Sunday, September 15 , 2019 9:24 PM

ಕ್ರೈಂ
ಮಂಗಳೂರಿನ ಲಾಡ್ಜ್ ನಲ್ಲಿ ಪತ್ತೆಯಾದ ಅನುಮಾನಾಸ್ಪದ 8 ಮಂದಿ ಆರೋಪಿಗಳ ಬಂಧನ, 1 ರಿವಾಲ್ವಾರ್, 8 ಗುಂಡುಗಳು ಪೊಲೀಸ್ ವಶಕ್ಕೆ1646

ಮಂಗಳೂರು; ನಗರದ ಲಾಡ್ಜ್ ವೊಂದರಲ್ಲಿ ಪತ್ತೆಯಾಗಿದ್ದ ಸುಮಾರು ಎಂಟು ಮಂದಿ‌ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಗಳಿಂದ ಒಂದು ರಿವಾಲ್ವಾರ್, 8 ಗುಂಡುಗಳು ಹಾಗೂ ಏರ್ ಗನ್ ವೊಂದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಗಳನ್ನು  ಸ್ಯಾಮ್ ಪೀಠರ್, ಮದನ್, ಸುನಿಲ್ ರಾಜ್, ಕೋದಂಡರಾಮ, ಟಿ.ಕೆ.ಬೋಪಣ್ಣ, ಚಿನ್ನಪ್ಪ, ಚೆರಿಯನ್ ಮತ್ತು ಅಬ್ದುಲ್ ಲತೀಫ್ ಎಂದು ಗುರುತಿಸಲಾಗಿದೆ.

ಈ ಬಗ್ಗೆ ನಗರದ ಪೊಲೀಸ್ ಆಯುಕ್ತರಾದ  ಡಾ.ಪಿ.ಎಸ್.ಹರ್ಷ ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಸ್ವಾತಂತ್ಯೋತ್ಸವದ ಹಿನ್ನೆಲೆಯಲ್ಲಿ ಮಂಗಳೂರು ‌ನಗರದಾದ್ಯಂತ ಬಂದೋಬಸ್ತ್ ಮಾಡಲಾಗಿತ್ತು. ಈ ವೇಳೆ ಪಂಪ್ ವೆಲ್ ಬಳಿ ಅನುಮಾನಾಸ್ಪದ ಕಾರು ಪತ್ತೆಯಾಗಿತ್ತು. ಹಾಗೂ ಭಾರತ ಸರ್ಕಾರದ ಬೋರ್ಡ್ ಹಾಕಿ ಟಿಂಟ್ ಹಾಕಿದ ಕಾರು ಇತ್ತು. ಪೊಲೀಸರು ತಪಾಸಣೆಗೆ ಮುಂದಾದಾಗ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆ ಬಳಿಕ ಪೊಲೀಸರು ಒಟ್ಟು 8 ಜನರನ್ನ ಬಂಧಿಸಿದ್ದಾರೆ. ಈ ತಂಡದ ನಟೋರಿಯಸ್ ಲೀಡರ್ ಕೇರಳ ಮೂಲದ ಸ್ಯಾಮ್ ಪೀಠರ್ ಎಂಬಾತನಾಗಿದ್ದು, ಈತನಿಗೆ ಕೊಲ್ಕತ್ತಾ, ಭುವನೇಶ್ವರ ಸೇರಿದಂತೆ ಹಲವೆಡೆ ಈತನಿಗೆ ಸಂಪರ್ಕವಿದೆ. ಇವರ ಈ ತಂಡ ಸರ್ಕಾರಿ ಅಧಿಕಾರಿಗಳ ಥರ ಇವರಿಗೆ 5 ಗನ್ ಮ್ಯಾನ್ ರೀತಿ ಇದ್ದರು. ಮಾತ್ರವಲ್ಲದೇ ಇವರಿಗೆ ನೆರವು ನೀಡಿದ ಲತೀಫ್ ಮತ್ತು ಚೆರಿಯನ್ ಎಂಬ ಮಂಗಳೂರು ನಿವಾಸಿಗಳನ್ನು ಬಂಧಿಸಲಾಗಿದೆ.

