ವಿಟ್ಲ: ಒಂಟಿ ಮಹಿಳೆ ಕಾರ್ಯಕಾರ್ಯನಿರ್ವಹಿಸುತ್ತಿದ್ದ ಬಟ್ಟೆ ಅಂಗಡಿಯಿಂದ ಬಟ್ಟೆಗಳನ್ನು ದೋಚಿದ ಆರೋಪಿಗಳಲ್ಲಿ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸ್ವಿಫ್ಟ್ ಕಾರಿನಲ್ಲಿ ಬಂದು ಅಂಗಡಿಯೊಳಗೆ ಏಕಾಏಕಿ ಪ್ರವೇಶಿಸಿ, ಅಲ್ಲಿಂದ ಬಟ್ಟೆ ಮತ್ತು ಇನ್ನಿತರ ವಸ್ತುಗಳನ್ನು ದೋಚಿದ ಆರೋಪಿ ನವೀನ್ ಆಚಾರಿ ಬಗಂಬಿಲ ಎನ್ನುವವನನ್ನು ವಶಕ್ಕೆ ಪಡೆದಿರುವ ಪೊಲೀಸರು ಆತನಿಂದ ದೋಚಲ್ಪಟ್ಟ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಆ ವಸ್ತುಗಳನ್ನು ಅಂಗಡಿಯ ಮಾಲ್ಹಕರಿಗೆ ಹಿಂದಿರುಗಿಸಿದ್ದಾರೆ. ಆರೋಪಿ ನವೀನ್ ಕೋಟೆಕಾರ್ ಪಟ್ಟಣ ಪಂಚಾಯತ್‌ನ ನಾಮ ನಿರ್ದೇಶಿತ ಸದಸ್ಯ. ಇನ್ನು ಈ ಕೃತ್ಯದಲ್ಲಿ ಭಾಗವಹಿಸಿದ ಇನ್ನು ಮೂವರು ಆರೋಪಿಗಳಿಗೆ ಪೊಲೀಸ್ ಠಾಣೆಗೆ ಹಾಜರಾಗುವಂತೆ ಎಚ್ಚರಿಕೆ ನೀಡಲಾಗಿದೆ