ಸುಳ್ಯ: ಜೋಡಿಯೊಂದು ಪ್ರೇಮ ವಿವಾಹವಾದ ಹಿನ್ನೆಲೆಯಲ್ಲಿ ಯುವತಿಯ ಕುಟುಂಬಸ್ಥರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಘಟನೆ ನಡೆದಿದೆ. ಮಂಗಳವಾರ ಎಣ್ಮೂರಿನ ಯುವಕ ಮತ್ತು ಯುವತಿ ರಿಜಿಸ್ಟ್ರರ್ಡ್ ವಿವಾಹವಾಗಿ, ಸುಳ್ಯದ ವಕೀಲರ ಕಚೇರಿಗೆ ಆಗಮಿಸಿದ್ದರು. ಈ ವಿಷಯ ತಿಳಿದ ಹುಡುಗಿಯ ಕುಟುಂಬಸ್ಥರು ಸಹ ಸುಳ್ಯಕ್ಕೆ ಬಂದು ಅಲ್ಲಿ ವಿಚಾರಣೆ ನಡೆಸಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ನವವಿವಾಹಿತರು ಸುಳ್ಯ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಅಲ್ಲಿಂದ ಸುಳ್ಯ ಪೊಲೀಸರು ಸಿಬ್ಬಂದಿ ಜೊತೆಯಲ್ಲಿ ಅವರನ್ನು ಬೆಳ್ಳಾರೆ ಪೋಲೀಸ್ ಠಾಣೆಗೆ ತಲುಪಿಸಿದ ಘಟನೆ ನಡೆದಿದೆ.