ಬೆಂಗಳೂರು: ವೃದ್ಧ ಅತ್ತೆ ಮಾವನ ಮೇಲೆ ಹಲ್ಲೆ ನಡೆಸಿದ್ದ ನಗರದ ಸರ್ಕಾರಿ ಆಸ್ಪತ್ರೆಯ ವೈದ್ಯೆ ಪ್ರಿಯದರ್ಶಿನಿ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ತನ್ನ ಅತ್ತೆ ಮಾವ ವಾಸವಾಗಿದ್ದ ಮನೆಗೆ ತನ್ನ ಮಕ್ಕಳೊಂದಿಗೆ ನುಗ್ಗಿ ಸೊಸೆ ಡಾ. ಪ್ರಿಯದರ್ಶಿನಿ ಹಲ್ಲೆ ನಡೆಸಿದ್ದಾಗಿ ಆಕೆಯ ಮಾವ ಅನ್ನಪೂರ್ಣೇಶ್ವರಿ ನಗರದ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದಕ್ಕೆ ಪ್ರತಿಯಾಗಿ ಪೊಲೀಸರ ವಿಚಾರಣೆಗೆ ಹಾಜರಾಗಿದ್ದು, ಗಲಾಟೆಗೆ ಏನು ಕಾರಣ ಎನ್ನುವುದನ್ನು ತಿಳಿಸಿದ್ದಾರೆ. ನಮ್ಮ ಪುತ್ರ ಹತ್ತನೇ ತರಗತಿ ಓದುತ್ತಿದ್ದಾನೆ. ಆತನ ಮುಂದಿನ ಭವಿಷ್ಯದ ಬಗ್ಗೆ ಚರ್ಚೆ ಮಾಡಲು ತಾನು ತನ್ನ ಅತ್ತೆ ಮಾವನೊಂದಿಗೆ ವಾಸವಿದ್ದ ತನ್ನ ಗಂಡನ ಮನೆಗೆ ಬಂದಿದ್ದೆ. ಈ ಸಂದರ್ಭದಲ್ಲಿ ನನ್ನ ಕೈಯಲ್ಲಿದ್ದ ಸಣ್ಣ ಮಗುವನ್ನು ಕಂಡು ಅತ್ತೆ ಮತ್ತು ಮಾವ ಅನುಮಾನಿಸಿ, ಕೊಂಕು ಮಾತನಾಡಿ ಜಗಳ ಆರಂಭಿಸಿದ್ದಾರೆ. ಬಳಿಕ ಜಗಳ ವಿಕೋಪಕ್ಕೆ ಹೋಯಿತು ಎಂದು ವಿವರಣೆ ನೀಡಿದ್ದಾರೆ. ಎರಡೂ ಕಡೆಯ ತರ್ಕ ಆಲಿಸಿದ ಪೊಲೀಸರು ಕೌನ್ಸಲಿಂಗ್‌ಗೆ ಹೋಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ತಿಳಿಸಿದ್ದಾರೆ.