ಬೆಂಗಳೂರು: ನಟಿ ರಾನ್ಯಾ ರಾವ್ ಗ್ಲೋಲ್ಡ್ ಸ್ಮಗ್ಲಿಂಗ್‌ಗೆ ಸಂಬಂಧಿಸಿದ ಹಾಗೆ ಆಕೆಯ ಮಲತಂದೆ ಎಡಿಜಿಪಿ ಕೆ. ರಾಮಚಂದ್ರ ರಾವ್ ಪ್ರತಿಕ್ರಿಯಿಸಿದ್ದು ‘ನನ್ನನ್ನು ದುಃಖಿತ ತಂದೆ ಎಂದು ಗುರುತಿಸಿ, ನನ್ನ ಬದುಕಿನಲ್ಲಿ ಊಹೆಗೂ ಸಿಗದಂತಹ ಘಟನೆ ನಡೆಯುತ್ತದೆ ಎಂದು ನಾನು ಯೋಚಿಸಿರಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದ ಬಗ್ಗೆ ಪತ್ರಿಕಾ ಪ್ರಕಟನೆ ಹೊರಡಿಸಿರುವ ಅವರು, ಈ ವಿಷಯದಿಂದ ನನ್ನ ಮನಸ್ಸು ಒಡೆದು ಹೋಗಿದೆ. ನನಗಾದ ಆಘಾತದ ಬಗ್ಗೆ ಹೇಳಲು ಪದಗಳೇ ಸಿಗುತ್ತಿಲ್ಲ. ಈ ರೀತಿಯ ಬೆಳವಣಿಗೆ ನನಗೆ ಆಘಾತವನ್ನುಂಟುಮಾಡಿದೆ. ಇದು ನಮ್ಮ ಕುಟುಂಬಕ್ಕೆ ಸಂಕಷ್ಟದ ಸಮಯ. ಇದನ್ನು ಎದುರಿಸಲು ನಾವು ಕಷ್ಟಪಡುತ್ತಿರುವುದಾಗಿ ಹೇಳಿದ್ದಾರೆ.
ರನ್ಯಾ 2024 ರಲ್ಲಿ ಜತಿನ್ ಹುಕ್ಕೇರಿ ಎನ್ನುವವರನ್ನು ವಿವಾಹವಾಗಿದ್ದು, ಆ ಬಳಿಕ ಆಕೆ ತನ್ನ ಖಾಸಗಿತನವನ್ನು ಕಾಪಾಡಿಕೊಂಡಿದ್ದಾರೆ. ಮದುವೆಯ ಬಳಿಕ ಆಕೆ ನಮ್ಮ ಮನೆಗೆ ಬರುವುದನ್ನು ನಿಲ್ಲಿಸಿದ್ದು, ಇದು ನಮ್ಮ ನಡುವೆ ಅಂತರ ಬೆಳೆಸಿತ್ತು ಎಂದು ತಿಳಿಸಿದ್ದಾರೆ.
ನಾನು ಕರ್ತವ್ಯದಲ್ಲಿ ನಿಷ್ಠನಾಗಿದ್ದು, ಪ್ರಾಮಾಣಿಕ, ಶಿಸ್ತಿನ ಜೀವನ ನಡೆಸಿದ್ದೇನೆ. ಈ ಪ್ರಕರಣ ನಮ್ಮ ಕುಟುಂಬಕ್ಕೆ ಕಳಂಕ ತಂದಿದೆ. ರಾನ್ಯಾ ಈ ವಿಚಾರದಲ್ಲಿ ತಪ್ಪು ಮಾಡಿದ್ದರೆ, ಕಾನೂನು ಮೀರಿದ್ದರೆ ಕ್ರಮ ಕೈಗೊಳ್ಳಲು ಅವರು ವಿನಂತಿಸಿದ್ದಾರೆ.