುದು ನಿಚ್ಚಳವಾಗಿದೆ. ಹಾಗೆಯೇ ಬೆಳ್ತಂಗಡಿಗೊಂದು ಉತ್ತಮ ಕಾಯಕಲ್ಪ ಸಿಗುವ ದಿನಗಳೂ ಈ ದಿಸೆಯಲ್ಲಿ ಸನ್ನಿಹಿತವಾದಂತೆ ಕಾಣುತ್ತದೆ. ತಮ್ಮ ಪ್ರಜಾಸೇವಾ ಕೈಂಕರ್ಯದಲ್ಲಿ ಅಸಾಧಾರಣ ಸೇವೆ ಸಲ್ಲಿಸುವಂತಾಗಿ ಸರ್ವೋತ್ತಮ ನಾಯಕರಾಗುವ ಪಥ ದತ್ತ ಶ್ರೀಯುತರು ಮುಂದಡಿಯಿಡಲೀ ಎಂಬುವುದು ಎಲ್ಲರ ಹಾರೈಕೆ. ಅವರ ಹಿತೈಷಿಗಳು-ಬಂಧುಮಿತ್ರರು-ಕಾರ್ಯಕರ್ತ ಮಿತ್ರರು ಕೂಡಾ, ಈ ಸಂದರ್ಭದಲ್ಲಿ ‘ಹರೀಶ್‌ಪೂಂಜ’ರವರಿಗೆ ಹೃತ್ಪೂರ್ವಕವಾಗಿ ಶುಭಕೋರಿದ್ದಾರೆ.

More

ಮಡಿಕೇರಿ: ನಗರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಸಿದೆ. ಶಿಕ್ಷಕಿಯನ್ನು ಕೊಂದ ವ್ಯಕ್ತಿಯೋರ್ವ...

ಮಂಗಳೂರು: ಕರಾವಳಿಯಲ್ಲಿ ಮುಂಗಾರು ಮಳೆ ಆರಂಭವಾಗಿದೆ. ಅರಬ್ಬೀ ಸಮುದ್ರದಲ್ಲಿ ಚಂಡಮಾರುತ ಉಂಟಾದ...


ಮಂಗಳೂರು; ನಗರದ ರೌಡಿಶೀಟರ್ ಒಬ್ಬನ ಮೇಲೆ ನಗರದ ಪಚ್ಚನಾಡಿ ಎಂಬಲ್ಲಿ ಪೊಲೀಸರು...

ಮಂಗಳೂರು: ಬಿಜೆಪಿಯ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಸಂಘದಿಂದ ಬಂದು ಚತುರ ಸಂಘಟಕ,...


ಬೆಂಗಳೂರು: ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುವುದಂತೂ ಗ್ಯಾರಂಟಿ ಹಾಗಾದರೆ ರೇವಣ್ಣ ಆವೇಶದಲ್ಲಿ...

ಉಡುಪಿ: ಉಡುಪಿಯ ಮಲ್ಪೆ ಬಂದರಿನಿಂದ ಏಳು ಮಂದಿ ಮೀನುಗಾರರು ಬೋಟ್ ಸಮೇತ...


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಾಡಂಚಿನಲ್ಲಿ ಕಾಡುಕೋಣಗಳ ಹಾವಳಿ ಹೆಚ್ಚಿದೆ. ಕಾಡುಕೋಣಗಳ...

ಪುಂಜಾಲಕಟ್ಟೆ: ಕಾಡಿನಿಂದ ಊರಿಗೆ ಬಂದ ಕಾಡುಕೋಣವೊಂದು ಗೋಬರ್‌ ಗ್ಯಾಸ್‌ ಗುಂಡಿಯೊಳಗೆ ಬಿದ್ದ ಘಟನೆ...


Copyright 2019 www.policevarthe.com | All Right Reserved
error: Content is protected !!