ಕಿತ್ತೂರು: ಅಂಬಡಗಟ್ಟಿ ಗ್ರಾಮದ ಮಾರಿಯಮ್ಮನ ಗುಡಿಯ ಓಣಿಯ ಬಳಿ ನವಜಾತ ಹೆಣ್ಣುಶಿಶು ನಾಯಿ, ಹಂದಿ ಗಳ ದಾಳಿಗೆ ಬಲಿಯಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ನವಜಾತ ಶಿಶುವನ್ನು ಯಾರಾದರೂ ಬಿಟ್ಟು ಹೋಗಿದ್ದಾರೆಯೇ, ಅಥವಾ ಇದು ಯಾವುದಾದರೂ ಅಪರಾಧ ಕೃತ್ಯದ ಭಾಗವೇ ಎಂದು ಪ್ರಕರಣ ದಾಖಲಿಸಿಕೊಂಡಿರುವ ಕಿತ್ತೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.