ಬಂಟ್ವಾಳ: ಸಾರ್ವಜನಿಕ ಪ್ರದೇಶದಲ್ಲಿ ಜೂಜಾಡುತ್ತಿದ್ದ ಇಬ್ಬರನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಿ.ಸಿ. ರೋಡಿನ ಸಮೀಪದ ಕೈಕಂಬದಲ್ಲಿ ಆರೋಪಿಗಳಾದ ನಾವೂರ ನಿವಾಸಿ ಸುರೇಶ್ ಮತ್ತು ಮಿತ್ತಬೈಲು ನಿವಾಸಿ ಭಾಸ್ಕರ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಖಾಸಗಿ ಕಟ್ಟಡವೊಂದರಲ್ಲಿ ಮಟ್ಕಾ ಆಟಕ್ಕೆ ತಯಾರಿ ನಡೆಸುತ್ತಿದ್ದ ಸಮಯದಲ್ಲಿ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಬಂಧಿತರಿಂದ 3,500ರೂ., ಮಟ್ಕಾ ಎಲೆಗಳು ಮತ್ತು ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.