ಮಂಗಳೂರು: ಕೆಲ ದಿನಗಳ ಹಿಂದೆ ಹಿಂದೂ ನಾಯಕ ಚಕ್ರವರ್ತಿ ಸೂಲಿಬೆಲೆ ಅವರು ‘ಅನ್ಯ ಧರ್ಮದ ಹುಡುಗಿಯರನ್ನು ಮದುವೆಯಾಗಿ’ ಎಂದು ಹಿಂದೂ ಯುವಕರಿಗೆ ಕರೆ ನೀಡಿದ್ದ ವಿಚಾರಕ್ಕೆ ಸಂಬಂಧಿಸಿದ ಹಾಗೆ ಅವರ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಧಾರ್ಮಿಕ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ ಸೂಲಿಬೆಲೆ ಅವರು, ಹಿಂದೂ ಯುವಕರು ಅನ್ಯ ಮತದ ಯುವತಿಯರನ್ನು ಮದುವೆಯಾಗುವತ್ತ ಮನ ಮಾಡಬೇಕು ಎಂದು ಹೇಳಿದ್ದು ಇದು ಮುಸ್ಲಿಂ ಸಂಘಟನೆಗಳು, ಕಾಂಗ್ರೆಸ್ ಪಕ್ಷಗಳಿಂದ ಆಕ್ಷೇಪಕ್ಕೂ ಒಳಗಾಗಿತ್ತು. ಎಸ್‌ಡಿಪಿಐ ಉಳ್ಳಾಲ ಮತ್ತು ಬಂಟ್ವಾಳಗಳಲ್ಲಿ ಸೂಲಿಬೆಲೆ ಅವರ ವಿರುದ್ಧ ದೂರು ನೀಡಿತ್ತು . ಇದೀಗ ಕಾಂಗ್ರೆಸ್ ನಾಯಕ ರಶೀದ್ ನೇತೃತ್ವದಲ್ಲಿ ಉಳ್ಳಾಲ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದು, ಉಳ್ಳಾಲ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.