ಲಕ್ನೋ: ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭಮೇಳವನ್ನು ಮೃತ್ಯು ಕುಂಭ ಎಂದು ಹೇಳಿದ್ದ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅವರು ತಿರುಗೇಟು ನೀಡಿದ್ದಾರೆ. ಮಹಾಕುಂಭವನ್ನು ಮೃತ್ಯುಕುಂಭ ಎಂದು ಕರೆದಿದ್ದವರಿಗೆ ಹೋಳಿ ಸಂದರ್ಭದಲ್ಲಿ ಹಿಂದೂಗಳ ಮೇಲಿನ ದಾಳಿ ತಡೆಯಲು ಸಾಧ್ಯವಾಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಶದೆಲ್ಲೆಡೆಯಿಂದ ಜನರು ಮಹಾಕುಂಭಕ್ಕೆ ಜನರು ಬಂದರು. ಇಲ್ಲಿನ ಇಪ್ಪತೈದು ಕೋಟಿ ಜನರು ಇದ್ದರು. ಆದರೂ ಕುಂಭಮೇಳ ಶಾಂತಿಯುತವಾಗಿ ನಡೆದಿದೆ. ಆದರೆ ಪಶ್ಚಿಮ ಬಂಗಾಳದಲ್ಲಿ ಹೋಳಿ ಸಮಯದಲ್ಲಿ ನಡೆದ ದಾಳಿಯನ್ನು ತಡೆಯಲು ಅಲ್ಲಿನ ಮುಖ್ಯಮಂತ್ರಿಗೆ ಸಾಧ್ಯವಾಗಲಿಲ್ಲ ಎಂದು ಅವರು ಟೀಕಿಸಿದ್ದಾರೆ. ಅಂತಹವರು ಪ್ರಯಾಗ್‌ರಾಜ್‌ನ ಮಹಾಕುಂಭವನ್ನು ಮೃತ್ಯುಕುಂಭ ಎಂದು ಟೀಕಿಸಿದ್ದರು. ಇದು ಮೃತ್ಯು ಅಲ್ಲ ಮೃತ್ಯುಂಜಯ ಎಂದು ನಾವು ನಂಬಿದ್ದೇವೆ ಎಂದು ಅವರು ತಿಳಿಸಿದ್ದಾರೆ.