ದೆಹಲಿ: ಭಾರತದ ವಿರುದ್ಧ ಉಗ್ರ ಕೃತ್ಯಗಳನ್ನು ಎಸಗಿದ, ಕಾನೂನು ಬಾಹಿರ ಕೆಲಸಗಳನ್ನು ಮಾಡಿ ನಿಷೇಧ ಎದುರಿಸುತ್ತಿರುವ 67 ಉಗ್ರ ಸಂಘಟನೆಗಳ ಪಟ್ಟಿಯನ್ನು ಕೇಂದ್ರ ಗೃಹ ಸಚಿವಾಲಯ ನವೀಕರಿಸಿ ಪ್ರಕಟಿಸಿದೆ. ಈ ಪಟ್ಟಿಯಲ್ಲಿ 45 ಸಂಘಟನೆಗಳು ಯುಎಪಿಎ ಸೆಕ್ಷನ್ 35 ರ ಅಡಿಯಲ್ಲಿ ಅಧಿಕೃತವಾಗಿ ಉಗ್ರ ಸಂಘಟನೆಗಳು ಎಂದು ವರ್ಗೀಕರಿಸಲ್ಪಟ್ಟವುಗಳಾಗಿದ್ದರೆ, ಉಳಿದ 22 ಉಗ್ರ ಸಂಘಟನೆಗಳು ಯುಎಪಿಎ ಸೆಕ್ಷನ್ 35(1) ರ ಅಡಿಯಲ್ಲಿ ಕಾನೂನು ಬಾಹಿರ ಸಂಘಟನೆಗಳು ಎಂದು ಗುರುತಿಸಲ್ಪಟ್ಟವುಗಳಾಗಿವೆ. ಯುಎಪಿಎ ಅಡಿಯಲ್ಲಿ ಪಟ್ಟಿ ಮಾಡಲಾದ ಉಗ್ರ ಸಂಘಟನೆಗಳನ್ನು ಕೇಂದ್ರ ಗೃಹ ಸಚಿವಾಲಯ ಆಗಾಗ್ಗೆ ನವೀಕರಿಸುತ್ತದೆ. ಜೊತೆಗೆ ಈ ಪಟ್ಟಿಯಲ್ಲಿ ಸೇರಿರುವ ಸಂಘಟನೆಗಳ ಆಸ್ತಿ ಮಟ್ಟಗೋಲು ಹಾಕುವುದು, ಕಾನೂನು ಬಾಹಿರ ಚಟುವಟಿಕೆ ನಡೆಸುವವ ಈ ಸಂಘಟನೆಗಳ ಸದಸ್ಯರನ್ನು ಬಂಧಿಸುವುದು ಸೇರಿದಂತೆ ಇನ್ನೂ ಅನೇಕ ರೀತಿಯ ಕಾನೂನು ಕ್ರಮಗಳನ್ನು ಈ ಸಂಘಟನೆಗಳ ವಿರುದ್ಧ ತೆಗೆದುಕೊಳ್ಳಲಾಗುತ್ತದೆ.