ಬೆಂಗಳೂರು: ಪೊಲೀಸ್ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು, ಸಿಬ್ಬಂದಿ ತಮ್ಮ ಸ್ವಂತ ವಾಹನದ ಮೇಲೆ ‘ಪೊಲೀಸ್’ ಎಂದು ಬರೆಸುವಂತಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಒಂದು ವೇಳೆ ಯಾರಾದರೂ ತಮ್ಮ ವಾಹನದ ಮೇಲೆ ಪೊಲೀಸ್ ಎಂದು ಬರೆಸಿದರೆ ಅದು ಕಾನೂನು ಉಲ್ಲಂಘನೆಯಂತೆ ಎಂದು ಅವರು ಸ್ಪಷ್ಚಪಡಿಸಿದ್ದಾರೆ. ಸ್ವಂತ ವಾಹನದ ಮೇಲೆ ಪೊಲೀಸ್ ಎಂದು ಬರೆಸಿಕೊಂಡು ಓಡಾಡಲು ಕಾನೂನಿನಲ್ಲಿ ಅನುಮತಿ ಇಲ್ಲ ಎಂದು ಅವರು ಹೇಳಿದ್ದಾರೆ.
ಪೊಲೀಸ್ ಸಿಬ್ಬಂದಿಗಳು ಈಗಾಗಲೇ ತಮ್ಮ ವಾಹನಗಳ ಮೇಲೆ ಹೀಗೆ ಬರೆಸಿಕೊಂಡಿದ್ದಲ್ಲಿ ಅವರ ವಿರುದ್ಧ 2022 ರ ಸರ್ಕಾರದ ಸುತ್ತೋಲೆಯನ್ವಯ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅವರು ಹೇಳಿದ್ದಾರೆ.