Sunday, June 16 , 2019 4:10 AM

ಕ್ರೈಂ












ಗೋಬರ್‌ ಗ್ಯಾಸ್‌ ಗುಂಡಿಯೊಳಗೆ ಬಿದ್ದ ಕಾಡುಕೋಣ!; ಅರಣ್ಯ ಇಲಾಖೆಯ ಕಾರ್ಯಾಚರಣೆ



145

ಪುಂಜಾಲಕಟ್ಟೆ: ಕಾಡಿನಿಂದ ಊರಿಗೆ ಬಂದ ಕಾಡುಕೋಣವೊಂದು ಗೋಬರ್‌ ಗ್ಯಾಸ್‌ ಗುಂಡಿಯೊಳಗೆ ಬಿದ್ದ ಘಟನೆ ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾ.ಪಂ. ವ್ಯಾಪ್ತಿಯ ಕಾಡಬೆಟ್ಟು ಗ್ರಾಮದ ಕಾಡಬೆಟ್ಟು-ಪೂರ್ಲೊಟ್ಟುವಿನಲ್ಲಿ ಶನಿವಾರ ಸಂಭವಿಸಿದ್ದು, ಕಾಡುಕೋಣವನ್ನು ರಕ್ಷಿಸಲಾಗಿದೆ. ಆದರೆ ಬಳಿಕ ಕಾಡುಕೋಣ ಬಾಲಕಿಯೊಬ್ಬಳಿಗೆ ತಿವಿದು ಗಾಯಗೊಳಿಸಿದೆ. ಇಲ್ಲಿನ ನಿವಾಸಿ ವಿಲ್ಫೆಡ್‌ ಡಿ’ಸೋಜಾ ಅವರ ತೋಟದಲ್ಲಿದ್ದ ಗೋಬರ್‌ಗ್ಯಾಸ್‌ನ ಗುಂಡಿಗೆ ಕಾಡುಕೋಣ ಬಿದ್ದಿದ್ದು, ಅರಣ್ಯ ಇಲಾಖೆಯ ಹರಸಾಹಸದಿಂದ ಪ್ರಾಣಾಪಾಯದಿಂದ ಪಾರಾಗಿದೆ.

ವಿಲ್ಫೆಡ್‌ ವಿದೇಶದಲ್ಲಿದ್ದು, ಎರಡು ತಿಂಗಳ ಹಿಂದಷ್ಟೆ ಮನೆ ಖರೀದಿಸಿದ್ದರು. ಮನೆ ಮಂದಿ ಮಂಗಳೂರಿನಲ್ಲಿ ವಾಸ ವಾಗಿದ್ದು, ಕೆಲಸಗಾರರು ತೋಟ ನೋಡಿ ಕೊಳ್ಳುತ್ತಿದ್ದರು. ತೋಟದಲ್ಲಿದ್ದ ಗೋಬರ್‌ಗ್ಯಾಸ್‌ ಘಟಕ ನಿರುಪಯುಕ್ತ ವಾಗಿದ್ದು, ಫೈಬರ್‌ ಮುಚ್ಚಿಗೆ ಹರಿದಿತ್ತು. ರಾತ್ರಿ ಕಾಡು ಕೋಣ ನೀರನ್ನರಸಿ ಬರುವಾಗ ಈ ಗುಂಡಿಗೆ ಬಿದ್ದಿರಬೇಕು ಎಂದು ಅಂದಾಜಿಸಲಾಗಿದೆ. ಬೆಳಗ್ಗೆ ಕೆಲಸದವರಿಗೆ ಕಾಡುಕೋಣದ ಆಕ್ರಂದನ ಕೇಳಿ ಬಂದ ವೇಳೆ ಈ ಘಟನೆ ಬೆಳಕಿಗೆ ಬಂದಿತ್ತು.

