ಕಲ್ಬುರ್ಗಿ: ಖರ್ಗೆ ಒಡೆತನದ ಮಿಲಿಂದ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯ ವಿದ್ಯಾರ್ಥಿನಿಯೋರ್ವಳ ಬದಲಿಗೆ ರಾಜ್ಯಶಾಸ್ತ್ರ ಪರೀಕ್ಷೆ ಬರೆದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತೆಯನ್ನು ಬ್ರಹ್ಮಪುರ ಪೊಲೀಸರು ಬಂಧಿಸಿದ್ದಾರೆ.
ಬಂಧಿತಳನ್ನು ಸಂಪೂರ್ಣ ಪಾಟಿಲ್ ಎಂದು ಗುರುತಿಸಲಾಗಿದೆ.
ರಾಜ್ಯದಲ್ಲಿ ಮಾರ್ಚ್ 5 ರಂದು ದ್ವಿತೀಯ ಪಿಯುಸಿಯ ರಾಜ್ಯಶಾಸ್ತ್ರ ಪರೀಕ್ಷೆ ನಡೆದಿದ್ದು ಮಿಲಿಂದ್ ಕಾಲೇಜಿನ ಅರ್ಚನಾ ಎಂಬ ವಿದ್ಯಾರ್ಥಿನಿಯ ಬದಲಿಗೆ ಕಾಂಗ್ರೆಸ್ ಕಾರ್ಯಕರ್ತೆ, ಕಾನೂನು ವಿದ್ಯಾರ್ಥಿನಿ ಸಂಪೂರ್ಣ ಪಾಟೀಲ್ ಎಂಬಾಕೆ ಪರೀಕ್ಷೆ ಬರೆಯಲು ಅರ್ಚನಾ ಹೆಸರಲ್ಲಿ ಪರೀಕ್ಷಾ ಕೊಠಡಿ ಪ್ರವೇಶಿಸಿದ್ದಳು.
ಈ ಬಗ್ಗೆ ದಲಿತ ಸೇನೆಯ ಮುಖಂಡರು ಕಾಲೇಜಿಗೆ ತೆರಳಿ ಪ್ರಶ್ನೆ ಮಾಡಿದ್ದು, ಆ ಸಂದರ್ಭದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.