ದಾವಣಗೆರೆ: ವರದಕ್ಷಿಣೆಯ ದಾಹದಿಂದ ಪತಿಯೊಬ್ಬ ಪತ್ನಿಯ ಕತ್ತಿಗೆ ನೇಣು ಹಾಕಿ, ಉಸಿರುಗಟ್ಟಿಸಿ ಕೊಲೆಗೈದ ಘಟನೆ ಹರಳಹಳ್ಳಿಯಲ್ಲಿ ನಡೆದಿದೆ. ನೇತ್ರಾವತಿ(26) ಎಂಬವರೇ ಗಂಡನ ಅಟ್ಟಹಾಸಕ್ಕೆ ಬಲಿಯಾದ ದುರ್ದೈವಿ. ಆರೋಪಿ ದೇವೇಂದ್ರಪ್ಪ ನೇತ್ರಾವತಿಯ ಜೊತೆಗೆ ಕಳೆದ ಏಳೂವರೆ ವರ್ಷಗಳ ಹಿಂದೆ ಮದುವೆಯಾಗಿದ್ದ. ಈ ಸಂದರ್ಭದಲ್ಲಿ ಆತನಿಗೆ 10 ತೊಲ ಬಂಗಾರ, 1 ಲಕ್ಷ ರೂ. ವರದಕ್ಷಿಣೆ ನೀಡಲಾಗಿತ್ತು. ಆದರೂ ದೇವೇಂದ್ರಪ್ಪನ ಕುಟುಂಬದವರು ಆಕೆಗೆ ಪದೇಪದೇ ವರದಕ್ಷೆಣೆಗಾಗಿ ಕಿರುಕುಳ ನೀಡುತ್ತಿದ್ದರು. ಆದರೆ ಈ ಬಾರಿ ವರದಕ್ಷಿಣೆಗಾಗಿ ನೇತ್ರಾವತಿಯನ್ನೇ ಹತ್ಯೆ ಮಾಡಿದ್ದಾರೆ. ಈ ಸಂಬಂಧ ನೇತ್ರಾವತಿ ಕುಟುಂಬಸ್ಥರು ದೇವೇಂದ್ರಪ್ಪ ಮತ್ತು ಆತನ ಕುಟುಂಬದ ವಿರುದ್ಧ ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ. ಮೃತ ನೇತ್ರಾವತಿಗೆ ಒಂದು ಹೆಣ್ಣು, ಒಂದು ಗಂಡು ಮಕ್ಕಳಿದ್ದಾರೆ. ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡುವಂತೆ ಮತ್ತು ಮಕ್ಕಳಿಗೆ ಸೂಕ್ತ ಜೀವನಾಂಶ ನೀಡುವಂತೆ ಆಗ್ರಹಿಸಿ ನೇತ್ರಾವತಿ ಕುಟುಂಬಸ್ಥರು ದಾವಣಗೆರೆ ಜಿಲ್ಲಾಸ್ಪತ್ರೆಯ ಹತ್ತಿರ ಪ್ರತಿಭಟನೆ ನಡೆಸಿದ್ದಾರೆ.