ಬೆಂಗಳೂರು: ಸಾಲ ಪಡೆದು ನಕಲಿ ಸಹಿತ ಚೆಕ್ ನೀಡಿ ವಂಚನೆ ಮಾಡಿದ ಆರೋಪದಲ್ಲಿ ನಟಿ, ನಿರ್ದೇಶಕಿ ವಿಸ್ಮಯಾ ಗೌಡ ವಿರುದ್ದ ಬಸವೇಶ್ವರನಗರ ಪೊಲೀಸರು ಠಾಣೆಯಲ್ಲಿ ಕೇಸು ದಾಖಲಾಗಿದೆ.
ವಿಸ್ಮಯ ಗೌಡ ಅವರು ಬಿಂದು ಎನ್ನುವವರಿಂದ ತನಗೆ ಹಣಕಾಸಿನ ತೊಂದರೆ ಇದೆ ಎಂದು ನಂಬಿಸಿ ಹತ್ತು ಲಕ್ಷ ರೂ. ಗಳನ್ನು ಸಾಲ ಪಡೆದಿದ್ದರು. ವಿಸ್ಮಯ ಅವರ ಪರಿಚಯವಿದ್ದ ಕಾರಣ ಬಿಂದು ಅವರು ಆರೂವರೆ ಲಕ್ಷ ರೂ. ಗಳನ್ನು ಸಾಲ ನೀಡಿದ್ದರು. ಇದಕ್ಕೆ ಪ್ರತಿಯಾಗಿ ವಿಸ್ಮಯ ಪೋಸ್ಟ್ ಡೇಟ್‌ನ ಆರೂವರೆ ಲಕ್ಷದ ಚೆಕ್ ಒಂದನ್ನು ನೀಡಿದ್ದರು.
ಆ ಬಳಿಕ ಬಿಂದು ವಿಸ್ಮಯ ಬಳಿ ಸಾಲ ಕೊಟ್ಟ ಹಣವನ್ನು ಮರಳಿ ಕೇಳಿದ್ದು, ಏನಾದರೊಂದು ಕಾರಣಗಳನ್ನು ಹೇಳಿ ವಿಸ್ಮಯ ದಿನದೂಡುವ ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಬಿಂದು ಅವರು ವಿಸ್ಮಯ ನೀಡಿದ್ದ ಚೆಕ್ ಅನ್ನು ಬ್ರಾಂಕ್‌ಗೆ ಹಾಕಿದ್ದು, ಆ ವೇಳೆ ನಕಲಿ ಸಹಾಯ ವಿಚಾರ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ವಿಸ್ಮಯ ವಿರುದ್ಧ ಬಿಂದು ದೂರು ನೀಡಿದ್ದಾರೆ.