ಕಲ್ಬುರ್ಗಿ: ಸಮಯ ಕಳೆಯಲು ಠಾಣೆಯಲ್ಲೇ ಜೂಜಾಡಿದ ವಾಡಿ ಪೊಲೀಸ್ ಠಾಣೆಯ ಐವರು ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ. ಎಎಸ್‌ಐ ಮೆಹಹೂಬ್ ಮಿಯಾ, ಹೆಡ್‌ಕಾನ್ಸ್ಟೆಬಲ್‌ಗಳಾದ ನಾಗರಾಜ್, ಸಾಯಿಬಣ್ಣ, ಇಮಾಮ್ ಕಾನ್ಸ್‌ಟೆಬಲ್‌ಗಳಾದ ನಾಗಭೂಷಣ್ ಅವರನ್ನು ಅಮಾನತು ಮಾಡಿರುವುದಾಗಿದೆ. ಈ ಆದೇಶವನ್ನು ಕಲ್ಬುರ್ಗಿ ಎಸ್‌ಪಿ ಅಡ್ಡೂರು ಶ್ರೀನಿವಾಸುಲು ಹೊರಡಿಸಿರುವುದಾಗಿದೆ. ಹಾಗೆಯೇ ಠಾಣೆಯ ಪಿಎಸ್‌ಐ ತಿರುಮಲೇಶ್ ಅವರಿಗೂ ನೊಟೀಸು ನೀಡಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಣಗಳನ್ನು ನೀಡುವಂತೆ ಸೂಚಿಸಲಾಗಿದೆ.