ಇದೊಂದು ಅಂತರಾಜ್ಯ ವಂಚನಾ ಜಾಲ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಕೇಂದ್ರ ಸರ್ಕಾರದ ಅಧಿಕಾರಿಗಳ ಹೆಸರಿನಲ್ಲಿ ವಂಚಿಸುತ್ತಿದ್ದರು. ಈ ಬಗ್ಗೆ ಸಮಗ್ರ ತನಿಖೆಗೆ ಪ್ರತ್ಯೇಕ ತಂಡ ರಚನೆ ಮಾಡಲಾಗಿದ್ದು, ಇವರ ಜಾಲದ ಬಗ್ಗೆ ಮತ್ತು ಆರ್ಥಿಕ ಜಾಲದ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಕಾರ್ಯಾಚರಣೆಯಲ್ಲಿ ಕದ್ರಿ ಠಾಣೆಯ ಇನ್ಸ್ ಫೆಕ್ಟರ್ ಶಾಂತರಾಮ, ಸಬ್ ಇನ್ಸ್ ಫೆಕ್ಟರ್ ಮಾರುತಿ, ಸಿಬ್ಬಂದಿಗಳಾದ ಎಎಸ್ಐ‌ ಧನರಾಜ್, ಪ್ರಶಾಂತ್, ಲೋಕೇಶ್, ನಾಗರಾಜ, ಮೋಹನ್ ಹಾಗೂ ದೇವಿ ಪ್ರಸಾದ್ ಅವರು ಭಾಗವಹಿಸಿದ್ದರು.

More

ಬಂಟ್ವಾಳ: ಪಾಣೆಮಂಗಳೂರು ಗ್ರಾಮದ ನೇತ್ರಾವತಿ ನದಿ ತೀರದಲ್ಲಿ ಹಲವು ವರ್ಷಗಳಿಂದ ಅಕ್ರಮವಾಗಿ...

ಮಂಗಳೂರು: ರಾಜ್ಯಾದ್ಯಂತ ಭಾರಿ ಸದ್ದು ಮಾಡಿದ್ದ ಗಿರಿಗಿಟ್ ತುಳು ಸಿನಿಮಾಕ್ಕೆ ಇದೀಗ ಕಂಟಕ...


ಮಂಗಳೂರು; ನಗರದ ಪಡೀಲ್ ಕೊಡಕ್ಕಲ್ ಎಂಬಲ್ಲಿ ನಿನ್ನೆ ರಾತ್ರಿ ಕಂಪೌಂಡ್ ಕುಸಿದು...

ಮಂಗಳೂರು: ಕರಾವಳಿಯಲ್ಲಿ ಸುರಿಯುತ್ತಿರುವ ನಿರಂತರ ಮಳೆಗೆ ಪಡೀಲ್‌ನ ಮನೆಯೊಂದರ ಆವರಣ ಗೋಡೆ...


ಮಂಗಳೂರು: ಕಳೆದ ಎರಡು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಜನಸ್ನೇಹಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ...

ಬೆಂಗಳೂರು: ನನ್ನ ಹೆಸರಿನಲ್ಲಿ ನಕಲಿ ಫೇಸ್​ಬುಕ್​ ಖಾತೆಗಳನ್ನು ತೆರೆದು ಅವಹೇಳನಕಾರಿ ಪೋಸ್ಟ್​ಗಳನ್ನು ಹಾಕುತ್ತಿದ್ದಾರೆ...


ಮುಕ್ಕ : ಕಾರೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಡಿವೈಡರ್  ಹಾರಿ ಲಾರಿಗೆ ಡಿಕ್ಕಿ...

ಮಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯ ನೂತನ  ಜಿಲ್ಲಾಧಿಕಾರಿಯಾಗಿ ಸಿಂಧು ಬಿ. ರೂಪೇಶ್...


Copyright 2019 www.policevarthe.com | All Right Reserved
error: Content is protected !!