ಕೆಲಸದವರು ಮನೆಮಂದಿಗೆ ಮಾಹಿತಿ ನೀಡಿದ್ದರು. ಅವರು ಆಗಮಿಸಿ ಬಂಟ್ವಾಳ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಬಂಟ್ವಾಳ ಉಪವಲಯ ಸಂರಕ್ಷಣಾಧಿಕಾರಿ ಸುರೇಶ್‌ ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರ ಸಹಾಯದಿಂದ ಕಾಡುಕೋಣವನ್ನು ಮೇಲಕ್ಕೆತ್ತುವ ಪ್ರಯತ್ನ ನಡೆಸಿದರು. ಬಳಿಕ ಜೆಸಿಬಿ ಯಂತ್ರ ತರಿಸಿ ಗೋಬರ್‌ಗ್ಯಾಸ್‌ ಗುಂಡಿಯ ಸುತ್ತ ಮಣ್ಣು ತೆಗೆದು ಗುಂಡಿಯನ್ನು ಅಗೆದು ಮುಕ್ತಗೊಳಿಸಿದ ಕೂಡಲೇ ಕಾಡುಕೋಣ ಕಾಡಿನತ್ತ ಓಟಕ್ಕಿತ್ತಿತು. ಕಾವಳಪಡೂರು ಗ್ರಾ.ಪಂ. ಅಧ್ಯಕ್ಷ ಪ್ರಮೋದ್‌ ಕುಮಾರ್‌ ರೈ, ಅರಣ್ಯ ಇಲಾಖೆಯ ಸಿಬಂದಿ ವಿನಯ್‌, ಭಾಸ್ಕರ್‌, ಸ್ಮಿತಾ, ಅನಿತಾ, ಅನಿಲ್‌, ಪರಿಸರ ಸ್ನೇಹಿ ಕಿರಣ್‌ ಪಿಂಟೋ ಮತ್ತು ಗ್ರಾಮಸ್ಥರು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು

More

ಮಡಿಕೇರಿ: ನಗರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಸಿದೆ. ಶಿಕ್ಷಕಿಯನ್ನು ಕೊಂದ ವ್ಯಕ್ತಿಯೋರ್ವ...

ಮಂಗಳೂರು: ಕರಾವಳಿಯಲ್ಲಿ ಮುಂಗಾರು ಮಳೆ ಆರಂಭವಾಗಿದೆ. ಅರಬ್ಬೀ ಸಮುದ್ರದಲ್ಲಿ ಚಂಡಮಾರುತ ಉಂಟಾದ...


ಮಂಗಳೂರು; ನಗರದ ರೌಡಿಶೀಟರ್ ಒಬ್ಬನ ಮೇಲೆ ನಗರದ ಪಚ್ಚನಾಡಿ ಎಂಬಲ್ಲಿ ಪೊಲೀಸರು...

ಮಂಗಳೂರು: ಬಿಜೆಪಿಯ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಸಂಘದಿಂದ ಬಂದು ಚತುರ ಸಂಘಟಕ,...


ಬೆಂಗಳೂರು: ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುವುದಂತೂ ಗ್ಯಾರಂಟಿ ಹಾಗಾದರೆ ರೇವಣ್ಣ ಆವೇಶದಲ್ಲಿ...

ಉಡುಪಿ: ಉಡುಪಿಯ ಮಲ್ಪೆ ಬಂದರಿನಿಂದ ಏಳು ಮಂದಿ ಮೀನುಗಾರರು ಬೋಟ್ ಸಮೇತ...


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಾಡಂಚಿನಲ್ಲಿ ಕಾಡುಕೋಣಗಳ ಹಾವಳಿ ಹೆಚ್ಚಿದೆ. ಕಾಡುಕೋಣಗಳ...

ಪುಂಜಾಲಕಟ್ಟೆ: ಕಾಡಿನಿಂದ ಊರಿಗೆ ಬಂದ ಕಾಡುಕೋಣವೊಂದು ಗೋಬರ್‌ ಗ್ಯಾಸ್‌ ಗುಂಡಿಯೊಳಗೆ ಬಿದ್ದ ಘಟನೆ...


Copyright 2019 www.policevarthe.com | All Right Reserved
error: Content is protected !!