ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಪೊಲೀಸ್ ವಶದಲ್ಲಿರುವ ನಟಿ ರನ್ಯಾ ರಾವ್ ವಿರುದ್ಧ ಅಸಭ್ಯ ಪದ ಪ್ರಯೋಗ ಮಾಡಿರುವ ಆರೋಪದಲ್ಲಿ ಶಾಸಕ ಬಸವನಗೌಡ ಯತ್ನಾಳ್ ವಿರುದ್ಧ ಹೈಗ್ರೌಂಡ್ ಪೊಲೀಸ್ ಸ್ಟೇಷನ್‌ನಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ವೈದ್ಯೆ ಅಕುಲಾ ಅನುರಾಧ ಎಂಬವರು ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ. ಕೆಲ ದಿನಗಳ ಹಿಂದೆ ಯತ್ನಾಳ್ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ‘ರನ್ಯಾ ಜೊತೆಗೆ ಯಾರು ಸಂಬಂಧ ಹೊಂದಿದ್ದಾರೆ, ಆಕೆ ಎಲ್ಲಿಂದ ಚಿನ್ನ ತಂದದ್ದು, ಆಕೆ ಎಲ್ಲೆಲ್ಲಾ ಇರಿಸಿಕೊಂಡು ಚಿನ್ನ ತಂದಿದ್ದಾರೆ’ ಎಂದು ಅಸಭ್ಯ, ಅಶ್ಲೀಲ ಪದಗಳನ್ನು ಉಪಯೋಗಿಸಿ ಮಾತನಾಡಿದ್ದರು. ಈ ಸಂಬಂಧ ಡಾ. ಅಕುಲಾ ಪ್ರಕರಣ ದಾಖಲು ಮಾಡಿರುವುದಾಗಿದೆ. ಯತ್ನಾಳ್ ರನ್ಯಾ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಬಹುಭಾಷಾ ನಟಿಯ ಗೌರವ, ಚಾರಿತ್ರ್ಯಹರಣ ಮಾಡುವ ರೀತಿಯಲ್ಲಿ ಹೇಳಿ ನೀಡಿದ್ದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ.