ಬಳ್ಳಾರಿ: ಪ್ರಪಂಚವನ್ನು ಇಸ್ಲಾಂಮಯವಾಗಿ ನೋಡುವ ಗುರಿ ಇರಿಸಿಕೊಂಡು ಬೇರೆ ಬೇರೆ ರೀತಿಯಲ್ಲಿ ಪ್ರಯತ್ನ ನಡೆಯುತ್ತಿದೆ. ಅಂತಹ ಯತ್ನಗಳಲ್ಲಿ ಲವ್ ಜಿಹಾದ್ ಸಹ ಒಂದು ಎಂದು ಶ್ರೀರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಅಭಿಪ್ರಾಯ ವ್ಯಕ್ತಪಡಿದ್ದಾರೆ. ಅವರ ಸಂಖ್ಯೆ ಹೆಚ್ಚಿಸಲು ಪ್ರೀತಿ ಪ್ರೇಮದ ಹೆಸರಿನಲ್ಲಿ ಕಾರ್ಯ ನಿರ್ವಹಿಸುವ ವ್ಯವಸ್ಥಿತ ಜಾಲ ಲವ್ ಜಿಹಾದ್ ಆಗಿದೆ. ಈ ಸಂಬಂಧ ದೇಶದಲ್ಲಿ ಅದೆಷ್ಟೋ ಲಕ್ಷ ಪ್ರಕರಣಗೊಲು ದಾಖಲಾಗಿವೆ. ಲವ್ ಜಿಹಾದ್‌ಗೆ ಬಲಿಯಾದ 4700 ಮಹಿಳೆಯರನ್ನು ಮರಳಿ ಮಾತೃ ಧರ್ಮಕ್ಕೆ ತರುವ ಕೆಲಸವನ್ನು ಶ್ರೀರಾಮ ಸೇನೆ ಮಾಡಿದೆ. ಮೂರು ರಾಜ್ಯ ಗಳಲ್ಲಿ ಲವ್ ಜಿಹಾದ್ ವಿರುದ್ಧ ಕಾನೂನು ರಚನೆಯಾಗಿದೆ. ಮಹಿಳೆಯರಿಗೆ ಲವ್ ಜಿಹಾದ್ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ ಪುಸ್ತಕದ ಎರಡನೇ ಆವೃತ್ತಿ ಬಿಡುಗಡೆ ಮಾಡಲಾಗಿದೆ. ಹಿಂದೂ ಹೆಣ್ಮಕ್ಕಳ ರಕ್ಷಣೆಗಾಗಿ ನೂರು ಭಾಗಗಳಲ್ಲಿ ತ್ರಿಶೂಲ ದೀಕ್ಷೆ ನಡೆಸಲಾಗುತ್ತದೆ. ಲವ್ ಜಿಹಾದ್ ಸಂಬಂಧ ಹೆತ್ತವರು ಪೋಷಕರಲ್ಲಿ ಜಾಗೃತಿ ತುಂಬುವ ನಿಟ್ಟಿನಲ್ಲಿ ಕಾರ್ಯಕ್ರಮ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ. ಯುಗಾದಿ ಮತ್ತು ರಾಮನವಮಿ ಹಬ್ಬಗಳನ್ನು ಹಲಾಲ್ ಮುಕ್ತ ಹಬ್ಬಗಳಾಗಿ ಆಚರಿಸಬೇಕು. ಅನ್ಯ ಮತೀಯರ ಜೊತೆ ಗೋ ಹಂತಕರು, ಕಳ್ಳರ ಜೊತೆಗೆ ವ್ಯಾಪಾರ ನಿಲ್ಲಿಸಬೇಕು. ಪಾಕಿಸ್ತಾನ ಪ್ರೇಮಿಗಳೂ ನಮ್ಮ ದೇಶದಲ್ಲಿ ವ್ಯಾಪಾರ ನಡೆಸುತ್ತಿದ್ದು, ಅಂತಹವರ ಜೊತೆಗೆ ವಹಿವಾಟು ಸಲ್ಲ ಎಂದು ಮುತಾಲಿಕ್ ತಿಳಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ವಿರುದ್ಧವೂ ಹರಿಹಾಯ್ದ ಅವರು ಅವರ ತುಷ್ಟೀಕರಣ ನೀತಿಯಿಂದ ವಕ್ಫ್ ಬೋರ್ಡ್ ಬಳಸಿ ರಾಜ್ಯದ ರೈತರ ಭೂಮಿ ಕಸಿ ಯುವ ಕೆಲಸ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷದ ನಾಯಕರ ಮನೆಯಲ್ಲೂ ಲವ್ ಜಿಹಾದ್ ನಡೆಯುತ್ತಿದ್ದು, ಇದು ಅವರ ಬುಡಕ್ಕೆ ಬೆಂಕಿ ಹಚ್ಚಲಿದೆ. ಬಜೆಟಿನಲ್ಲೂ ಮುಸ್ಲಿಂ ಗುತ್ತಿಗೆದಾರರಿಗೆ ಮೀಸಲಾತಿ ನೀಡಲಾಗಿದ್ದು ಈ ಸಂಬಂಧ ಶ್ರೀರಾಮ ಸೇನೆಯ ವತಿಯಿಂದ ಹೈಕೋರ್ಟ್‌ನಲ್ಲಿ ಪಿಐಎಲ್ ಹಾಕಲಾಗುವುದಾಗಿ ಅವರು ಹೇಳಿದ್ದಾರೆ.