ದೆಹಲಿ: ನಮ್ಮ ದೇಶವನ್ನು ಅಧಿಕೃತವಾಗಿ ‘ಭಾರತ’ ಎಂದು ಕರೆಯೋಣ, ಇಂಡಿಯಾ ಎಂದು ಅಲ್ಲ ಎಂದು ಆರ್‌ಎಸ್‌ಎಸ್‌ನ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಹೇಳಿದ್ದಾರೆ.
ಅವರು ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ನಮ್ಮ ದೇಶದ ಹೆಸರು ‘ಭಾರತ’. ಅದನ್ನು ಭಾರತ ಎಂದೇ ಕರೆಯಿರಿ. ಇಂಡಿಯಾ ಇಂಗ್ಲೀಷ್ ಹೆಸರಾಗಿದ್ದು, ಇದನ್ನು ಸಂವಿಧಾನದಲ್ಲಿ ಬದಲಾಯಿಸಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಮ್ಮ ದೇಶವನ್ನು ರಾಷ್ಟ್ರಪತಿ ಭವನ ಮತ್ತು ಜಿ-20 ಶೃಂಗಸಭೆಯ ಆಮಂತ್ರಣದಲ್ಲಿ ‘ಭಾರತ ಗಣರಾಜ್ಯ’ ಎಂದು ಮುದ್ರಣ ಮಾಡಿದ್ದು, ಈ ಅಂಶ ಶ್ಲಾಘನೀಯ. ನಾವು ಭಾರತೀಯರು ಸಹ ನಮ್ಮ ದೇಶವನ್ನು ‘ಭಾರತ’ ಎಂದೇ ಕರೆಯಬೇಕು ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ನಮ್ಮ ದೇಶದ ಸಂವಿಧಾನವನ್ನು ಹಿಂದಿ ಭಾಷೆಯಲ್ಲಿ ‘ಭಾರತ್ ಕಾ ಸಂವಿಧಾನ್’ ಎನ್ನಲಾಗುತ್ತದೆ. ರಿಸರ್ವ್ ಬ್ಯಾಂಕ್ ಅನ್ನು ‘ಭಾರತೀಯ ರಿಸರ್ವ್ ಬ್ಯಾಂಕ್ ಎಂದು ಕರೆಯಲಾಗುತ್ತದೆ. ನಾವು ಸಹ ನಮ್ಮ ದೇಶವನ್ನು ಇದೇ ರೀತಿಯಲ್ಲಿ ಭಾರತ ಎಂದು ಹೇಳುವತ್ತ ಯೋಚನೆ ಮಾಡಬೇಕು ಎಂದು ಅವರು ನುಡಿದಿದ್ದಾರೆ.