ದಾಂಡೇಲಿ: ಟ್ರಾಕ್ಟರ್‌ಗೆ ಕಟ್ಟಿ ಮೃತ ಆಕಳನ್ನು ಎಳೆದೊಯ್ದ ಘಟನೆ ಕೋಗಿಲಬನದಲ್ಲಿ ನಡೆದಿದ್ದು, ಈ ಸಂಬಂಧ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಕಳಿನ ಶವವನ್ನು ಹಗ್ಗದಲ್ಲಿ ಕಟ್ಟಿ ಎಳೆದು ತೆಗೆದುಕೊಂಡ ಹೋಗಿರುವ ಬಗ್ಗೆ ಸುದ್ದಿ ಪ್ರಸಾರವಾಗಿತ್ತು. ಈ ಬಗ್ಗೆ ಗ್ರಾಮ ಪಂಚಾಯತ್ ಪಿಡಿಒ ಸುರೇಶ್ ಮಡಿವಾಳ ಎಂಬವರು ಪೊಲೀಸರಿಗೆ ದೂರು ನೀಡಿರುವುದಾಗಿದೆ. ಆರೋಪಿಗಳಾದ ಅಷ್ಪಾಕ್ ರಹೀಂ ಮುಲ್ಲಾ ಶೇಖ, ಸಾಧಿಕ ದಸ್ತಗೀರ ಮುಲ್ಲಾ, ಇಬ್ರಾಹಿಂ ಕೋಳೋರು ವಿರುದ್ಧ ದೂರು ದಾಖಲಿಸಿರುವುದಾಗಿದೆ. ಅನಾರೋಗ್ಯದಿಂದ ಮೃತಪಟ್ಚ ಆಕಳನ್ನು ಟ್ರಾಕ್ಟರ್‌ಗೆ ಕಟ್ಟಿ ಎಳೆದೊಯ್ದಿದ್ದಾರೆ. ಇದು ವಾತಾವರಣದ ಮೇಲೂ ದುಷ್ಪರಿಣಾಮ ಬೀರುವಂತೆ ಇದನ್ನು ಕೋಗಿಲಬನ ಗ್ರಾಮದ ಸಮೀಪದ ಅರಣ್ಯದಲ್ಲಿ ವರ್ಜಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.