ಶಿವಮೊಗ್ಗ: ಲವ್ ಜಿಹಾದ್ ಎನ್ನುವುದು ಜನಸಂಖ್ಯೆ ಸೇರಿಸಲು ಕಂಡುಕೊಂಡ ಮಾರ್ಗ. ಇದೊಂದು ಷಡ್ಯಂತ್ರವಾಗಿದ್ದು, ಇದರಲ್ಲಿ ಪ್ರೀತಿ ಎನ್ನುವುದು ಇಲ್ಲ. ಇದನ್ನು ಜನರಿಗೆ ತಿಳಿಸಲು ‘ಲವ್ ಜಿಹಾದ್’ ಪುಸ್ತಕದ ಬಿಡುಗಡೆಗೆ ನನಗೆ ತಡೆ ಒಡ್ಡಿ, ಶಿವಮೊಗ್ಗಕ್ಕೆ ಬಾರದಂತೆ ನಿಷೇಧ ಹೇರಲಾಯ್ತು. ಈಗ ನಾನು ಹೈಕೋರ್ಟಿನ ಅನುಮತಿ ಪಡೆದು ಇಲ್ಲಿಗೆ ಬಂದಿದ್ದು, ಲವ್ ಜಿಹಾದ್ ಪುಸ್ತಕವನ್ನು ಎಲ್ಲಾ ಕಡೆಗಳಲ್ಲೂ ಬಿಡುಗಡೆ ಮಾಡುತ್ತೇನೆ ಎಂದು ಶ್ರೀ ರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.
ಮುಸಲ್ಮಾನರು ತಮ್ಮ ಹೆಸರು ಬದಲಾಯಿಸಿಕೊಂಡು ಏಕೆ ಪ್ರೀತಿ ಮಾಡುತ್ತೀರಿ? 88% ಗಳಷ್ಟು ಲವ್ ಜಿಹಾದ್ ಕೃತ್ಯಗಳಲ್ಲಿ ಹೆಸರು ಬದಲಾಯಿಸಿ ಕೊ ಡೇ ಮುಸ್ಲಿಂರು ಪ್ರೀತಿ ಮಾಡುತ್ತಾರೆ. ಇದು ಪ್ರೀತಿಯಲ್ಲ, ಹೆಣ್ಣು ಮಕ್ಕಳನ್ನು ಷೋಷಣೆ ಮಾಡುವ ಜಾಲ ಎಂದು ಅವರು ತಿಳಿಸಿದ್ದಾರೆ. ಹಿಂದೂಗಳ ನೈತಿಕತೆ ಕುಸಿಯಲು ಲವ್ ಜಿಹಾದ್ ಮೂಲಕ ಹೆಣ್ಮಕ್ಕಳನ್ನು ಮತಾಂತರ ಮಾಡಲಾಗುತ್ತದೆ. ಆ ಬಳಿಕ ಭಯೋತ್ಪಾದನೆ, ವೇಶ್ಯಾವಾಟಿಕೆ, ಕಳ್ಳತನ ಮೊದಲಾದವುಗಳಿಗೆ ಬಳಕೆ ಮಾಡುತ್ತಾರೆ. ದೇಶದಲ್ಲಿ ಸುಮಾರು 13 ಲಕ್ಷ ಲವ್ ಜಿಹಾದ್ ಪ್ರಕರಣಗಳು ದಾಖಲಾಗಿದ್ದು, ಇವರು ಹಿಂದೂ ಯುವತಿಯರಿಗೆ ಏನು ಬೇಕಾದರೂ ಮಾಡಬಹುದು ಎಂದು ತಿಳಿದುಕೊಂಡ ಹೀಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಓಟ್‌ಬ್ಯಾಂಕ್‌ಗಾಗಿ ಮುಸ್ಲಿಂರನ್ನು ಬ್ರದರ್ಸ್ ಎನ್ನುತ್ತಾ ತುಷ್ಟೀಕರಣ ಮಾಡುತ್ತಿದೆ. ಹಿಂದೂಗಳ ಸ್ವಯಂ ರಕ್ಷಣೆಗಾಗಿ ರಾಜ್ಯದ ಸುಮಾರು ನೂರು ಸ್ಥಳಗಳಲ್ಲಿ ತ್ರಿಶೂಲ್ ದೀಕ್ಷಾ ಕಾರ್ಯಕ್ರಮ ಮಾಡುತ್ತೇವೆ. ಹಿಂದೂ ಹೆಣ್ಮಕ್ಕಳು ಧೈರ್ಯದಿಂದ ಓಡಾಡಲು ತ್ರಿಶೂಲ ಕೊಡಿಸುತ್ತೇವೆ ಎಂದು ಹೇಳಿದ್ದಾರೆ.
ಹಿಂದೂ ಯುವಕರು ಮುಸ್ಲಿಂ ಯುವತಿಯರನ್ನು ಪ್ರೀತಿ ಮಾಡಿದರೆ ತಪ್ಪಲ್ಲ. ಏಕೆಂದರೆ ಹಿಂದೂ ಹುಡುಗರು ದೇಶದ್ರೋಹ ಎಸಗುವುದಿಲ್ಲ. ನಮ್ಮವರು ನಿಜವಾದ ಪ್ರೀತಿ ಮಾಡುತ್ತಾರೆಯೇ ಹೊರತು ಸೂಟ್‌ಕೇಸಿನಲ್ಲಿ ತುಂಬುವಂತಹವರಲ್ಲ. ಆದ್ದರಿಂದ ಚಕ್ರವರ್ತಿ ಸೂಲಿಬೆಲೆ ಅವರು ಈ ಹಿಂದೆ ಹೇಳಿದ್ದ ಮಾತುಗಳನ್ನು ತಾವು ಬೆಂಬಲಿಸುವುದಾಗಿ ತಿಳಿಸಿದ್ದಾರೆ.
ಇನ್ನು ನನ್ನ ಪುಸ್ತಕದಲ್ಲೇನಿದೆ ಎಂದು ಓದದ ಪೊಲೀಸರು ನನ್ನನ್ನು ಇಲ್ಲಿಗೆ ಬರದಂತೆ ತಡೆದರು. ಅದರಲ್ಲಿ ಏನಿದೆ ಎಂದು ಅವರಿಗೇನು ಗೊತ್ತಿದೆ? ಎಂದು ಪ್ರಶ್ನಿಸಿದ್ದಾರೆ. ನಾನೇನು ರೇಪಿಸ್ಟಾ? ದರೋಡೆಕೋರನಾ? ಎಂದು ಪೊಲೀಸರನ್ನು ಪ್ರಶ್ನೆ ಮಾಡಿದ್ದಾರೆ. ಹಾಗೆಯೇ ನಿಮ್ಮ ಮನೆಯಲ್ಲೂ ಹೆಣ್ಣು ಮಕ್ಕಳಿದ್ದಾರೆ ನೆನಪಿರಲಿ ಎಂದು ಎಚ್ಚರಿಸಿದ್ದಾರೆ.