Sunday, June 16 , 2019 4:11 AM

ಕ್ರೈಂ












ಸುವರ್ಣ ತ್ರಿಭುಜ ಬೋಟ್ ಅವಘಡ: ರಹಸ್ಯವಾಗಿ ಉಳಿದ ಕೆಲವು ಪ್ರಶ್ನೆಗಳು



163

ಉಡುಪಿ: ಉಡುಪಿಯ ಮಲ್ಪೆ ಬಂದರಿನಿಂದ ಏಳು ಮಂದಿ ಮೀನುಗಾರರು ಬೋಟ್ ಸಮೇತ ನಾಪತ್ತೆಯಾಗಿ ನಾಲ್ಕೂವರೆ ತಿಂಗಳ ಬಳಿಕ ಬೋಟ್ ನ‌ ಅವಶೇಷಗಳು ಮೊನ್ನೆ ಪತ್ತೆಯಾಗಿದ್ದವು. ಮೀನುಗಾರರು ಮಾತ್ರ ಇನ್ನೂ ಪತ್ತೆಯಾಗಿಲ್ಲ. ಈ ಪ್ರಕರಣದಲ್ಲಿ ಕೇಂದ್ರ ಸರಕಾರ ಕೆಲ ಮಾಹಿತಿಗಳನ್ನು ಮುಚ್ಚಿಟ್ಟಿತ್ತೇ?. ಮೀನುಗಾರರಿದ್ದ ಬೋಟಿಗೆ ನೌಕಾಸೇನೆಯ ನೌಕೆ ಡಿಕ್ಕಿ ಹೊಡೆದ ವಿಷಯ ಉದ್ದೇಶಪೂರ್ವಕವಾಗಿಯೇ ಮರೆಮಾಚಲಾಗಿತ್ತೇ? ಸದ್ಯ ಈ ಪ್ರಶ್ನೆಗಳು ಕರಾವಳಿಯ ಮೀನುಗಾರರನ್ನು ಕಾಡುತ್ತಿದೆ.

ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟ್ ನ ಅವಶೇಷಗಳು ನಾಲ್ಕೂವರೆ ತಿಂಗಳ ಬಳಿಕ ಸಿಕ್ಕಿದೆ. ಆದರೆ ಮೀನುಗಾರರ ಪತ್ತೆ ಇನ್ನೂ ಆಗಿಲ್ಲ.ಅವರೆಲ್ಲ ಎಲ್ಲಿಗೆ ಹೋದರು? ಅವರ ಪರಿಸ್ಥಿತಿ ಏನಾಯಿತು ? ಉಹೂಂ ಈ ಕುರಿತು ಇನ್ನೂ ಸ್ಪಷ್ಟ ಮಾಹಿತಿ‌ ದೊರಕಿಲ್ಲ.

ನಾಲ್ಕು ದಿನದ ಹಿಂದೆ ಮಹಾರಾಷ್ಟ್ರದಲ್ಲಿ ಬೋಟ್ ನ‌ ಅವಶೇಷಗಳು ಪತ್ತೆಯಾಗಿದ್ದವು.ಆಶ್ಚರ್ಯದ ಸಂಗತಿ ಅಂದ್ರೆ ನಾಲ್ಕೂವರೆ ತಿಂಗಳು ಇಡೀ ಕೇಂದ್ರ ಸರಕಾರದ ಪಡೆಗಳು ಹುಡುಕಿದಾಗ ಸಿಗದ ಬೋಟು ಮೊನ್ನೆ ಉಡುಪಿ ಶಾಸಕರು ಹುಡುಕಾಟಕ್ಕೆ ಹೋದ ಎರಡೇ ದಿನದಲ್ಲಿ ಸಿಕ್ಕಿರುವುದು. ಹೌದು…ಚುನಾವಣೆ ಕಳೆದ ಮೇಲೆ ಉಡುಪಿ ಶಾಸಕ ರಘುಪತಿ ಭಟ್ ಮೀನುಗಾರ ಕುಟುಂಬದವರ ಜೊತೆ ಮತ್ತು ನೌಕಾಸೇನೆಯ ಅಧಿಕಾರಿಗಳ ಜೊತೆ ಶೋಧ ಕಾರ್ಯಕ್ಕೆ ತೆರಳಿದ್ದಾರೆ.ಅವರು ಹೋದ ಎರಡೇ ದಿನದಲ್ಲಿ‌ ನಾಪತ್ತೆಯಾದ ಬೋಟ್ ನ‌ ಅವಶೇಷಗಳು ಸಿಕ್ಕಿವೆ.

More

ಮಡಿಕೇರಿ: ನಗರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಸಿದೆ. ಶಿಕ್ಷಕಿಯನ್ನು ಕೊಂದ ವ್ಯಕ್ತಿಯೋರ್ವ...

ಮಂಗಳೂರು: ಕರಾವಳಿಯಲ್ಲಿ ಮುಂಗಾರು ಮಳೆ ಆರಂಭವಾಗಿದೆ. ಅರಬ್ಬೀ ಸಮುದ್ರದಲ್ಲಿ ಚಂಡಮಾರುತ ಉಂಟಾದ...


ಮಂಗಳೂರು; ನಗರದ ರೌಡಿಶೀಟರ್ ಒಬ್ಬನ ಮೇಲೆ ನಗರದ ಪಚ್ಚನಾಡಿ ಎಂಬಲ್ಲಿ ಪೊಲೀಸರು...

ಮಂಗಳೂರು: ಬಿಜೆಪಿಯ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಸಂಘದಿಂದ ಬಂದು ಚತುರ ಸಂಘಟಕ,...


ಬೆಂಗಳೂರು: ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುವುದಂತೂ ಗ್ಯಾರಂಟಿ ಹಾಗಾದರೆ ರೇವಣ್ಣ ಆವೇಶದಲ್ಲಿ...

ಉಡುಪಿ: ಉಡುಪಿಯ ಮಲ್ಪೆ ಬಂದರಿನಿಂದ ಏಳು ಮಂದಿ ಮೀನುಗಾರರು ಬೋಟ್ ಸಮೇತ...


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಾಡಂಚಿನಲ್ಲಿ ಕಾಡುಕೋಣಗಳ ಹಾವಳಿ ಹೆಚ್ಚಿದೆ. ಕಾಡುಕೋಣಗಳ...

ಪುಂಜಾಲಕಟ್ಟೆ: ಕಾಡಿನಿಂದ ಊರಿಗೆ ಬಂದ ಕಾಡುಕೋಣವೊಂದು ಗೋಬರ್‌ ಗ್ಯಾಸ್‌ ಗುಂಡಿಯೊಳಗೆ ಬಿದ್ದ ಘಟನೆ...


Copyright 2019 www.policevarthe.com | All Right Reserved
error: Content is protected !!