ಪುತ್ತೂರು: ದಾರಿ ಕೇಳಲು ಬಂದು ಕೈಯಲ್ಲಿದ್ದ ಚಿನ್ನದ ಉಂಗುರವನ್ನು ಎಗರಿಸಿದ ಘಟನೆ ರಾಗಿದಕುಮೇರ್ ಬಳಿಯ ಆಂದ್ರಟ್ಟದಲ್ಲಿ ನಡೆದಿದೆ.
ರಾತ್ರಿ ಸಮಯದಲ್ಲಿ ಬೈಕಿನಲ್ಲಿ ಬಂದ ವ್ಯಕ್ತಿಯೊಬ್ಬ ಮನೆಯವರಲ್ಲಿ ದಾರಿ ಕೇಳಿದ್ದಾನೆ. ಅವರು ದಾರಿ ಹೇಳುವ ಸಂದರ್ಭದಲ್ಲಿ ಅವರ ಕೈಯಲ್ಲಿದ್ದ ಚಿನ್ನದ ಉಂಗುರವನ್ನು ಕಸಿದು ಪರಾರಿಯಾಗಿದ್ದಾನೆ.
ಪುತ್ತೂರು ನಗರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಈ ಭಾಗದಲ್ಲಿ ಇತ್ತೀಚಿನ ಕೆಲವು ದಿನಗಳಲ್ಲಿ ದಾರಿ ಕೇಳಿಕೊಂಡು ಬಂದು ಕಳ್ಳತನಕ್ಕೆ ಪ್ರಯತ್ನ ನಡೆಸುತ್ತಿರುವ ಘಟನೆಗಳು ನಡೆದಿದ್ದವು.